ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಗುರುವಾರ, ರೇವತಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 1:56 ರಿಂದ 3:32
ಗುಳಿಕಕಾಲ: ಬೆಳಗ್ಗೆ 9:11 ರಿಂದ 10:47
ಯಮಗಂಡಕಾಲ: ಬೆಳಗ್ಗೆ 5:58 ರಿಂದ 7:35
Advertisement
ಮೇಷ: ಹಣಕಾಸು ವಿಚಾರವಾಗಿ ಕಲಹ, ಕುಟುಂಬದಲ್ಲಿ ಜಗಳ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ವ್ಯಾಪಾರೋದ್ಯಮದಲ್ಲಿ ಕಿರಿಕಿರಿ, ಆರ್ಥಿಕ ಸಂಕಷ್ಟ, ಕೌಟುಂಬಿಕ ಸಮಸ್ಯೆಯಿಂದ ನಿದ್ರಾಭಂಗ.
Advertisement
ವೃಷಭ: ಬಂಧುಗಳು ದೂರವಾಗುವರು, ಹಿರಿಯ ಸಹೋದರನಿಂದ ನಷ್ಟ, ದಾಂಪತ್ಯದಲ್ಲಿ ಜಗಳ, ಮಾನಸಿಕ ನೆಮ್ಮದಿ ಹಾಳು, ನಾನಾ ಅಲೋಚನೆಗಳಿಂದ ನಿದ್ರಾಭಂಗ.
Advertisement
ಮಿಥುನ: ಹಿರಿಯ ಸಹೋದರಿಯಿಂದ ಧನಾಗಮನ, ಸಾಲಗಾರರಿಂದ ಕಿರಿಕಿರಿ, ಶತ್ರುಗಳಿಂದ ತೊಂದರೆಗೆ ಸಿಲುಕುವಿರಿ, ಭೂ ವಿಚಾರವಾಗಿ ಕೋರ್ಟ್‍ಗೆ ಅಲೆದಾಟ.
Advertisement
ಕಟಕ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಉದ್ಯೋಗದಲ್ಲಿ ಹಿನ್ನಡೆಯಾದ್ರೂ ಪ್ರಗತಿ, ತಂದೆಯಿಂದ ಕಿರಿಕಿರಿ, ಉದ್ಯೋಗದಲ್ಲಿ ನಿರಾಸಕ್ತಿ.
ಸಿಂಹ: ಆಕಸ್ಮಿಕ ದುರ್ಘಟನೆ, ದೂರ ಪ್ರಯಾಣ ಸಾಧ್ಯತೆ, ಆಸ್ತಿ ವಿಚಾರದಲ್ಲಿ ತಂದೆ-ಮಕ್ಕಳಲ್ಲಿ ಕಲಹ, ಆಯುಷ್ಯಕ್ಕೆ ಕಂಟಕ ಸಾಧ್ಯತೆ ಎಚ್ಚರಿಕೆ.
ಕನ್ಯಾ: ಅನಿರೀಕ್ಷಿತ ಲಾಭ, ದಾಂಪತ್ಯದಲ್ಲಿ ವಿರಸ, ಅನಗತ್ಯ ಕಿರಿಕಿರಿ, ಮಾಂಗಲ್ಯಕ್ಕೆ ಕುತ್ತು ಬರುವ ಸಾಧ್ಯತೆ.
ತುಲಾ: ಸಂಗಾತಿಯೇ ಶತ್ರುವಾಗುವರು, ಸಾಲ ಬಾಧೆಗಳಿಂದ ತೊಂದರೆ, ಮನಸ್ಸಿಗೆ ಬೇಸರ, ನೀವಾಡುವ ಮಾತಿನಲ್ಲಿ ಎಚ್ಚರ.
ವೃಶ್ಚಿಕ: ಪ್ರಯಾಣದಲ್ಲಿ ಅಮೂಲ್ಯ ವಸ್ತುಗಳ ಕಳವು, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗಕ್ಕೆ ರಜೆ ಹಾಕುವಿರಿ, ಮೇಲಾಧಿಕಾರಿಗಳಿಂದ ಕಿರಿಕಿರಿ, ಮಕ್ಕಳ ಆರೋಗ್ಯದಲ್ಲಿ ಏರುಪೇರು.
ಧನಸ್ಸು: ಅವಮಾನಕ್ಕೆ ಗುರಿಯಾಗುವಿರಿ, ಮಾತೃವಿನಿಂದ ದೂರವಾಗುವ ಆಲೋಚನೆ, ಮಕ್ಕಳಿಂದ ತೊಂದರೆ, ನೆಮ್ಮದಿ ಇಲ್ಲದ ಜೀವನ, ಚಿಂತೆಯಿಂದ ನಿದ್ರಾಭಂಗ.
ಮಕರ: ಸ್ಥಿರಾಸ್ತಿ-ವಾಹನ ಪ್ರಾಪ್ತಿ, ಕುಟುಂಬದಲ್ಲಿ ವೈಮನಸ್ಸು, ಮಾನಸಿಕ ವ್ಯಥೆ, ಪ್ರೇಮ ವಿಚಾರದಲ್ಲಿ ತೊಂದರೆ, ಮೋಸ ಹೋಗುವ ಸಾಧ್ಯತೆ.
ಕುಂಭ: ಸ್ವಯಂಕೃತ ಅಪರಾಧಗಳಿಂದ ಆರ್ಥಿಕ ಸಂಕಷ್ಟ, ಬಂಧುಗಳಿಂದ ಕಿರಿಕಿರಿ, ಮಾನಸಿಕ ನೆಮ್ಮದಿ ಕಳೆದುಕೊಳ್ಳುವಿರಿ, ಕುಟುಂಬದಿಂದ ದೂರ ಉಳಿಯುವ ಆಲೋಚನೆ.
ಮೀನ: ಹೆಣ್ಣು ಮಕ್ಕಳಿಂದ ಧನಾಗಮನ, ಕುಟುಂಬ ಸಮೇತ ಪುಣ್ಯಕ್ಷೇತ್ರಕ್ಕೆ ಪ್ರಯಾಣ, ಹಣಕಾಸು ವಿಚಾರವಾಗಿ ಕಲಹ, ದಾಯಾದಿಗಳೊಂದಿಗೆ ಜಗಳ, ಬಂಧು-ಮಿತ್ರರಲ್ಲಿ ವೈಮನಸ್ಸು.