ಪಂಚಾಂಗ
ಶ್ರೀ ವಿಶ್ವಾವಸುನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಕಾರ್ತಿಕ ಮಾಸ, ಶುಕ್ಲ ಪಕ್ಷ,
ನವಮಿ / ದಶಮಿ,
ಶುಕ್ರವಾರ, ಧನಿಷ್ಠ ನಕ್ಷತ್ರ
ರಾಹುಕಾಲ: 10:39 ರಿಂದ 12:07
ಗುಳಿಕಕಾಲ: 07:43 ರಿಂದ 09:11
ಯಮಗಂಡಕಾಲ: 03:02 ರಿಂದ 04:30
ಮೇಷ: ಭೂಮಿ ವಾಹನಗಳಿಂದ ಅಧಿಕ ಲಾಭ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಅಧಿಕಾರಿಗಳಿಂದ ಅನಿರೀಕ್ಷಿತವಾಗಿ ಕಾಟ.
ವೃಷಭ: ಭೂಮಿ ವ್ಯವಹಾರಗಳಿಗೆ ಅನುಕೂಲ, ಕೆಲಸ ಕಾರ್ಯಗಳಿಗೆ ಅಡೆತಡೆ, ಉದ್ಯೋಗ ವ್ಯಾಪಾರದ ಒತ್ತಡ, ಅಧಿಕ ಖರ್ಚು.
ಮಿಥುನ: ತಂದೆಯಿಂದ ಧನಾಗಮನ, ಉದ್ಯೋಗನಿಮಿತ್ತ ಪ್ರಯಾಣ, ಆರೋಗ್ಯದಲ್ಲಿ ಏರುಪೇರು.
ಕಟಕ: ಸ್ವಯಂಕೃತ ಅಪರಾಧಿಗಳಾಗುವಿರಿ, ಬಂಧು ಬಾಂಧವರಿಂದ ತೊಂದರೆ, ಮೆಚ್ಚುಗೆಯ ಮಾತುಗಳಿಂದ ಕಾರ್ಯಜಯ.
ಸಿಂಹ: ಸಂಗಾತಿಗೋಸ್ಕರ ಅಧಿಕ ಖರ್ಚು, ಸ್ತ್ರೀಯರೊಂದಿಗೆ ಕಲಹ, ಮಾನಸಿಕವಾಗಿ ನೋವು.
ಕನ್ಯಾ: ಆಸ್ಪತ್ರೆಗೆ ದಾಖಲಾಗುವ ಸಂದರ್ಭ, ಸಾಲದ ಸಹಾಯ ಲಭಿಸುವುದು, ದಾಯಾದಿಗಳ ಕಿರಿಕಿರಿ ಮತ್ತು ನಿದ್ರಾಭಂಗ.
ತುಲಾ: ಉದ್ಯೋಗ ಸ್ಥಳದಲ್ಲಿ ಉತ್ತಮ ಹೆಸರು, ದೂರ ಪ್ರದೇಶಗಳಿಗೆ ತೆರಳುವ ಆಲೋಚನೆ, ಸಹೋದರನೊಂದಿಗೆ ವಾಗ್ವಾದ.
ವೃಶ್ಚಿಕ: ರೋಗ ಭಾದೆಗಳಿಂದ ಮುಕ್ತಿ, ಉದ್ಯೋಗ ಸ್ಥಳದಲ್ಲಿ ಕಲಹ, ಶತ್ರುಗಳು ಅಧಿಕ, ಸಾಲದ ಚಿಂತೆ.
ಧನಸ್ಸು: ಅನಿರೀಕ್ಷಿತ ಉದ್ಯೋಗ ಪ್ರಾಪ್ತಿ, ಅಧಿಕಾರಿಗಳ ಕಿರಿಕಿರಿಯಿಂದ ನಿದ್ರಾಭಂಗ, ಆತ್ಮೀಯರು ಮತ್ತು ನೆರೆಹೊರೆಯವರು ದೂರ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಧನಾಗಮನ, ಕೋರ್ಟ್ ಕೇಸುಗಳಲ್ಲಿ ಜಯ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ.
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಜೀವನದಲ್ಲಿ ಗೆಲ್ಲಬೇಕೆಂಬ ಛಲ, ಸ್ಥಳ ಬದಲಾವಣೆಯಿಂದ ತೊಂದರೆ.
ಮೀನ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಸಾಲ ಮಾಡುವ ಪರಿಸ್ಥಿತಿ ಬರುವುದು, ಮಕ್ಕಳು ದೂರವಾಗುವರು.
 


 
		 
		 
		 
		 
		
 
		 
		 
		 
		