ದಿನ ಭವಿಷ್ಯ 31-08-2018

Public TV
1 Min Read
DINA BHAVISHYA 5 5 1 1 2

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಶುಕ್ರವಾರ, ಅಶ್ವಿನಿ ನಕ್ಷತ್ರ.

ರಾಹುಕಾಲ: ಬೆಳಗ್ಗೆ 10:50 ರಿಂದ 12:23
ಗುಳಿಕಕಾಲ: ಬೆಳಗ್ಗೆ 7:44 ರಿಂದ 9:17
ಯಮಗಂಡಕಾಲ: ಮಧ್ಯಾಹ್ನ 3:28 ರಿಂದ 5:04

ಮೇಷ: ದಾಂಪತ್ಯದಲ್ಲಿ ವಾಗ್ವಾದ, ಯಂತ್ರೋಪಕರಣ ಮಾರಾಟಗಾರರಿಗೆ ಅನುಕೂಲ, ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಕಿರಿಕಿರಿ, ನಿದ್ರಾಭಂಗ.

ವೃಷಭ: ಆತ್ಮೀಯರಿಂದ ನಷ್ಟ, ಆಧ್ಯಾತ್ಮಿಕ ಕ್ಷೇತ್ರದವರಿಗೆ ಅನುಕೂಲ, ವ್ಯವಹಾರದಲ್ಲಿ ಲಾಭ, ದಾಂಪತ್ಯದಲ್ಲಿ ಕಿರಿಕಿರಿ, ಸ್ನೇಹಿತರಲ್ಲಿ ವೈಮನಸ್ಸು.

ಮಿಥುನ: ಆರ್ಥಿಕ ಸಂಕಷ್ಟಗಳಿಂದ ಮುಕ್ತಿ, ಸಹೋದರ-ಸಹೋದರಿಯೊಂದಿಗೆ ಕಲಹ, ಶತ್ರುಗಳಿಂದ ಕಿರಿಕಿರಿ, ಕೆಳ ಹಂತದ ಅಧಿಕಾರಿಗಳಿಂದ ತೊಂದರೆ, ಅವಕಾಶಗಳು ಕೈ ತಪ್ಪುವುದು.

ಕಟಕ: ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಅನುಕೂಲ, ಮಕ್ಕಳಿಗೆ ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಉದ್ಯೋಗ ಬದಲಾವಣೆ ಮನಸ್ಸು. ಪ್ರಯಾಣದಿಂದ ತೊಂದರೆ.

ಸಿಂಹ: ಉದ್ಯೋಗ ನಿಮಿತ್ತ ದೂರ ಪ್ರಯಾಣ, ವಿದೇಶಕ್ಕೆ ತೆರಳುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಪಿತ್ರಾರ್ಜಿತ ಆಸ್ತಿ ತಗಾದೆ.

ಕನ್ಯಾ: ಆಕಸ್ಮಿಕ ವಿಪರೀತ ಲಾಭ, ತಂದೆ ಮಾಡಿದ ತಪ್ಪಿಂದ ಉದ್ಯೋಗಕ್ಕೆ ಭಂಗ, ದಾಂಪತ್ಯದಲ್ಲಿ ಕಲಹ, ಕೋರ್ಟ್-ಪೊಲೀಸ್ ಸ್ಟೇಷನ್‍ಗೆ ಅಲೆದಾಟ.

ತುಲಾ: ಕೌಟುಂಬಿಕ ಕಲಹ, ಆರ್ಥಿಕ ವಿಚಾರಗಳಲ್ಲಿ ತೊಂದರೆ, ಪಾಲುದಾರಿಕೆ ವ್ಯವಹಾರದಲ್ಲಿ ಒಡಕು, ಮಕ್ಕಳಿಂದ ಆಕಸ್ಮಿಕ ದುರ್ಘಟನೆ.

ವೃಶ್ಚಿಕ: ಪ್ರಯಾಣದಿಂದ ನಷ್ಟ-ಸಂಕಷ್ಟ, ಅಧಿಕ ಉಷ್ಣ ಬಾಧೆ, ತಲೆ ನೋವು, ಉದರ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ವಿಚ್ಚೇದನ ಕೇಸ್‍ಗಳಿಂದ ಮುಕ್ತಿ.

ಧನಸ್ಸು: ಮಕ್ಕಳಿಂದ ಮಾನಹಾನಿ, ಶತ್ರುಗಳ ಶಮನ, ಮಾನಸಿಕ ಕಿರಿಕಿರಿ, ಧಾರ್ಮಿಕ ಕಾರ್ಯಗಳಲ್ಲಿ ಒಲವು.

ಮಕರ: ವಾಹನ-ಸ್ಥಿರಾಸ್ತಿ ಖರೀದಿ ಯೋಗ, ಬಂಧುಗಳಲ್ಲಿ ವೈಮನಸ್ಸು, ಸಂಗಾತಿ ದೂರವಾಗುವ ಸಾಧ್ಯತೆ, ಸ್ವಯಂಕೃತ ಅಪರಾಧಗಳಿಂದ ತೊಂದರೆ, ತಾಯಿಗೆ ನೋವುಂಟು ಮಾಡುವಿರಿ.

ಕುಂಭ: ವಿಪರೀತ ರಾಜಯೋಗ ದಿನ, ಮೌನವಾಗಿರಲು ಇಷ್ಟ ಪಡುವಿರಿ, ಉದ್ಯೋಗ ಸ್ಥಳದಲ್ಲಿ ನೆಮ್ಮದಿ ಹಾಳು, ಉದ್ಯೋಗದಲ್ಲಿನ ಒತ್ತಡದಿಂದ ನಿದ್ರಾಭಂಗ.

ಮೀನ: ಹೆಣ್ಣು ಮಕ್ಕಳಿಂದ ಧನಾಗಮನ, ದಾಯಾದಿಗಳ ಕಲಹ, ತಾಯಿಗೆ ನೋವು, ಕೈಲಾಗದ ವ್ಯಕ್ತಿಗಳಿಗಾಗಿ ಖರ್ಚು ಮಾಡುವಿರಿ.

Share This Article
Leave a Comment

Leave a Reply

Your email address will not be published. Required fields are marked *