ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಶನಿವಾರ, ಭರಣಿ ನಕ್ಷತ್ರ,
ಬೆಳಗ್ಗೆ 9:58 ನಂತರ ಕೃತ್ತಿಕಾ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:14 ರಿಂದ 10:50
ಗುಳಿಕಕಾಲ: ಬೆಳಗ್ಗೆ 6:01 ರಿಂದ 7:38
ಯಮಗಂಡಕಾಲ: ಮಧ್ಯಾಹ್ನ 2:02 ರಿಂದ 3:38
Advertisement
ಮೇಷ: ಸ್ಥಿರಾಸ್ತಿ-ವಾಹನ ಖರೀದಿಗೆ ಆಲೋಚನೆ, ಮಕ್ಕಳಿಂದ ಹಣಕಾಸು ನಷ್ಟ, ಚಿನ್ನಾಭರಣ ಖರೀದಿಯಲ್ಲಿ ಎಚ್ಚರ, ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ.
Advertisement
ವೃಷಭ: ಶೀತ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ವಯಂಕೃತ ಅಪರಾಧಗಳಿಂದ ವ್ಯಥೆ, ಮಾನಸಿಕ ನೆಮ್ಮದಿಗೆ ಭಂಗ, ದುಶ್ಚಟಗಳಿಂದ ತೊಂದರೆ, ಮೋಜು-ಮಸ್ತಿಗಾಗಿ ಅಧಿಕ ಖರ್ಚು.
Advertisement
ಮಿಥುನ: ಮಕ್ಕಳಿಂದ ಗೌರವಕ್ಕೆ ಧಕ್ಕೆ, ತಲೆ ತಗ್ಗಿಸುವ ಸಂದರ್ಭ ನಿರ್ಮಾಣ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಹೋದ್ಯೋಗಿಗಳಿಂದ ತೊಂದರೆ, ಪ್ರೇಮ ವಿಚಾರವಾಗಿ ಮಿತ್ರರಿಂದ ದ್ರೋಹ.
Advertisement
ಕಟಕ: ಅನಗತ್ಯ ಮಾತುಗಳಿಂದ ಸ್ತ್ರೀಯರಿಂದ ಬೈಗುಳ, ಅತಿಯಾದ ಆಸೆಯಿಂದ ಸಂಕಷ್ಟಕ್ಕೆ ಸಿಲುಕುವಿರಿ, ಹಣಕಾಸು ನಷ್ಟ, ಸಾಲಬಾಧೆಯಿಂದ ಕುಟುಂಬಕ್ಕೆ ಅವಮಾನ.
ಸಿಂಹ: ಚಂಚಲ ಮನಸ್ಸು, ದುಶ್ಚಟಗಳು-ದುರ್ನಡತೆಗಳಿಂದ ತೊಂದರೆ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ಸಹೋದರಿಯಿಂದ ತೊಂದರೆಗೆ ಸಿಲುಕುವಿರಿ, ಉದ್ಯೋಗಸ್ಥರಿಗೆ ಸಮಸ್ಯೆ ಸಾಧ್ಯತೆ.
ಕನ್ಯಾ: ಆರ್ಥಿಕ ಸಂಕಷ್ಟ ಹೆಚ್ಚಾಗುವುದು, ದಾಂಪತ್ಯದಲ್ಲಿ ಕಿರಿಕಿರಿ, ಸಂಗಾತಿಯಿಂದ ದೂರ ಉಳಿಯುವ ಚಿಂತನೆ, ಆಕಸ್ಮಿಕ ಅವಘಡಗಳಿಂದ ಪ್ರಯಾಣ ರದ್ದು.
ತುಲಾ: ಗುಪ್ತ ಇಚ್ಛೆ-ಗುಪ್ತ ಆಲೋಚನೆಗಳು, ಮಹಿಳಾ ಮಿತ್ರರಿಂದ ವ್ಯಥೆ, ದಾಂಪತ್ಯದಲ್ಲಿ ವಿರಸ, ವ್ಯಾಪಾರ-ವ್ಯವಹಾರದಲ್ಲಿ ಸಂಕಷ್ಟ, ಶತ್ರುಗಳ ಕಾಟ.
ವೃಶ್ಚಿಕ: ಪ್ರಯಾಣದಲ್ಲಿ ಚಿನ್ನಾಭರಣದ ಬಗ್ಗೆ ಎಚ್ಚರ, ಸಹೋದ್ಯೋಗಿಗಳು ಶತ್ರುಗಳಾಗಿ ಪರಿವರ್ತನೆ, ವಿಲಾಸೀ ಜೀವನಕ್ಕೆ ಮನಸ್ಸು, ದುಶ್ಚಟಗಳಿಗೆ ಅಧಿಕವಾದ ಖರ್ಚು.
ಧನಸ್ಸು: ಮಕ್ಕಳಿಗಾಗಿ ಮಾಡಿದ ಸಾಲ ಬಾಧೆ, ಭಾವನೆಗಳ ಲೋಕದಲ್ಲಿ ವಿಹಾರ, ಸಹೋದರಿಯಿಂದ ಸಹಕಾರ, ಮಿತ್ರರಿಂದ ಅನುಕೂಲ.
ಮಕರ: ಪ್ರೇಮದ ವಿಚಾರಗಳಿಂದ ತೊಂದರೆ, ಆಕಸ್ಮಿಕ ಅವಘಡ, ಉದ್ಯೋಗ ಕಳೆದುಕೊಳ್ಳುವ ಭೀತಿ, ಹೇಳಿಕೆ ಮಾತುಗಳಿಂದ ಕಲಹ, ಮಾನಸಿಕ ನೆಮ್ಮದಿಗೆ ಭಂಗ, ಸಂಸಾರದಲ್ಲಿ ತೊಂದರೆ.
ಕುಂಭ: ವಿಪರೀತ ರಾಜಯೋಗದ ದಿನ, ಸಂಗಾತಿಯಿಂದ ಅನುಕೂಲ, ಸ್ನೇಹಿತರಿಂದ ಸಮಸ್ಯೆಗಳಿಗೆ ಮುಕ್ತಿ ಸಾಧ್ಯತೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ.
ಮೀನ: ರೋಗ ಬಾಧೆ, ಸಂತಾನಕ್ಕಾಗಿ ಆಸ್ಪತ್ರೆಗೆ ದಾಖಲು, ಸಹೋದರಿಯಿಂದ ಸಹಕಾರ, ತಂದೆಯ ಬಂಧುಗಳಿಂದ ಆರ್ಥಿಕ ಸಹಾಯ, ಮಕ್ಕಳಿಂದ ಕೌಟುಂಬಿಕ ಸಮಸ್ಯೆ ನಿವಾರಣೆ.