ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ,ಷಷ್ಟಿ, ಶುಕ್ರವಾರ,
ಸ್ವಾತಿ ನಕ್ಷತ್ರ / ವಿಶಾಖ ನಕ್ಷತ್ರ
ರಾಹುಕಾಲ – 10:51 ರಿಂದ 12:24
ಗುಳಿಕಕಾಲ – 07:45 ರಿಂದ 09:18
ಯಮಗಂಡಕಾಲ – 03:30 ರಿಂದ 05:03
ಮೇಷ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಅಪಮಾನ, ಅಪ ನಿಂದನೆ, ಕಾನೂನುಬಾಹಿರ ಆಸೆ ಮತ್ತು ಆಲೋಚನೆ
ವೃಷಭ: ದೂರ ಪ್ರಯಾಣ, ಅನಾರೋಗ್ಯ ಸಮಸ್ಯೆ, ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ.
ಮಿಥುನ: ಐಷಾರಾಮಿ ಜೀವನಕ್ಕಾಗಿ ಧನವ್ಯಯ, ಪ್ರೀತಿ ಪ್ರೇಮದ ವಿಷಯಗಳಲ್ಲಿ ಸಮಸ್ಯೆ, ಮಕ್ಕಳು ಶತ್ರುಗಳಾಗುವರು, ಸಂತಾನ ದೋಷ.
ಕಟಕ: ಸ್ವಯಂಕೃತಾಪರಾಧದಿಂದ ಧನ ನಷ್ಟ, ಕುಟುಂಬದ ಹಿತಶತ್ರುಗಳಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ, ಆಸೆ ಆಕಾಂಕ್ಷೆಗಳಿಗೆ ಕುಟುಂಬಸ್ಥರಿಂದ ವಿರೋಧ
ಸಿಂಹ: ವಿಕೃತ ಆಸೆ ಅಭಿಲಾಷೆಗಳು, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ಉದ್ಯೋಗದಲ್ಲಿ ಬಡ್ತಿ, ಪ್ರತಿಷ್ಠೆ ಮತ್ತು ಉತ್ತಮ ಅವಕಾಶ.
ಕನ್ಯಾ: ಮೋಸ ಮತ್ತು ನಷ್ಟಗಳು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ವಸ್ತ್ರಾಭರಣ ಖರೀದಿಗೆ ಹಣವ್ಯಯ.
ತುಲಾ: ಸುಲಲಿತವಾಗಿ ಧನ ಸಂಪಾದನೆ, ಅನಿರೀಕ್ಷಿತವಾಗಿ ಅದೃಷ್ಟ ಒಲಿಯುವುದು, ಪೂರ್ವಿಕರ ಗುಪ್ತ ನಿಧಿ ಲಭಿಸುವುದು.
ವೃಶ್ಚಿಕ: ದಾಂಪತ್ಯದಲ್ಲಿ ಬೇಸರ, ನಿರಾಸೆ ಅಪವಾದ ಸಂಶಯಗಳು, ಅವಕಾಶಗಳು ಕೈತಪ್ಪುವವು, ಸಾಲಭಾದೆ
ಧನಸ್ಸು: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ, ಮಕ್ಕಳ ಪ್ರೀತಿ ಪ್ರೇಮದ ವಿಷಯಗಳ ಚಿಂತೆ, ಅಧಿಕ ನಷ್ಟ ಮತ್ತು ಸಮಸ್ಯೆ, ಅದೃಷ್ಟವಂತರಾಗುವಿರಿ
ಮಕರ: ದಾಂಪತ್ಯದಲ್ಲಿ ಸಮಸ್ಯೆ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಮೋಸ ಮಾಡುವ ವ್ಯಕ್ತಿಗಳನ್ನು ಪ್ರೀತಿಸುವಿರಿ, ಸೇವಾ ವೃತ್ತಿಯ ಉದ್ಯೋಗ ಲಾಭ
ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ, ಹಳೆಯ ವಸ್ತುಗಳ ಖರೀದಿಗಾಗಿ ಖರ್ಚು, ದಾಂಪತ್ಯದಲ್ಲಿ ಪ್ರೀತಿ ವಿಶ್ವಾಸ, ಅತಿಯಾದ ವಿಷಯಾಸಕ್ತಿ
ಮೀನ: ಸಾಲ ಮಾಡುವ ಪರಿಸ್ಥಿತಿ, ಶತ್ರು ದಮನ, ಕೋರ್ಟ್ ಕೇಸುಗಳಲ್ಲಿ ಜಯ, ಅಧಿಕ ಖರ್ಚು.