KarnatakaLatestMain Post

ದಿನ ಭವಿಷ್ಯ : 27-12-2021

ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಹೇಮಂತ ಋತು,
ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
ರಾಹುಕಾಲ : 8.06 ರಿಂದ 9.32
ಗುಳಿಕಕಾಲ : 1.49 ರಿಂದ 3.15
ಯಮಗಂಡಕಾಲ : 10.58 ರಿಂದ 12.24
ವಾರ : ಸೋಮವಾರ
ತಿಥಿ : ಅಷ್ಟಮಿ
ನಕ್ಷತ್ರ : ಹಸ್ತ

ಮೇಷ : ಶುಭ ಸುದ್ದಿ ಕೇಳುವಿರಿ, ಪರಸ್ತ್ರೀ ಧನಲಾಭ, ಶತ್ರು ಧ್ವಂಸ, ವಿನಾಕಾರಣ ಯೋಚನೆ, ದೇವತಾ ಕಾರ್ಯಗಳಲ್ಲಿ ಒಲವು.

ವೃಷಭ : ಆದಾಯಕ್ಕಿಂತ ಖರ್ಚು ಜಾಸ್ತಿ, ವಿದ್ಯಾಭ್ಯಾಸದಲ್ಲಿ ಅಡಚಣೆ, ಅನ್ಯ ಜನರಲ್ಲಿ ವೈಮನಸ್ಸು.

ಮಿಥುನ : ಗಣ್ಯ ವ್ಯಕ್ತಿಗಳ ಭೇಟಿ, ದ್ರವ್ಯಲಾಭ, ಊರೂರು ಸುತ್ತಾಟ, ಶತ್ರು ನಾಶ, ಮಕ್ಕಳಲ್ಲಿ ಪ್ರೀತಿ, ಹಿತನುಡಿ.

ಕಟಕ : ಕಾರ್ಯಸಿದ್ಧಿ, ಆಪ್ತರಿಂದ ಸಹಾಯ, ಪ್ರತಿಭೆಗೆ ತಕ್ಕ ಫಲ, ನಂಬಿಕೆ ದ್ರೋಹ, ಅಕಾಲ ಭೋಜನ.

ಸಿಂಹ : ವೈಯಕ್ತಿಕ ವಿಚಾರಗಳತ್ತ ಗಮನ ಕೊಡಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಶರೀರದಲ್ಲಿ ತಳಮಳ, ಸಾಲಭಾದೆ.

ಕನ್ಯಾ : ಕೆಲಸ ಕಾರ್ಯಗಳಲ್ಲಿ ಜಯ, ತೀರ್ಥಯಾತ್ರಾ ದರ್ಶನ, ದಾಂಪತ್ಯದಲ್ಲಿ ವಿರಸ, ಸಲ್ಲದ ಅಪವಾದ, ಆರೋಗ್ಯದಲ್ಲಿ ಏರುಪೇರು.

ತುಲಾ : ಅವಲಂಬನೆ ಬೇಡ, ಉದ್ಯೋಗದಲ್ಲಿ ಬಡ್ತಿ, ಶತ್ರು ಭಾದೆ.

ವೃಶ್ಚಿಕ : ವಿರೋಧಿಗಳಿಂದ ತೊಂದರೆ, ಸ್ಥಳ ಬದಲಾವಣೆ, ಪುಣ್ಯಕ್ಷೇತ್ರ ದರ್ಶನ, ಕುಟುಂಬ ಸೌಖ್ಯ, ಕೃಷಿಯಲ್ಲಿ ಲಾಭ.

ಧನಸ್ಸು : ಮಾತಾಪಿತರಲ್ಲಿ ಪ್ರೀತಿ, ವ್ಯರ್ಥ ಧನಹಾನಿ, ಸಾಲಭಾದೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅನಾವಶ್ಯಕ ಖರ್ಚು.

ಮಕರ : ಬಂಧು ಮಿತ್ರರಲ್ಲಿ ಪ್ರೀತಿ, ಕೋರ್ಟ್ ಕಛೇರಿ ಕೆಲಸದಲ್ಲಿ ಜಯ, ಸಲ್ಲದ ಅಪವಾದ.

ಕುಂಭ : ಮೋಸಕ್ಕೆ ಬೀಳುವ ಸಾಧ್ಯತೆ, ಚಂಚಲ ಮನಸ್ಸು, ಅನಿರೀಕ್ಷಿತ ಧನಲಾಭ.

ಮೀನ : ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಮಾತಿನಿಂದ ಅನರ್ಥ, ಋಣಭಾದೆ, ದೂರ ಪ್ರಯಾಣ.

Leave a Reply

Your email address will not be published.

Back to top button