ದಿನಭವಿಷ್ಯ: 27-08-2017

Public TV
2 Min Read
DINA BHAVISHYA 5 5 1 1

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಭಾನುವಾರ, ಸ್ವಾತಿ ನಕ್ಷತ್ರ

ರಾಹುಕಾಲ: ಸಾಯಂಕಾಲ 5:04 ರಿಂದ 6:37
ಗುಳಿಕಕಾಲ: ಮಧ್ಯಾಹ್ನ 3:31 ರಿಂದ 5:04
ಯಮಗಂಡಕಾಲ: ಮಧ್ಯಾಹ್ನ 12:05 ರಿಂದ 1:58

ಮೇಷ: ಮೋಸ ತಂತ್ರಕ್ಕೆ ಬೀಳುವಿರಿ, ಮಾನಹಾನಿ ಸಂಭವ, ಮಾನಸಿಕ ವ್ಯಥೆ, ವಾಹನ ಚಾಲಕರಿಗೆ ತೊಂದರೆ, ನೀವಾಡುವ ಮಾತಿನಿಂದ ಅನರ್ಥ, ವಾರಾಂತ್ಯದಲ್ಲಿ ಲಾಭ.

ವೃಷಭ: ಸಾಲ ಮರುಪಾವತಿ, ಮನಸ್ಸಿನಲ್ಲಿ ಆತಂಕ, ಶರೀರದಲ್ಲಿ ತಳಮಳ, ಕುಲದೇವರ ದರ್ಶನ ಮಾಡಿ, ಕಪ್ಪು ಬಣ್ಣದ ವ್ಯಕ್ತಿಯಿಂದ ಧನ ಸಹಾಯ, ಶತ್ರುಗಳ ಬಾಧೆ, ಮಿಶ್ರ ಫಲ.

ಮಿಥುನ: ಆಸ್ತಿ ಖರೀದಿಗಾಗಿ ತಿರುಗಾಟ, ಶೀತ ಸಂಬಂಧಿತ ರೋಗ, ಕಾರ್ಯ ಬದಲಾವಣೆ, ಪರರಿಂದ ಮೋಸ, ಮಕ್ಕಳಿಂದ ನಿಂದನೆ, ಇಲ್ಲ ಸಲ್ಲದ ಅಪವಾದ, ದಾಂಪತ್ಯದಲ್ಲಿ ಕಲಹ, ಅತಿಯಾದ ದುಃಖ.

ಕಟಕ: ದ್ರವ್ಯ ಲಾಭ, ಸಂಪತ್ತು ಪ್ರಾಪ್ತಿ, ಕುಟುಂಬ ಸೌಖ್ಯ, ದಂಡ ಕಟ್ಟುವ ಸಾಧ್ಯತೆ, ರಾಜ ಭೀತಿ, ಗೆಳೆಯರಿಗಾಗಿ ಅಧಿಕ ಖರ್ಚು, ಸಂಬಂಧಿಕರಲ್ಲಿ ಅನರ್ಥ, ಭೂ ವಿಚಾರದಲ್ಲಿ ಕಲಹ.

ಸಿಂಹ: ದೈವಾನುಗ್ರಹದಿಂದ ಶುಭ, ಕೆಲಸ ಕಾರ್ಯಗಳಲ್ಲಿ ತೊಂದರೆ, ದೂರ ಪ್ರಯಾಣ, ಶತ್ರು ಭಯ, ವ್ಯವಹಾರದಲ್ಲಿ ಮೋಸ, ಅಲ್ಪ ಕಾರ್ಯ ಸಿದ್ಧಿ, ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ.

ಕನ್ಯಾ: ಚಿನ್ನಾಭರಣ ಖರೀದಿ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ, ಋಣ ವಿಮೋಚನೆ, ಮಾನಸಿಕ ನೆಮ್ಮದಿ, ಹೆತ್ತವರಿಂದ ಹಿತವಚನ, ವಾಹನ ಅಪಘಾತ, ಆರೋಗ್ಯ ಸಮಸ್ಯೆ, ಕೃಷಿಕರಿಗೆ ನಷ್ಟ.

ತುಲಾ: ಉದ್ಯೋಗದಲ್ಲಿ ಉತ್ತಮ, ಪ್ರೀತಿ ಪಾತ್ರರೊಡನೆ ಬಾಂಧವ್ಯ ವೃದ್ಧಿ, ಸಹೋದ್ಯೋಗಿಗಳಿಂದ ತೊಂದರೆ, ಸ್ಥಿರಾಸ್ತಿ ಮಾರಾಟ, ಆಕಸ್ಮಿಕ ಪ್ರಯಾಣ, ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಕ್ರಯ-ವಿಕ್ರಯಗಳಿಂದ ಅಲ್ಪ ಲಾಭ, ವಾಸ ಗೃಹದಲ್ಲಿ ತೊಂದರೆ, ಚಂಚಲ ಮನಸ್ಸು, ಯಾರನ್ನೂ ಹೆಚ್ಚು ನಂಬಬೇಡಿ, ಪಾಪ ಕಾರ್ಯದಲ್ಲಿ ಆಸಕ್ತಿ.

ಧನಸ್ಸು; ಹಣಕಾಸು ಸಂಪಾದನೆ, ವ್ಯಾಸಂಗದಲ್ಲಿ ತೊಂದರೆ, ಅನ್ಯ ಜನರಲ್ಲಿ ಪ್ರೀತಿ, ವಿವಾಹಕ್ಕೆ ಅಡೆತಡೆ, ರೋಗ ಬಾಧೆ, ಸ್ತ್ರೀಯರಿಗೆ ಅನಾರೋಗ್ಯ, ವೃಥಾ ತಿರುಗಾಟ, ಮನಃಶಾಂತಿ ಪ್ರಾಪ್ತಿ.

ಮಕರ: ಸರ್ಕಾರಿ ಕೆಲಸಗಳಲ್ಲಿ ಜಯ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಪಿತ್ರಾರ್ಜಿತ ಆಸ್ತಿ ಗಳಿಕೆ, ಇಷ್ಟವಾದ ವಸ್ತುಗಳ ಖರೀದಿ, ವ್ಯಾಪಾರದಲ್ಲಿ ದೃಷ್ಠಿದೋಷ, ಮನಸ್ಸಿನಲ್ಲಿ ಕೆಟ್ಟಾಲೋಚನೆ.

ಕುಂಭ: ಮನೆಯಲ್ಲಿ ನೆಮ್ಮದಿ, ಮಿತ್ರರ ಭೇಟಿ, ವೈದ್ಯಕೀಯ ಕ್ಷೇತ್ರದವರಿಗೆ ಲಾಭ, ಮಾನಸಿಕ ನೆಮ್ಮದಿ, ಮಕ್ಕಳಿಂದ ಸಂತಸ, ಕಾರ್ಯ ಸಾಧನೆಗಾಗಿ ತಿರುಗಾಟ, ಆತ್ಮೀಯರಿಂದ ಸಹಾಯ, ಆಕಸ್ಮಿಕ ಧನ ಲಾಭ.

ಮೀನ: ಕೆಲಸ ಕಾರ್ಯಗಳಲ್ಲಿ ಆಸಕ್ತಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಮಂಗಳ ಕಾರ್ಯಗಳಲ್ಲಿ ಭಾಗಿ, ಆರೋಗ್ಯದಲ್ಲಿ ಚೇತರಿಕೆ, ಭೋಗ ವಸ್ತು ಪ್ರಾಪ್ತಿ, ವಾಹನ ಖರೀದಿಗೆ ಚಿಂತನೆ.

Share This Article
Leave a Comment

Leave a Reply

Your email address will not be published. Required fields are marked *