Connect with us

Karnataka

ದಿನ ಭವಿಷ್ಯ 29-11-2018

Published

on

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಗುರುವಾರ, ಮಖ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:37 ರಿಂದ 3:03
ಗುಳಿಕಕಾಲ: ಬೆಳಗ್ಗೆ 9:19 ರಿಂದ 10:45
ಯಮಗಂಡಕಾಲ: ಬೆಳಗ್ಗೆ 6:27 ರಿಂದ 7:53

ಮೇಷ: ಪ್ರೀತಿ-ವಿಶ್ವಾಸ ಭಾವನೆಗಳಿಗೆ ಧಕ್ಕೆ, ಸ್ಥಿರಾಸ್ತಿ-ವಾಹನ ಮಾರಾಟದಿಂದ ಹಣ ಲಾಭ, ರಾಜಕೀಯ ವ್ಯಕ್ತಿಗಳಿಂದ ಕಿರಿಕಿರಿ, ಮೇಲಾಧಿಕಾರಿಗಳಿಂದ ತೊಂದರೆ.

ವೃಷಭ: ದಾಂಪತ್ಯದಲ್ಲಿ ಜಗಳ, ಮಾನಸಿಕ ಕಿರಿಕಿರಿ, ಸ್ನೇಹಿತರ ದರ್ಪಕ್ಕೆ ಭಯಗೊಳ್ಳುವಿರಿ, ಸಂಗಾತಿಯ ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಜಯ.

ಮಿಥುನ: ಸ್ವಯಂಕೃತ ಅಪರಾಧಗಳಿಂದ ಶಿಕ್ಷೆ ಅನುಭವಿಸುವಿರಿ, ಬಂಧುಗಳಿಂದ ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ, ಸಹೋದ್ಯೋಗಿಗಳಿಂದ ಉದ್ಯೋಗ ನಷ್ಟ, ಪ್ರಯಾಣಕ್ಕೆ ಮನಸ್ಸು ಮಾಡುವಿರಿ.

ಕಟಕ: ಸ್ವಂತ ಉದ್ಯಮದಿಂದ ಧನಾಗಮನ, ತಂದೆ ದೂರವಾಗುವ ಸಾಧ್ಯತೆ, ಪಿತ್ರಾರ್ಜಿತ ಆಸ್ತಿ ವಿವಾದ, ಅನಗತ್ಯ ಕಲಹವಾಗುವ ಸಾಧ್ಯತೆ.

ಸಿಂಹ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಆಯುಷ್ಯಕ್ಕೆ ಕಂಟಕವಾಗುವ ಸಾಧ್ಯತೆ, ಆಕಸ್ಮಿಕವಾಗಿ ಕುಟುಂಬದಲ್ಲಿ ಸಂಕಷ್ಟ, ಕುಟುಂಬದಿಂದ ದೂರವಾಗುವ ಮನಸ್ಥಿತಿ.

ಕನ್ಯಾ: ದಾಂಪತ್ಯ ಕಿರಿಕಿರಿಗಳಿಂದ ವಿಚ್ಛೇದನ ಸಾಧ್ಯತೆ, ಕಿರಿಯ ಸಹೋದರನಿಂದ ನಷ್ಟ, ದಾಯಾದಿಗಳ ಕಲಹ, ಹಣಕಾಸು ವಿಚಾರದಲ್ಲಿ ನಿಧಾನ.

ತುಲಾ: ಉದ್ಯೋಗದಲ್ಲಿ ಅನುಕೂಲ, ಶತ್ರುಗಳ ನಾಶ, ಆರ್ಥಿಕ ಸಂಕಷ್ಟ ನಿವಾರಣೆಯಾಗುವುದು, ಈ ದಿನ ಶುಭ ಫಲಗಳು ಪ್ರಾಪ್ತಿ.

ವೃಶ್ಚಿಕ: ಉದ್ಯೋಗ ನಿಮಿತ್ತ ದೂರ ಪ್ರಯಾಣ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಕುಟುಂಬದಲ್ಲಿ ವೈಮನಸ್ಸು, ಮಕ್ಕಳು ದೂರವಾಗುವ ಸಾಧ್ಯತೆ.

ಧನಸ್ಸು: ಆಕಸ್ಮಿಕ ಪ್ರಯಾಣ, ಮನೆ ವಾತಾವರಣ ಕಲುಷಿತ, ಮನೆಯಿಂದ ದೂರ ಉಳಿಯುವ ಆಲೋಚನೆ, ತಂದೆಯ ಬಂಧುಗಳಿಂದ ನಷ್ಟ.

ಮಕರ: ಸಂಗಾತಿಯಿಂದ ಅನುಕೂಲ, ಸ್ನೇಹಿತರಿಂದ ಆಕಸ್ಮಿಕ ಧನಾಗಮನ, ಗೃಹ-ಉದ್ಯೋಗ ಬದಲಾವಣೆ, ಪ್ರಯಾಣದಿಂದ ತೊಂದರೆ, ರಾಜಕೀಯ ವ್ಯಕ್ತಿಗಳ ಭೇಟಿ.

ಕುಂಭ: ಸ್ನೇಹಿತರಿಂದ ಸಾಲ ಮಾಡುವ ಸಾಧ್ಯತೆ, ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಹೆಚ್ಚಾಗುವುದು, ತಂದೆಯ ಸ್ನೇಹಿತರಿಂದ ಅನುಕೂಲ, ನೀವಾಡುವ ಮಾತಿನಿಂದ ತೊಂದರೆ.

ಮೀನ: ಮಕ್ಕಳೇ ಶತ್ರುಗಳಾಗುವರು, ಆರೋಗ್ಯದಲ್ಲಿ ವ್ಯತ್ಯಾಸ, ಭಾವನೆಗಳು ಹೆಚ್ಚಾಗುವುದು, ದಾಂಪತ್ಯದಲ್ಲಿ ಸಂಶಯ, ಈ ದಿನ ಎಚ್ಚರಿಕೆಯಲ್ಲಿರುವುದು ಉತ್ತಮ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *