ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಶುಕ್ರವಾರ, ಅಶ್ವಿನಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:44 ರಿಂದ 12:20
ಗುಳಿಕಕಾಲ: ಬೆಳಗ್ಗೆ 7:32 ರಿಂದ 9:09
ಯಮಗಂಡಕಾಲ: ಬೆಳಗ್ಗೆ 5:57 ರಿಂದ 7:32
Advertisement
ದಿನ ವಿಶೇಷ: ಮಹಾ ಪ್ರದೋಷ
Advertisement
ಮೇಷ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಮಕ್ಕಳಿಂದ ನೋವು-ನಿರಾಸೆ, ಕುಟುಂಬದ ಗೌರವಕ್ಕೆ ಧಕ್ಕೆ, ಪ್ರೇಮ ವಿಚಾರದಲ್ಲಿ ಆತಂಕ, ವಿಕೃತ ಆಸೆಗಳಿಗೆ ಬಲಿಯಾಗುವಿರಿ.
Advertisement
ವೃಷಭ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮನಸ್ಸಿನಲ್ಲಿ ಆತಂಕ, ತಪ್ಪು ಮಾಡುತ್ತಿದ್ದೇನೆಂಬ ಭೀತಿ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ರಿಪೇರಿಗಾಗಿ ಖರ್ಚು,
Advertisement
ಮಿಥುನ: ತಂದೆ-ಮಕ್ಕಳಲ್ಲಿ ಮನಃಸ್ತಾಪ, ಶತ್ರುತ್ವ ಹೆಚ್ಚಾಗುವುದು, ಪ್ರಯಾಣದಲ್ಲಿ ಅಮೂಲ್ಯ ವಸ್ತುಗಳ ಕಳೆದುಕೊಳ್ಳುವಿರಿ, ಮಿತ್ರರಿಂದ ಧನಾಗಮನ, ಆರೋಗ್ಯದಲ್ಲಿ ಸಮಸ್ಯೆ, ಮಾಟ-ಮಂತ್ರ ತಂತ್ರದ ಭೀತಿ.
ಕಟಕ: ಮಾಡಿದ ತಪ್ಪುಗಳಿಂದ ತೊಂದರೆ, ಆಯುಷ್ಯಕ್ಕೆ ಕಂಟಕವಾಗುವ ಆತಂಕ, ವಿಪರೀತ ಆರೋಗ್ಯ ಸಮಸ್ಯೆ, ದುಶ್ಚಟಗಳಿಂದ ತೊಂದರೆ, ಆಕಸ್ಮಿಕ ಉದ್ಯೋಗ ನಷ್ಟ,
ಸಿಂಹ: ದಾಂಪತ್ಯದಲ್ಲಿ ಅನುಮಾನ, ಸಂಸಾರದಲ್ಲಿ ಕಲಹ, ಪಾಲುದಾರಿಕೆಯಲ್ಲಿ ದುಷ್ಟ ವ್ಯಕ್ತಿಗಳ ಪ್ರವೇಶ, ತಂದೆಯ ನಡವಳಿಕೆಯಿಂದ ಬೇಸರ, ಕಂಕಣ ಭಾಗ್ಯಕ್ಕೆ ಅಡೆತಡೆ.
ಕನ್ಯಾ: ಸಾಲಗಾರರಿಂದ ತೊಂದರೆ, ಶತ್ರುಗಳ ಕಾಟ, ಕೆಲಸಗಳಿಗೆ ಕಾರ್ಮಿಕರ ಕೊರತೆ, ನಿದ್ರೆಯಲ್ಲಿ ಕೆಟ್ಟ ಕನಸುಗಳು, ಆರೋಗ್ಯದಲ್ಲಿ ಏರುಪೇರು, ಆಯುಷ್ಯಕ್ಕೆ ಕುತ್ತುವಾಗಬಹುದೆಂಬ ಆತಂಕ, ಮಾಟ-ಮಂತ್ರದ ಭೀತಿಯಲ್ಲಿ ಬದುಕು.
ತುಲಾ: ದುಶ್ಚಟಗಳಿಂದ ತೊಂದರೆ, ಮಿತ್ರರಿಂದ ಭಾವನೆಗಳಿಗೆ ಧಕ್ಕೆ, ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಹಿನ್ನಡೆ, ಸಂತಾನ ದೋಷ, ಗರ್ಭಿಣಿಯರು ಎಚ್ಚರಿಕೆ.
ವೃಶ್ಚಿಕ: ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಾನಸಿಕ ಹಿಂಸೆ.
ಧನಸ್ಸು: ಆತ್ಮೀಯರು ದೂರವಾಗುವರು, ಮಕ್ಕಳಿಂದ ಮಾನಸಿಕ ಹಿಂಸೆ, ಪ್ರೇಮ ವಿಚಾರದಲ್ಲಿ ತಲೆ ತಗ್ಗಿಸುವಿರಿ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ತಾಂತ್ರಿಕ ಕ್ಷೇತ್ರದವರಿಗೆ ಉತ್ತಮ ಅವಕಾಶ.
ಮಕರ: ವಿಪರೀತ ಆರ್ಥಿಕ ಸಮಸ್ಯೆ, ಹಣಕಾಸು ವಿಚಾರದಲ್ಲಿ ವಿಳಂಬ, ಪ್ರೇಮಿಗಳು ಮನೆ ಬಿಡುವ ನಿರ್ಧಾರ ಮಾಡುವರು, ಆಡುವ ಮಾತಿನಿಂದ ಅನರ್ಥ, ಹೃದಯ ಸಂಬಂಧಿತ ಸಮಸ್ಯೆ, ಬಿಪಿ-ಶುಗರ್ ಅಧಿಕವಾಗುವುದು.
ಕುಂಭ: ದಾಂಪತ್ಯದಲ್ಲಿ ಸಂಶಯ, ನೆರೆಹೊರೆಯವರಿಂದ ಚುಚ್ಚು ಮಾತು, ಪಾಲುದಾರಿಕೆಯಲ್ಲಿ ತೊಂದರೆ, ಮಕ್ಕಳ ಜೀವನದಲ್ಲಿ ಏರುಪೇರು, ಸ್ವಯಂಕೃತ್ಯಗಳಿಂದ ಗೌರವಕ್ಕೆ ಧಕ್ಕೆ.
ಮೀನ: ಮಕ್ಕಳಿಂದ ಧನಾಗಮನ, ಆಕಸ್ಮಿಕ ದುರ್ಘಟನೆ, ವಿಕೃತ ಮನಃಸ್ಥಿತಿ, ಅಧಿಕ ಉಷ್ಣ-ಪಿತ್ತ ಬಾಧೆ, ಶುಗರ್ ಕಾಯಿಲೆ ಇದ್ದವರು ಎಚ್ಚರ, ಅಧಿಕ ಬಡ್ಡಿಗೆ ಸಾಲ ಮಾಡುವಿರಿ, ಮನಸ್ಸಿನಲ್ಲಿ ಭಯ ಆತಂಕ.