Connect with us

Dina Bhavishya

ದಿನಭವಿಷ್ಯ: 29-12-2018

Published

on

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಶನಿವಾರ, ಉತ್ತರ ಫಾಲ್ಗುಣಿ ನಕ್ಷತ್ರ
ಬೆಳಗ್ಗೆ 9:01 ನಂತರ ಹಸ್ತ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:34 ರಿಂದ 11:00
ಗುಳಿಕಕಾಲ: ಬೆಳಗ್ಗೆ 6:43 ರಿಂದ 8:08
ಯಮಗಂಡಕಾಲ: ಮಧ್ಯಾಹ್ನ 1:51 ರಿಂದ 3:17

ಮೇಷ: ಸ್ಥಿರಾಸ್ತಿ ನಷ್ಟವಾಗುವ ಸಾಧ್ಯತೆ, ಸ್ಥಿರಾಸ್ತಿ ಮೇಲೆ ಸಾಲ ಮಾಡುವ ಪರಿಸ್ಥಿತಿ, ಶೀತ ಸಂಬಂಧಿತ ರೋಗ ಬಾಧೆ, ಹೊಟ್ಟೆ ನೋವು, ಗರ್ಭದೋಷ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ನೆರೆಹೊರೆ ಬಂಧುಗಳಿಂದ ಗೌರವಕ್ಕೆ ಧಕ್ಕೆ, ಕರಾರು, ಒಪ್ಪಂದಗಳಲ್ಲಿ ಎಚ್ಚರ, ವ್ಯವಹಾರಗಳಿಂದ ನಷ್ಟ, ಮಕ್ಕಳಿಂದ ಧನಾಗಮನ.

ಮಿಥುನ: ಸ್ಥಿರಾಸ್ತಿ-ವಾಹನದಿಂದ ಧನಾಗಮನ, ಅಪಭ್ರಂಶದ ಮಾತುಗಳಿಂದ ತಾಯಿಗೆ ನೋವು, ಉದ್ಯೋಗಸ್ಥರಿಗೆ ಅನುಕೂಲ, ರಿಯಲ್ ಎಸ್ಟೇಟ್, ಕಮಿಷನ್ ಏಜೆನ್ಸಿಗಳಿಗೆ ಲಾಭ.

ಕಟಕ: ಕುತ್ತಿಗೆ, ಸೊಂಟ ನೋವು, ಆರೋಗ್ಯದಲ್ಲಿ ವ್ಯತ್ಯಾಸ, ಬಂಧುಗಳಿಂದ ತೊಂದರೆ, ಆತ್ಮೀಯರಿಂದಲೇ ಮೋಸ ಹೋಗುವಿರಿ, ಹೊಸ ವಸ್ತು ಖರೀದಿಯಿಂದ ಅನಾನುಕೂಲ,
ರಾಜಕೀಯ ವ್ಯಕ್ತಿಗಳಿಂದ ನಷ್ಟ.

ಸಿಂಹ: ನೀವಾಡುವ ಮಾತಿನಿಂದ ತೊಂದರೆ, ಕುಟುಂಬದಲ್ಲಿ ಕಲಹ ಹೆಚ್ಚಾಗುವುದು, ಆರ್ಥಿಕ ಸಂಕಷ್ಟ ಬಾಧಿಸುವುದು, ಮಾನಸಿಕ ವ್ಯಥೆ, ಆರೋಗ್ಯದಲ್ಲಿ ವ್ಯತ್ಯಾಸ.

ಕನ್ಯಾ: ಸ್ನೇಹಿತರಿಂದ ಸಂಕಷ್ಟಕ್ಕೆ ಸಿಲುಕುವಿರಿ, ಕುಟುಂಬದಲ್ಲಿ ಎಚ್ಚರಿಕೆ, ಸ್ವಯಂಕೃತ ಅಪರಾಧಗಳಿಂದ ಗೊಂದಲ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ.

ತುಲಾ: ಮೇಲಾಧಿಕಾರಿಗಳ ತಪ್ಪಿನಿಂದ ಉದ್ಯೋಗಕ್ಕೆ ಕಂಟಕ, ಮನಸ್ಸಿನಲ್ಲಿ ಗಾಬರಿ-ಆತಂಕ, ಕನಸಿನಲ್ಲಿ ಸರ್ಪಗಳ ದರ್ಶನ, ಅನಿರೀಕ್ಷಿತ ಘಟನೆಗಳಿಂದ ದೂರ ಪ್ರಯಾಣ.

ವೃಶ್ಚಿಕ: ಮಿತ್ರರೊಂದಿಗೆ ಪ್ರಯಾಣ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ತಂದೆಯಿಂದ ಹಣಕಾಸು ಲಾಭ, ಸಂಪತ್ತು ಲಭಿಸುವುದು, ಕಾನೂನು ಬಾಹಿರ ಚಟುವಟಿಕೆಗೆ ಮನಸ್ಸು.

ಧನಸ್ಸು: ಉದ್ಯೋಗದಲ್ಲಿ ಗೊಂದಲ-ಆತಂಕ, ವಂಶ ಪರಂಪರೆಯ ವೃತ್ತಿ ಪರರಿಗೆ ಅನುಕೂಲ, ಮಾನಸಿಕ ಖಿನ್ನತೆ ಬಾಧಿಸುವುದು.

ಮಕರ: ದಾಂಪತ್ಯದಲ್ಲಿ ವೈಮನಸ್ಸು, ಪಾಲುದಾರಿಕೆ ವ್ಯವಹಾರದಲ್ಲಿ ಸಂಶಯ, ಸಾಲದಿಂದ ತೊಂದರೆಗೆ ಸಿಲುಕುವಿರಿ, ಕೆಲಸ ಕಾರ್ಯಗಳಿಗೆ ಕಾರ್ಮಿಕರ ಕೊರತೆ.

ಕುಂಭ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಸಂಗಾತಿಯಿಂದ ಅಪಭ್ರಂಶದ ಮಾತು ಕೇಳುವಿರಿ, ಕೋರ್ಟ್ ಕೇಸ್‍ಗಳಲ್ಲಿ ಜಯಯ ಮುನ್ಸೂಚನೆ.

ಮೀನ: ಮಕ್ಕಳಿಂದ ದಾಂಪತ್ಯದಲ್ಲಿ ವಿರಸ, ಜೂಜು-ರೇಸ್, ಲಾಟರಿಗಳಲ್ಲಿ ತೊಡಗುವಿರಿ, ಅಕ್ರಮ ಸಂಪಾದನೆಗೆ ಮನಸ್ಸು, ಸ್ಥಿರಾಸ್ತಿ-ಮಕ್ಕಳಿಗಾಗಿ ಮಾಡಿದ ಸಾಲ ಬಾಧೆ, ಆರ್ಥಿಕ ಸಂಕಷ್ಟದಿಂದ ಮಾನಸಿಕ ವ್ಯಥೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *