ಪಂಚಾಂಗ
ಸಂವತ್ಸರ: ವಿಶ್ವಾವಸು, ಋತು: ವಸಂತ
ಅಯನ: ಉತ್ತರಾಯಣ, ಮಾಸ: ವೈಶಾಖ
ಪಕ್ಷ: ಶುಕ್ಲ, ತಿಥಿ: ತದಿಗೆ
ನಕ್ಷತ್ರ: ರೋಹಿಣಿ
ರಾಹುಕಾಲ: 12:16 – 01:51
ಗುಳಿಕಕಾಲ: 10:42 – 12:16
ಯಮಗಂಡಕಾಲ: 07:33 – 09:08
ಮೇಷ: ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ, ಜವಾಬ್ದಾರಿಗಳನ್ನು ಜಾಣ್ಮೆಯಿಂದ ನಿಭಾಯಿಸಿ, ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯ.
ವೃಷಭ: ಆರೋಗ್ಯದಲ್ಲಿ ಸುಧಾರಣೆ, ಆರ್ಥಿಕ ನಷ್ಟ ಉಂಟಾಗಬಹುದು, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.
ಮಿಥುನ: ಸಹಾಯ ಮಾಡಿದ ಸ್ನೇಹಿತನನ್ನು ಅವಮಾನಿಸಬೇಡಿ, ಅನಿವಾರ್ಯ ಕಾರಣಗಳಿಂದ ಖರ್ಚು, ರಾಜಕೀಯದಲ್ಲಿರುವವರಿಗೆ ಶುಭ.
ಕಟಕ: ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿ, ಕಟ್ಟಡ ನಿರ್ಮಾಣದಲ್ಲಿ ಅಡೆತಡೆ, ಸಹವರ್ತಿಗಳಿಂದ ಉತ್ತಮ ಸಲಹೆ.
ಸಿಂಹ: ಒಡಹುಟ್ಟಿದವರಲ್ಲಿ ಭಿನ್ನಾಭಿಪ್ರಾಯ, ಹಣಕಾಸಿನ ಸ್ಥಿತಿ ಉತ್ತಮ, ಶತ್ರುಕಾಟದಿಂದ ಮುಕ್ತಿ.
ಕನ್ಯಾ: ಅಮೂಲ್ಯ ವಸ್ತುವನ್ನು ಕಳೆದುಕೊಳ್ಳವ ಸಾಧ್ಯತೆ, ಕಲಾವಿದರಿಗೆ ಹೆಚ್ಚಿನ ಅವಕಾಶ, ಗಿರವಿ ಅಗಂಡಿಯವರಿಗೆ ನಷ್ಟ.
ತುಲಾ: ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶ್ರಮವಹಿಸಬೇಕು, ಸನ್ಮಾನದಿಂದ ಸಂತಸ.
ವೃಶ್ಚಿಕ: ದಿನಸಿ ವ್ಯಾಪಾರಿಗಳಿಗೆ ಲಾಭ, ತಾಳ್ಮೆಯಿಂದ ವರ್ತಿಸಿ, ತೊಂದರೆಗಳೇನಿದ್ದರೂ ತಾತ್ಕಾಲಿಕ.
ಧನಸ್ಸು: ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸಿ, ಸಮಾಧಾನದಿಂದ ಕಾರ್ಯ ನಿರ್ವಹಿಸಿ, ಖರ್ಚು ಹೆಚ್ಚಾಗುವುದರಿಂದ ಗೊಂದಲ.
ಮಕರ: ಕನಸು ನನಸಾಗುವ ಕಾಲ, ಸಂಬಂಧಿಕರಲ್ಲಿ ಹಣಕಾಸಿನ ವ್ಯವಹಾರ ಬೇಡ, ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಕುಂಭ: ಸ್ನೇಹಿತರ ಕಷ್ಟಕಾಲಕ್ಕೆ ಸ್ಪಂದಿಸುವ ಸಾಧ್ಯತೆ, ಅತಿಥಿಗಳ ಆಗಮನದಿಂದ ಸಂತೋಷ, ಮಾಡುವ ಕೆಲಸದಲ್ಲಿ ಶ್ರದ್ಧೆಯಿರಲಿ.
ಮೀನ: ಆಗದ ಕೆಲಸಕ್ಕೆ ವ್ಯರ್ಥ ಪ್ರಯತ್ನ ಬೇಡ, ಮಾತಿನ ಮೇಲೆ ಹಿಡಿತವಿರಲಿ, ಉತ್ತಮ ವ್ಯಕ್ತಿಗಳ ಸಂಪರ್ಕ.