ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಶನಿವಾರ, ಹಸ್ತ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:15 ರಿಂದ 10:15
ಗುಳಿಕಕಾಲ: ಬೆಳಗ್ಗೆ 6:02 ರಿಂದ 7:39
ಯಮಗಂಡಕಾಲ: ಮಧ್ಯಾಹ್ನ 2:03 ರಿಂದ 3:30
Advertisement
ಮೇಷ: ಮಕ್ಕಳಿಂದ ಗೌರವಕ್ಕೆ ಧಕ್ಕೆ, ಆರ್ಥಿಕ ಸಂಕಷ್ಟಗಳು, ಪ್ರೇಮ ವಿಚಾರದಲ್ಲಿ ಕೆಟ್ಟ ನಿರ್ಧಾರ, ಕೆಟ್ಟ ಆಲೋಚನೆ, ಸಾಲ ಬಾಧೆ, ಭವಿಷ್ಯದ ಬಗ್ಗೆ ಆತಂಕ, ದುಶ್ಚಟಗಳು ಅಧಿಕವಾಗುವುದು.
Advertisement
ವೃಷಭ: ಪಿತ್ರಾರ್ಜಿತ ಆಸ್ತಿ ತಗಾದೆ, ವಾಹನ-ವಸ್ತ್ರಾಭರಣ ಕಳವು ಸಾಧ್ಯತೆ, ಆರ್ಥಿಕ ಸಂಕಷ್ಟ, ಸಾಲ ದೊರೆಯುವುದಿಲ್ಲ, ಬುದ್ಧಿಹೀನ ವರ್ತನೆ, ದುಶ್ಚಟಗಳಿಗೆ ಬಲಿಯಾಗುವಿರಿ.
Advertisement
ಮಿಥುನ: ಕುಟುಂಬ ಸಮೇತ ಪ್ರಯಾಣ, ಮಕ್ಕಳಿಂದ ಅವಮಾನ, ಬಂಧುಗಳಿಂದ ಅಗೌರವ, ತಲೆ ತಗ್ಗಿಸುವ ಸಂಭವ, ಸ್ಥಿರಾಸ್ತಿ ವಿಚಾರದಲ್ಲಿ ಎಚ್ಚರಿಕೆ.
Advertisement
ಕಟಕ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಮಿತ್ರರ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ.
ಸಿಂಹ: ಸರ್ಕಾರಿ ಕೆಲಸಗಳಿಗಾಗಿ ಖರ್ಚು, ವಿಪರೀತ ಖರ್ಚು, ನೆರೆಹೊರೆಯವರಿಂದ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ತೊಂದರೆ, ಆತ್ಮಸಾಕ್ಷಿಗೆ ವಿರುದ್ಧ ವರ್ತಿಸುವಿರಿ.
ಕನ್ಯಾ: ತೀರ್ಥಕ್ಷೇತ್ರ ಪ್ರಯಾಣ, ಅಧಿಕ ಖರ್ಚು, ಮಿತ್ರರು ದೂರವಾಗುವರು, ಮಿತ್ರರಿಂದ ನಷ್ಟ, ಸ್ವಯಂಕೃತ್ಯಗಳಿಂದ ನಷ್ಟ, ಅತೀ ಬುದ್ಧಿವಂತಿಕೆಯಿಂದ ಸಂಕಷ್ಟ.
ತುಲಾ: ಗೌರವ ಪ್ರತಿಷ್ಠೆಗೆ ಧಕ್ಕೆ, ಉದ್ಯೋಗ ಬಡ್ತಿಯಲ್ಲಿ ಹಿನ್ನಡೆ, ಕೌಟುಂಬಿಕ ಜೀವನದಲ್ಲಿ ಏರುಪೇರು, ನಿಮ್ಮ ದೌರ್ಬಲ್ಯಗಳ ದುರುಪಯೋಗ, ಮಿತ್ರರೇ ಶತ್ರುವಾಗುವರು.
ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ಮಿತ್ರರಿಂದ ತೊಂದರೆ, ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ, ಅದೃಷ್ಟಗಳು ಕೈ ತಪ್ಪುವುದು, ಇಲ್ಲ ಸಲ್ಲದ ಅಪವಾದ, ಶತ್ರುಗಳಿಂದ ಆತ್ಮ ಸಂಕಟ.
ಧನಸ್ಸು: ತಂದೆಯನ್ನು ಶತ್ರುವಿನಂತೆ ಕಾಣುವಿರಿ, ದೂರ ಪ್ರಯಾಣ, ಶುಭ ಕಾರ್ಯಗಳಿಗೆ ಸಾಲ ಕೇಳುವಿರಿ, ಸಾಲ ಮಾಡುವ ಪರಿಸ್ಥಿತಿ, ಯಂತ್ರೋಪಕರಣಗಳಿಂದ ಸಮಸ್ಯೆ, ಮಹಿಳಾ ಶತ್ರುಗಳಿಂದ ಸಮಸ್ಯೆ, ಬಂಧುಗಳಿಂದ ತೊಂದರೆ.
ಮಕರ: ವಿಪರೀತ ಆತ್ಮಾಭಿಮಾನ, ದಾಂಪತ್ಯದಲ್ಲಿ ಸಂಶಯ-ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಮಕ್ಕಳ ವೈವಾಹಿಕ ಜೀವನದಲ್ಲಿ ಬದಲಾವಣೆ, ಮಾನಸಿಕ ಚಿಂತೆ.
ಕುಂಭ: ಸ್ಥಿರಾಸ್ತಿ-ವಾಹನ ಖರೀದಿಗೆ ತೊಂದರೆ, ಅಧಿಕಾರಿಗಳಿಂದ ಅನಗತ್ಯ ಸಮಸ್ಯೆ, ಅನಗತ್ಯ ಕಲಹ, ಭವಿಷ್ಯದ ಬಗ್ಗೆ ಆತಂಕ, ನದಿ, ಸಮುದ್ರ ಪ್ರದೇಶಗಳಲ್ಲಿ ಎಚ್ಚರಿಕೆ.
ಮೀನ: ಮಕ್ಕಳು ಶತ್ರುವಾಗುವರು, ಮಗಳಿಂದ ನಷ್ಟ, ಕೋರ್ಟ್-ಪೊಲೀಸ್ ಸ್ಟೇಷನ್‍ಗೆ ಅಲೆದಾಟ, ಸಂಗಾತಿಯ ಮೇಲೆ ಸಂಶಯ.