ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಶುಕ್ರವಾರ, ಪೂರ್ವಾಷಾಢ ನಕ್ಷತ್ರ
ಮಧ್ಯಾಹ್ನ 12:41 ನಂತರ ಉತ್ತರಾಷಾಢ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:57 ರಿಂದ 12:29
ಗುಳಿಕಕಾಲ: ಬೆಳಗ್ಗೆ 7:53 ರಿಂದ 9:25
ಯಮಗಂಡಕಾಲ: ಮಧ್ಯಾಹ್ನ 3:32 ರಿಂದ 5:04
Advertisement
ಮೇಷ: ಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಅಧಿಕ ಉಷ್ಣ ಬಾಧೆ, ವಾಹನ ಅಪಘಾತವಾಗುವ ಸಾಧ್ಯತೆ, ಗರ್ಭಿಣಿಯರು ಎಚ್ಚರಿಕೆ, ಉದ್ಯೋಗದಲ್ಲಿ ಒತ್ತಡ.
Advertisement
ವೃಷಭ: ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ದುಶ್ಚಟಗಳು ಹೆಚ್ಚಾಗುವುದು, ಸರ್ಕಾರಿ ಕೆಲಸ ನಿಮಿತ್ತ ಪ್ರಯಾಣ.
Advertisement
ಮಿಥುನ: ತಂದೆಯ ಬಂಧುಗಳಿಂದ ನೋವು, ಪ್ರಯಾಣದಲ್ಲಿ ಗೌರವಕ್ಕೆ ಧಕ್ಕೆ, ಕೋರ್ಟ್ ಕೇಸ್‍ಗಳಲ್ಲಿ ಜಯ, ವಿದೇಶದಲ್ಲಿ ಉದ್ಯೋಗ ಪ್ರಾಪ್ತಿ.
ಕಟಕ: ಹಣಕಾಸು ಅಡೆ-ತಡೆ ಎದುರಿಸುವಿರಿ, ಅನಗತ್ಯ ವಿಷಯಗಳಿಗೆ ಆಕಸ್ಮಿಕ ಪ್ರಯಾಣ, ಮಕ್ಕಳ ನಡವಳಿಕೆಗಳಿಂದ ತೊಂದರೆ, ದಾಂಪತ್ಯದಲ್ಲಿ ಕಲಹ-ವಿರಸ.
ಸಿಂಹ: ಸ್ವಂತ ಉದ್ಯಮ-ವ್ಯಾಪಾರದಲ್ಲಿ ತೊಂದರೆ, ಅನಗತ್ಯ ವಿಷಯಗಳಿಗೆ ವೆಚ್ಚ, ಸಂಗಾತಿಯಿಂದ ಹಣವ್ಯಯ, ಸರ್ಕಾರಿ ಅಧಿಕಾರಿಗಳಿಗೆ ಲಾಭ, ಅಕ್ರಮ ಸಂಪಾದನೆಗೆ ಮನಸ್ಸು.
ಕನ್ಯಾ: ಸ್ನೇಹಿತರಿಂದ ಅನುಕೂಲ, ಸಹೋದರಿಯಿಂದ ಧನಾಗಮನ, ಆರೋಗ್ಯದಲ್ಲಿ ಏರುಪೇರು, ಆತುರ ನಿರ್ಧಾರಿಂದ ತೊಂದರೆ, ಮೊಂಡು ವಾದಗಳಿಂದ ಕಲಹ.
ತುಲಾ: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ವಾಗ್ವಾದ, ಉದ್ಯೋಗದಲ್ಲಿ ಬಡ್ತಿ, ಶತ್ರುಗಳ ಕುತಂತ್ರದಿಂದ ತೊಂದರೆ, ಮಕ್ಕಳ ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗದಲ್ಲಿ ನಿರಾಸಕ್ತಿ, ದೀರ್ಘಕಾಲದ ರೋಗ ಬಾಧೆ, ಮಾನಸಿಕ ಚಿಂತೆ, ಸ್ವಯಂಕೃತ್ಯಗಳಿಂದ ತೊಂದರೆ, ಅಹಂಭಾವದಿಂದ ವರ್ತಿಸುವಿರಿ.
ಧನಸ್ಸು: ಅನಿರೀಕ್ಷಿತ ಜವಾಬ್ದಾರಿ ಹೆಚ್ಚಾಗುವುದು, ಬಂಧುಗಳಿಂದ ಕಿರಿಕಿರಿ, ಹಣಕಾಸು ವಿಚಾರದಲ್ಲಿ ಹಿನ್ನಡೆ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ಉದ್ಯೋಗ ನಿಮಿತ್ತ ಪ್ರಯಾಣ, ಮಕ್ಕಳೊಂದಿಗೆ ವಾಗ್ವಾದ.
ಮಕರ: ದಾಂಪತ್ಯದಲ್ಲಿ ಸಮಸ್ಯೆ, ಆಕಸ್ಮಿಕ ದುರ್ಘಟನೆಗಳಿಂದ ಖಿನ್ನತೆ, ಪ್ರಯಾಣದಿಂದ ಅನುಕೂಲ, ನರ ದೌರ್ಬಲ್ಯ, ಗ್ಯಾಸ್ಟ್ರಿಕ್ ಸಮಸ್ಯೆ, ಆಯುಷ್ಯಕ್ಕೆ ಕಂಟಕವಾಗುವ ಆತಂಕ.
ಕುಂಭ: ದೂರ ಪ್ರದೇಶಗಳಲ್ಲಿ ಉದ್ಯೋಗ, ಸಾಲದಿಂದ ತೊಂದರೆಗೆ ಸಿಲುಕುವಿರಿ, ಗೌರವಕ್ಕೆ ಧಕ್ಕೆ, ಆಕಸ್ಮಿಕ ದುರ್ಘಟನೆ, ಶತ್ರುಗಳ ಕಾಟ, ಆತುರ ನಿರ್ಧಾರದಿಂದ ತೊಂದರೆ.
ಮೀನ: ಮೇಲಾಧಿಕಾರಿಗಳಿಂದ ಕಿರಿಕಿರಿ, ಕಾರ್ಮಿಕರು ಕೆಲಸಗಾರರಿಂದ ನಷ್ಟ, ಮಕ್ಕಳಿಗಾಗಿ ಅಧಿಕ ಖರ್ಚು, ದಾಂಪತ್ಯದಲ್ಲಿ ಅನುಮಾನ ಹೆಚ್ಚಾಗುವುದು, ವಿಪರೀತ ಚಿಂತೆ ಮಾಡುವಿರಿ.