ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ತೃತೀಯಾ ಉಪರಿ ಚತುರ್ಥಿ ತಿಥಿ,
ಮಂಗಳವಾರ, ಶತಭಿಷ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 3:39 ರಿಂದ 5:14
ಗುಳಿಕಕಾಲ: ಮಧ್ಯಾಹ್ನ 12:29 ರಿಂದ 2:04
ಯಮಗಂಡಕಾಲ: ಬೆಳಗ್ಗೆ 9:19 ರಿಂದ 10:54
Advertisement
ಮೇಷ: ದೇವತಾ ಕಾರ್ಯಗಳಲ್ಲಿ ಒಲವು, ವಿದ್ಯಾಭ್ಯಾಸದಲ್ಲಿ ಪ್ರಗತಿ, ವೃಥಾ ತಿರುಗಾಟ, ಅಕಾಲ ಭೋಜನ.
Advertisement
ವೃಷಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ನೀಚ ಜನರಿಂದ ತೊಂದರೆ, ದುಷ್ಟರಿಂದ ದೂರವಿರಿ, ಸೌಜನ್ಯದ ವರ್ತನೆಯಿಂದ ಪ್ರಗತಿ.
Advertisement
ಮಿಥುನ: ಈ ದಿನ ಎಚ್ಚರಿಕೆ ಅಗತ್ಯ, ಇಲ್ಲ ಸಲ್ಲದ ಅಪವಾದ, ಆಕಸ್ಮಿಕ ಅವಮಾನ-ನಿಂದನೆ, ಕೆಲಸದಲ್ಲಿ ಒತ್ತಡ, ಭೂಮಿಯಿಂದ ಲಾಭ.
ಕಟಕ: ಕೃಷಿಯಲ್ಲಿ ಅಲ್ಪ ಲಾಭ, ಸ್ತ್ರೀಯರಿಗೆ ಶುಭ, ಆಂತರಿಕ ಕಲಹ, ಮನಸ್ಸಿನಲ್ಲಿ ನಾನಾ ಆಲೋಚನೆ, ತೀರ್ಥಯಾತ್ರೆ ದರ್ಶನ.
ಸಿಂಹ: ಅನಾವಶ್ಯಕ ವಸ್ತುಗಳ ಖರೀದಿ, ಸರಿ ತಪ್ಪುಗಳ ಬಗ್ಗೆ ಯೋಚಿಸಿ, ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಚ್ಚರಿಕೆ, ಮಿತ್ರರಿಂದ ಸಹಾಯ.
ಕನ್ಯಾ: ಮನೆಯಲ್ಲಿ ಶುಭ ಕಾರ್ಯ, ಸ್ವಯಂಕೃತ ಅಪರಾಧದಿಂದ ತೊಂದರೆ, ಮಾನಸಿಕ ವ್ಯಥೆ, ಸಂಕಷ್ಟಕ್ಕೆ ಸಿಲುಕುವಿರಿ, ಉದ್ಯೋಗದಲ್ಲಿ ಕಿರಿಕಿರಿ, ನಂಬಿಕಸ್ಥರಿಂದ ಮೋಸ.
ತುಲಾ: ಹಿತ ಶತ್ರುಗಳಿಂದ ತೊಂದರೆ, ವಿಧೇಯತೆಯಿಂದ ಯಶಸ್ಸು ಗಳಿಕೆ, ಮಿತ್ರರಲ್ಲಿ ಬಾಂಧವ್ಯ ವೃದ್ಧಿ, ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ.
ವೃಶ್ಚಿಕ: ಹೊಸ ವ್ಯಾಪಾರದಿಂದ ಲಾಭ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮಾನಸಿಕ ನೆಮ್ಮದಿ, ಸುಖ ಭೋಜನ ಪ್ರಾಪ್ತಿ.
ಧನಸ್ಸು: ಪ್ರಿಯ ಜನರ ಭೇಟಿ, ಸ್ತ್ರೀಯರಿಗೆ ಲಾಭ, ವಿದ್ಯೆಯಲ್ಲಿ ಅಭಿವೃದ್ಧಿ, ಮಾನಸಿಕ ನೆಮ್ಮದಿ, ಹಿರಿಯರಲ್ಲಿ ಗೌರವ, ಅತಿಯಾದ ಕೋಪ, ಆರೋಗ್ಯದಲ್ಲಿ ಏರುಪೇರು.
ಮಕರ: ಆಸ್ತಿ ತಗಾದೆ ಬಗೆಹರಿಯುವುದು, ಅಧಿಕವಾದ ಖರ್ಚು, ಶತ್ರುಗಳ ಬಾಧೆ, ಪಾಪ ಕಾರ್ಯಗಳಿಗೆ ಪ್ರಚೋದನೆ.
ಕುಂಭ: ಕೋರ್ಟ್ ಕೇಸ್‍ಗಳಲ್ಲಿ ವಿಘ್ನ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಕಾರ್ಯಗಳಲ್ಲಿ ಅಲ್ಪ ಪ್ರಗತಿ, ಸಾಧಾರಣ ಫಲ.
ಮೀನ: ಯತ್ನ ಕಾರ್ಯದಲ್ಲಿ ಅಡೆತಡೆ, ಅನಿರೀಕ್ಷಿತ ಖರ್ಚು, ಮನಸ್ಸಿನಲ್ಲಿ ಆತಂಕ, ಆಲಸ್ಯ ಮನೋಭಾವ, ವಿವಾದಗಳಿಂದ ದೂರವಿರಿ.