Sunday, 22nd July 2018

Recent News

ದಿನಭವಿಷ್ಯ 27-07-2017

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ
ಬೆಳಗ್ಗೆ 7:01 ನಂತರ ಪಂಚಮಿ ತಿಥಿ,
ಗುರುವಾರ, ಉತ್ತರ ಫಾಲ್ಗುಣಿ ನಕ್ಷತ್ರ

ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:00

ರಾಹುಕಾಲ: ಮಧ್ಯಾಹ್ನ 2:05 ರಿಂದ 3:40
ಗುಳಿಕಕಾಲ: ಬೆಳಗ್ಗೆ 9:20 ರಿಂದ 10:55
ಯಮಗಂಡಕಾಲ: ಬೆಳಗ್ಗೆ 6:09 ರಿಂದ 7:45

ಮೇಷ: ಪಿತ್ರಾರ್ಜಿತ ಆಸ್ತಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಮಕ್ಕಳಿಂದ ಧನಾಗಮನ, ಉಷ್ಣ ಬಾಧೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ಸರ್ಕಾರಿ ಪತ್ರ ವ್ಯವಹಾರಗಳಲ್ಲಿ ಅನುಕೂಲ, ಮೇಲಾಧಿಕಾರಿಗಳಿಂದ ತೊಂದರೆ, ದಾಂಪತ್ಯದಲ್ಲಿ ವಿರಸ, ನಿದ್ರಾಭಂಗ, ಸ್ಥಿರಾಸ್ತಿ ತಗಾದೆ, ದಾಯಾದಿಗಳ ಕಲಹ.

ಮಿಥುನ: ಸರ್ಕಾರಿ ಕೆಲಸಗಳಲ್ಲಿ ಕಿರಿಕಿರಿ, ಹಣಕಾಸು ಖರ್ಚು, ಸಾಲದ ವಿಚಾರವಾಗಿ ವಾಗ್ವಾದ, ಉದ್ಯಮ-ವ್ಯವಹಾರಕ್ಕೆ ಸಹಕಾರ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ.

ಕಟಕ: ವ್ಯಾಪಾರಸ್ಥರಿಗೆ ಲಾಭ, ರಾಜಕೀಯ ಕ್ಷೇತ್ರದವರಿಗೆ ಅನುಕೂಲ, ಸರ್ಕಾರಿ ಅಧಿಕಾರಿಗಳಿಗೆ ಲಾಭ, ಹಣಕಾಸು ಖರ್ಚು, ಅಧಿಕ ಕೋಪ, ಆತುರ-ಅಹಂಭಾವ ಹೆಚ್ಚು.

ಸಿಂಹ: ಕೆಲಸ ಕಾರ್ಯಗಳಿಗೆ ಖರ್ಚು, ರಾಜಕೀಯ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಒತ್ತಡ, ನೆಮ್ಮದಿಗೆ ಭಂಗ, ಆರೋಗ್ಯದಲ್ಲಿ ಏರುಪೇರು, ವಿಶ್ರಾಂತಿ ತೆಗೆದುಕೊಳ್ಳುವ ಆಲೋಚನೆ.

ಕನ್ಯಾ: ಮಿತ್ರರೊಂದಿಗೆ ಪ್ರಯಾಣ, ಉದ್ಯಮದಲ್ಲಿ ಆಕಸ್ಮಿಕ ಲಾಭ, ಕೆಲಸಗಾರರ ಕೊರತೆ ನಿವಾರಣೆ, ರಾಜಕೀಯ ವ್ಯಕ್ತಿಗಳಿಂದ ಮೋಸ ಸಾಧ್ಯತೆ, ಸರ್ಕಾರಿ ಅಧಿಕಾರಿಯ ಮಕ್ಕಳಿಂದ ವಂಚನೆ ಸಾಧ್ಯತೆ.

ತುಲಾ: ಉದ್ಯೋಗಾವಕಾಶ ಪ್ರಾಪ್ತಿ, ಅಧಿಕ ಒತ್ತಡ, ಉದ್ಯೋಗ ಸ್ಥಳದಲ್ಲಿ ತೊಂದರೆ, ಪಾಪ ಪ್ರಜ್ಞೆ ಕಾಡುವುದು, ಆತ್ಮ ಸಂಕಟ.

ವೃಶ್ಚಿಕ: ಉದ್ಯೋಗ ನಿಮಿತ್ತ ಪ್ರಯಾಣ, ಸ್ವಯಂಕೃತ್ಯಗಳಿಂದ ಗೌರವಕ್ಕೆ ಧಕ್ಕೆ, ಅನ್ಯರ ತಪ್ಪಿನಿಂದ ಗೌರವಕ್ಕೆ ಚ್ಯುತಿ, ನೆರೆಹೊರೆಯವರಿಂದ ಕಿರಿಕಿರಿ, ಬಂಧುಗಳಿಂದ ಮಾನಸಿಕ ಹಿಂಸೆ.

ಧನಸ್ಸು: ಪ್ರಯಾಣದಲ್ಲಿ ದುರ್ಘಟನೆ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ತಂದೆಯಿಂದ ನೋವು, ಅನಗತ್ಯ ತೊಂದರೆಗೆ ಸಿಲುಕುವಿರಿ, ಮಾನಸಿಕ ವ್ಯಥೆ.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಅಹಂಭಾವದಿಂದ ಅವಕಾಶ ಕೈ ತಪ್ಪುವುದು, ಆರೋಗ್ಯದಲ್ಲಿ ಏರುಪೇರು.

ಕುಂಭ: ಸ್ಥಿರಾಸ್ತಿ ಮೇಲೆ ಸಾಲ ಮಾಡುವಿರಿ, ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಉದ್ಯೋಗ ಪ್ರಾಪ್ತಿ, ತಾಯಿಯನ್ನು ಶತ್ರುವಿನಂತೆ ಕಾಣವಿರಿ.

ಮೀನ: ಬಂಧುಗಳಿಂದ ಪಡೆದ ಸಾಲ ಬಾಧೆ, ಶುಭ ಕಾರ್ಯಗಳಿಗೆ ಖರ್ಚು, ಉದ್ಯೋಗ ಹುಡುಕಾಟ
ಸೇವಕರಿಂದ ಪ್ರಗತಿ ಕುಂಠಿತ.

Leave a Reply

Your email address will not be published. Required fields are marked *