ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಶುಕ್ರವಾರ, ಅಶ್ವಿನಿ ನಕ್ಷತ್ರ
ಬೆಳಗ್ಗೆ 10:10 ನಂತರ ಭರಣಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:57 ರಿಂದ 12:23
ಗುಳಿಕಕಾಲ: ಬೆಳಗ್ಗೆ 7:55 ರಿಂದ 9:26
ಯಮಗಂಡಕಾಲ: ಮಧ್ಯಾಹ್ನ 3:31 ರಿಂದ 5:02
Advertisement
ಮೇಷ: ಕೃಷಿಕರಿಗೆ ಲಾಭ, ವ್ಯಾಪಾರಿಗಳಿಗೆ ಧನಾಗಮನ, ಸ್ಥಿರಾಸ್ತಿ ಲಾಭ, ವಾಹನದಿಂದ ಅನುಕೂಲ, ವಸ್ತ್ರಾಭರಣ ಖರೀದಿಯಲ್ಲಿ ಮೋಸ.
Advertisement
ವೃಷಭ: ಆರೋಗ್ಯ ಸಮಸ್ಯೆ, ಮಾನಸಿಕ ವೇದನೆ, ಸ್ಥಿರಾಸ್ತಿ ವ್ಯವಹಾರಗಳಲ್ಲಿ ಅನುಕೂಲ, ಮೋಜು-ಮಸ್ತಿಗಾಗಿ ಅಧಿಕ ಖರ್ಚು.
Advertisement
ಮಿಥುನ: ಕುಟುಂಬ ಸಮೇತ ಪ್ರಯಾಣ, ಮಕ್ಕಳಿಂದ ಆರ್ಥಿಕ ಸಂಕಷ್ಟ, ಪ್ರೇಮ ವಿಚಾರದಲ್ಲಿ ತಗಾದೆ, ಮಿತ್ರರಿಂದ ನಂಬಿಕೆ ದ್ರೋಹ.
Advertisement
ಕಟಕ: ವ್ಯಾಪಾರಸ್ಥರಿಗೆ ಅಧಿಕ ಲಾಭ, ಮಕ್ಕಳೊಂದಿಗೆ ವಾಗ್ವಾದ, ಅನಗತ್ಯ ಮಾತುಗಳಿಂದ ತೊಂದರೆ, ಸ್ತ್ರೀಯರಿಂದ ಬೈಗುಳ ಕೇಳುವಿರಿ.
ಸಿಂಹ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೆಲಸಗಳಲ್ಲಿ ನಿರುತ್ಸಾಹ, ಕಲಾವಿದರಿಗೆ ತೊಂದರೆ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಯೋಚನೆಯಿಂದ ನಿದ್ರಾಭಂಗ.
ಕನ್ಯಾ: ವಿಪರೀತ ಆರ್ಥಿಕ ಸಂಕಷ್ಟ, ಆಕಸ್ಮಿಕ ಅವಘಡ, ಪ್ರಯಾಣ ಮಾಡುವಿರಿ, ದಾಂಪತ್ಯದಲ್ಲಿ ಕಿರಿಕಿರಿ, ಸಂಗಾತಿಯಿಂದ ದೂರವಾಗುವ ಆಲೋಚನೆ.
ತುಲಾ: ಉದ್ಯೋಗ-ವ್ಯಾಪಾರದಲ್ಲಿನ ಬಾಕಿ ಹಣ ಪ್ರಾಪ್ತಿ, ಮಹಿಳಾ ಮಿತ್ರರೊಂದಿಗೆ ಕಲಹ, ಮಾನಸಿಕ ವ್ಯಥೆ, ದುಶ್ಚಟಗಳಿಗೆ ಮನಸ್ಸು.
ವೃಶ್ಚಿಕ: ಐಷಾರಾಮಿ ಜೀವನಕ್ಕೆ ಮನಸ್ಸು, ವಿಪರೀತ ಖರ್ಚು, ವ್ಯಾಪಾರ-ವ್ಯವಹಾರದಲ್ಲಿ ಬಂಡವಾಳ ನಷ್ಟ, ಉದ್ಯೋಗ ಸ್ಥಳದಲ್ಲಿ ನೆಮ್ಮದಿ, ಮಿತ್ರರೊಂದಿಗೆ ಸಂತಸ.
ಧನಸ್ಸು: ಭಾವನೆಗಳಲ್ಲಿ ವಿಹಾರ, ಹಿರಿಯ ಸಹೋದರಿಯಿಂದ ಲಾಭ, ಮಿತ್ರರಿಂದ ಅನುಕೂಲ, ಪ್ರಯಾಣದಲ್ಲಿ ಅಮೂಲ್ಯ ವಸ್ತುಗಳ ಕಳವು.
ಮಕರ: ಪ್ರೇಮ ವಿಚಾರದಲ್ಲಿ ತೊಂದರೆ, ಗಾಳಿ ಮಾತುಗಳಿಂದ ಸಂಸಾರದಲ್ಲಿ ಕಿರಿಕಿರಿ, ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ.
ಕುಂಭ: ವಿಪರೀತ ರಾಜಯೋಗ, ಸಂಗಾತಿಯಿಂದ ಶುಭ, ಸ್ನೇಹಿತರಿಂದ ಸಮಸ್ಯೆಗೆ ಮುಕ್ತಿ, ಮಾನಸಿಕ ರೋಗ ಬಾಧೆ.
ಮೀನ: ರೋಗ ಬಾಧೆ, ಸಂತಾನ ದೋಷ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಕೌಟುಂಬಿಕ ಸಮಸ್ಯೆ ನಿವಾರಣೆ, ಉದ್ಯೋಗ ಬದಲಾವಣೆಯಿಂದ ಉತ್ತಮ ಅವಕಾಶ.