ಶ್ರೀ ಕ್ರೋಧಿನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಕೃಷ್ಣ ಪಕ್ಷ,
ತ್ರಯೋದಶಿ, ಗುರುವಾರ,
ಶತಭಿಷ ನಕ್ಷತ್ರ.
ರಾಹುಕಾಲ 02:00 ರಿಂದ 03:31
ಗುಳಿಕಕಾಲ 09:26 ರಿಂದ 10:57
ಯಮಗಂಡಕಾಲ 06:23 ರಿಂದ 07:55
ಮೇಷ: ವಾಹನ ಭೂಮಿಯಿಂದ ಅನುಕೂಲ, ಅನಾರೋಗ್ಯ, ಮಾತಿನಿಂದ ಸಮಸ್ಯೆ, ವಿಪರೀತ ಕೋಪ, ಆತಂಕ, ಗುಪ್ತ ವಿಷಯಗಳಿಂದ ಅಪವಾದ.
ವೃಷಭ: ಯಂತ್ರೋಪಕರಣಗಳಿಗೆ ಖರ್ಚು, ಆತುರದ ನಿರ್ಧಾರದಿಂದ ಸಂಕಷ್ಟ, ಸಂಗಾತಿಯ ಬೇಜವಾಬ್ದಾರಿತನ, ದೂರ ಪ್ರದೇಶದಲ್ಲಿ ಉದ್ಯೋಗ ಅನುಕೂಲ.
ಮಿಥುನ: ದುಃಸ್ವಪ್ನಗಳು, ಶತ್ರು ಕಾಟ, ಸಾಲಭಾದೆ, ಕುಟುಂಬಸ್ಥರಿಂದ ವಿರೋಧ, ತಂದೆಯಿಂದ ಅಸಹಕಾರ, ಮಾತಿನಿಂದ ಸಂಕಷ್ಟ.
ಕಟಕ: ಉದ್ಯೋಗ ಲಾಭ, ಸ್ನೇಹಿತರಿಂದ ಸಹಕಾರ, ಸ್ತ್ರೀಯರಿಂದ ನೋವು, ಮಕ್ಕಳಿಂದ ಅದೃಷ್ಟ ಮತ್ತು ಯೋಗ.
ಸಿಂಹ: ಸ್ಥಿರಾಸ್ತಿ ಯೋಗ, ಕೈಗಾರಿಕೆಯವರಿಗೆ ಅನುಕೂಲ, ಉದ್ಯೋಗ ಬದಲಾವಣೆಯ ಅದೃಷ್ಟ, ತಂದೆಯಿಂದ ಸಹಕಾರ.
ಕನ್ಯಾ: ಕೋರ್ಟ್ ಕೇಸ್‌ಗಳಲ್ಲಿ ಒದ್ದಾಟ, ಕಲಹಗಳು ಅಪವಾದ ಅಪ ನಿಂದನೆ, ಸೋಲು ನಷ್ಟ ನಿರಾಸೆ, ಅನಗತ್ಯ ತಿರುಗಾಟ.
ತುಲಾ: ಅನಿರೀಕ್ಷಿತ ಧನಾಗಮನ, ಸಂಗಾತಿಯಿಂದ ಆರ್ಥಿಕ ನೆರವು, ಪಾಲುದಾರಿಕೆಯಲ್ಲಿ ಬೇಸರ, ದಾಂಪತ್ಯದಲ್ಲಿ ತೊಂದರೆ.
ವೃಶ್ಚಿಕ: ಉಡಾಫೆಯ ನಡವಳಿಕೆ, ದಾಂಪತ್ಯದಲ್ಲಿ ವಿರಸ, ಅನಾರೋಗ್ಯ, ಪ್ರಯಾಣದಲ್ಲಿ ಗೊಂದಲಗಳು.
ಧನಸ್ಸು: ಶತ್ರು ದಮನ, ಭಾವನಾತ್ಮಕ ಅಸಮಾಧಾನದಿಂದ ಕೋಪ, ಮಕ್ಕಳಿಂದ ಅನುಕೂಲ, ಉದ್ಯೋಗ ಲಾಭ.
ಮಕರ: ಸ್ಥಿರಾಸ್ತಿಯಿಂದ ಶುಭಫಲ, ದೂರದ ವ್ಯಕ್ತಿಗಳಿಂದ ಅನುಕೂಲ, ರಕ್ತಸಂಬಂಧಿಗಳಿಂದ ನೋವು, ಮಾಟ ಮಂತ್ರ ತಂತ್ರದ ಸನ್ನಿವೇಶ.
ಕುಂಭ: ದಾಯಾದಿಗಳಿಂದ ತೊಂದರೆ, ಸ್ಥಿರಾಸ್ತಿ ವಾಹನ ಲಾಭ, ಮಹಿಳೆಯರಿಂದ ಅನುಕೂಲ, ನೆರೆಹೊರೆಯವರಿಂದ ಒತ್ತಡ.
ಮೀನ: ಆರ್ಥಿಕ ಚೇತರಿಕೆ, ಉದ್ಯೋಗ ಬದಲಾವಣೆಯಿಂದ ಅವಕಾಶ ಪ್ರಾಪ್ತಿ, ಮಹಿಳೆಯರಿಂದ ತೊಂದರೆಯಾಗುವ ಆತಂಕ, ಪ್ರೇಮಿಗಳಲ್ಲಿ ಮನಸ್ತಾಪ.