ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಶನಿವಾರ, ಶ್ರಾವಣ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:13 ರಿಂದ 10:47
ಗುಳಿಕಕಾಲ: ಬೆಳಗ್ಗೆ 6:06 ರಿಂದ 7:39
ಯಮಗಂಡಕಾಲ: ಮಧ್ಯಾಹ್ನ 1:55 ರಿಂದ 3:29
Advertisement
ಮೇಷ: ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಅನಿರೀಕ್ಷಿತ ಆದಾಯ ಲಭಿಸುವುದು, ಸ್ಥಿರಾಸ್ತಿ ವಿಚಾರದಲ್ಲಿ ಅನುಕೂಲ, ನಾನಾ ಮೂಲಗಳಿಂದ ಧನ ಲಾಭ, ವಾಹನಗಳ ಬಗ್ಗೆ ಆಸಕ್ತಿ.
Advertisement
ವೃಷಭ: ಮಕ್ಕಳಲ್ಲಿ ಸೋಮಾರಿತನ, ಹಠ ಹೆಚ್ಚಾಗುವುದು, ಉದ್ಯೋಗ ಸ್ಥಳದಲ್ಲಿ ನಷ್ಟ, ಬಂಧುಗಳಿಂದ ಕಿರಿಕಿರಿ, ದಾಂಪತ್ಯದಲ್ಲಿ ಕಲಹ.
Advertisement
ಮಿಥುನ: ಬಾಡಿಗೆದಾರರಿಂದ ಸಮಸ್ಯೆ, ಸೇವಕರಿಂದ ತೊಂದರೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಆಕಸ್ಮಿಕ ಧನಾಗಮನ, ಅನಿರೀಕ್ಷಿತ ಸಾಲ ಮಾಡುವಿರಿ.
Advertisement
ಕಟಕ: ಸಂಸಾರದ ಬಗ್ಗೆ ಯೋಚನೆ, ಉದ್ಯೋಗ ಸ್ಥಳದಲ್ಲಿ ಬೇಸರ, ಕಾರ್ಯ ಅಭಿವೃದ್ಧಿಗೆ ಹಿನ್ನಡೆ, ಕೆಲಸಗಳಲ್ಲಿ ಹಿನ್ನಡೆ, ಮಕ್ಕಳಿಂದ ಅನುಕೂಲ.
ಸಿಂಹ: ಒಂಟಿಯಾಗಿರಲು ಇಷ್ಟ ಪಡುವಿರಿ, ಸ್ಥಿರಾಸ್ತಿ-ವಾಹನಗಳಿಂದ ನಷ್ಟ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ತಂದೆಯೊಡನೆ ಶತ್ರುತ್ವ ವೃದ್ಧಿ.
ಕನ್ಯಾ: ಹೆಣ್ಣು ಮಕ್ಕಳಿಂದ ಅನುಕೂಲ, ಮಿತ್ರರಿಂದ ಸಹಕಾರ, ಆಕಸ್ಮಿಕ ಪ್ರಯಾಣ, ಪ್ರೇಮ ವಿಚಾರದಲ್ಲಿ ಮನಃಸ್ತಾಪ.
ತುಲಾ: ಆರ್ಥಿಕ ಮುಗ್ಗಟ್ಟು, ಭವಿಷ್ಯದ ಬಗ್ಗೆ ಯೋಚನೆ, ಟ್ರಾವೆಲ್ಸ್‍ನವರಿಗೆ ಲಾಭ, ಮಾರಾಟ ಕ್ಷೇತ್ರದಲ್ಲಿ ಅನುಕೂಲ, ಸಂಗಾತಿ-ಮಕ್ಕಳೊಂದಿಗೆ ವಾಗ್ವಾದ.
ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ, ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ, ಆತ್ಮ ವಿಮರ್ಶೆ ಮಾಡಿಕೊಳ್ಳುವಿರಿ, ಪರಿಶ್ರಮಕ್ಕೆ ತಕ್ಕ ಪ್ರತಿಫಲ, ಈ ದಿನ ಎಚ್ಚರಿಕೆಯ ನಡೆ ಅಗತ್ಯ.
ಧನಸ್ಸು: ನಡೆದ ದುರ್ಘಟನೆ ಹೆಚ್ಚು ಕಾಡುವುದು, ಕಾರಣವಿಲ್ಲದೇ ಆತ್ಮೀಯರು ದೂರವಾಗುವರು, ಬಂಧುಗಳೊಂದಿಗೆ ಕಿರಿಕಿರಿ, ಮಕ್ಕಳ ಭವಿಷ್ಯದ ಬಗ್ಗೆ ಅಧಿಕ ಚಿಂತನೆ.
ಮಕರ: ಸ್ವಂತ ವ್ಯಾಪಾರ ವ್ಯವಹಾರದಲಿ ಲಾಭ, ಭೂಮಿಯಿಂದ ಅನುಕೂಲ, ಸಂಗಾತಿ ಬಗ್ಗೆ ಒಲವು, ಸಂಬಂಧಗಳಿಗೆ ಮನಸ್ಸು.
ಕುಂಭ: ವ್ಯವಹಾರಗಳಲ್ಲಿ ವ್ಯರ್ಥ ಪ್ರಯತ್ನ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಶೀತ ಸಂಬಂಧಿತ ಸಮಸ್ಯೆ, ರೋಗ ಬಾಧೆ, ಬಂಧುಗಳಿಂದ ಹಣಕಾಸು ಸಹಾಯ ಕೇಳುವಿರಿ.
ಮೀನ: ಒಂಟಿಯಾಗಿರಬೇಕೆಂಬ ಆಸೆ, ಮಕ್ಕಳಿಂದ ಉತ್ತಮ ಗೌರವ, ಗೌರವ ಪ್ರತಿಷ್ಠೆ ಲಭಿಸುವುದು, ಕೆಲಸ ಕಾರ್ಯಗಳಲ್ಲಿ ಜಯ.