Astrology

ದಿನ ಭವಿಷ್ಯ: 26-09-2021

Published

on

Daily Horoscope in Kannada
Share this

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಕೃಷ್ಣ ಪಕ್ಷ,
ವಾರ: ಭಾನುವಾರ,
ತಿಥಿ: ಪಂಚಮಿ,
ನಕ್ಷತ್ರ: ಕೃತಿಕ,
ರಾಹುಕಾಲ: 4.47 ರಿಂದ 6.17
ಗುಳಿಕಕಾಲ: 3.16 ರಿಂದ 4.47
ಯಮಗಂಡಕಾಲ: 12.15 ರಿಂದ 1.45

ಮೇಷ: ಶ್ರಮವಹಿಸಿ ಕೆಲಸ ಮಾಡಿ, ಕುಟುಂಬ ಸೌಖ್ಯ, ಸಾಲಭಾದೆ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ, ಶುಭ ಸಮಯ, ವ್ಯಾಪರಸ್ಥರಿಗೆ ಅಧಿಕ ಲಾಭ.

ವೃಷಭ: ಕೀರ್ತಿ ಲಾಭ, ದುಡುಕು ಸ್ವಭಾವ, ವಾಹನ ರಿಪೇರಿ, ವ್ಯರ್ಥ ಧನಹಾನಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಉನ್ನತ ಶಿಕ್ಷಣಕ್ಕೆ ದೂರ ಪ್ರಯಾಣ, ಭೂಲಾಭ.

ಮಿಥುನ: ಮಹಿಳೆಯರಿಗೆ ಶುಭ, ಅಧಿಕಾರಿಗಳಿಂದ ಪ್ರಶಂಸೆ, ವಸ್ತ್ರಖರೀದಿ, ಸುಖ ಭೋಜನ, ಇತರರ ಮಾತಿನಿಂದ ಕಲಹ, ಪ್ರಭಾವಿ ವ್ಯಕ್ತಿಗಳ ಭೇಟಿ, ನೆಮ್ಮದಿ, ಶಾಂತಿ, ನಾನಾ ವಿಚಾರಗಳಲ್ಲಿ ಆಸಕ್ತಿ.

ಕಟಕ: ಪಟ್ಟುಬಿಡದೆ ಹಿಡಿದ ಕೆಲಸ ಮಾಡುವಿರಿ, ಶತ್ರು ಭಾದೆ, ಸಂಬಂಧಿಗಳಿಂದ ದೂರವಿರಿ, ಆದಾಯಕ್ಕೆ ತಕ್ಕ ಖರ್ಚು, ಉದ್ಯೋಗದಲ್ಲಿ ಅಭಿವೃದ್ಧಿ.

ಸಿಂಹ: ಸತ್ಕಾರ್ಯಾಸಕ್ತಿ, ನಗದು ವ್ಯವಹಾರಗಳಲ್ಲಿ ಎಚ್ಚರ, ಹಿತಶತ್ರುಗಳಿಂದ ತೊಂದರೆ, ಶರೀರದಲ್ಲಿ ತಳಮಳ, ಮಾಡುವ ಕೆಲಸದಲ್ಲಿ ಹಿಂಜರಿಕೆ, ದೇವತಾ ಕಾರ್ಯಗಳಲ್ಲಿ ಭಾಗಿ.

ಕನ್ಯಾ: ಎಲ್ಲರ ಮನಸ್ಸನ್ನು ಗೆಲ್ಲುವಿರಿ, ವಾಕ್ಸಮರ, ವಿಪರೀತ ಹಣವ್ಯಯ, ನೆಮ್ಮದಿ ಇಲ್ಲದ ಜೀವನ, ಮಿತ್ರರ ಭೇಟಿ, ಕೃಷಿಕರಿಗೆ ಉತ್ತಮ ಲಾಭ, ಆಕಸ್ಮಿಕ ಧನಲಾಭ.

ತುಲಾ: ಆರ್ಥಿಕ ಅಭಿವೃದ್ಧಿ ಹೊಂದುವಿರಿ, ಚಂಚಲ ಮನಸ್ಸು, ಅಧಿಕ ತಿರುಗಾಟ, ಹೇಳಲಾರದಂತಹ ಸಂಕಟ, ವಿದ್ಯಾರ್ಥಿಗಳು ಓದಿನ ಕಡೆ ಗಮನ ಹರಿಸಿ, ಶತ್ರು ಬಾಧೆ.

ವೃಶ್ಚಿಕ: ಉಪಕರಣಗಳ ಖರೀದಿ, ಪ್ರವಾಸ ಸಾಧ್ಯತೆ, ಸ್ಥಿರಾಸ್ತಿ ಸಂಪಾದನೆ, ಮಿತ್ರರಿಂದ ವಂಚನೆ, ಕೈಹಾಕಿದ ಕೆಲಸಗಳಲ್ಲಿ ಅಡಚಣೆ, ಪುಣ್ಯಕ್ಷೇತ್ರ ದರ್ಶನ.

ಧನಸ್ಸು: ಉದ್ಯೋಗದಲ್ಲಿ ಪ್ರಗತಿ, ಆಪ್ತರಿಂದ ಸಹಾಯ, ಮಾನಸಿಕ ನೆಮ್ಮದಿ, ಸ್ತ್ರೀ ಲಾಭ, ಅಮೂಲ್ಯ ವಸ್ತುಗಳ ಖರೀದಿ, ಬಾಕಿ ಹಣ ವಸೂಲಿ.

ಮಕರ: ಸಣ್ಣಪುಟ್ಟ ವಿಷಯಗಳಿಂದ ಕಲಹ, ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ಧನಲಾಭ,ಮಾನಸಿಕ ನೆಮ್ಮದಿ, ಸಲ್ಲದ ಅಪವಾದ ನಿಂದನೆ, ಋಣಭಾದೆ, ವಾಹನ ಯೋಗ.

ಕುಂಭ: ಸಮಾಧಾನದಿಂದ ವರ್ತಿಸಿ, ಪರರಿಂದ ತೊಂದರೆ,ಅನಾರೋಗ್ಯ, ಅಪರಿಚಿತರ ವಿಷಯದಲ್ಲಿ ಜಾಗೃತರಾಗಿರಿ, ಅಪವಾದದಿಂದ ಮುಕ್ತರಾಗುವಿರಿ, ಉತ್ತಮ ವಾರ.

ಮೀನ: ಕೆಲಸ ಕಾರ್ಯಗಳಲ್ಲಿ ಜಯ, ನಿಮ್ಮ ಶ್ರಮಕ್ಕೆ ತಕ್ಕ ಫಲ, ವಿವೇಚನೆ ಕಳೆದುಕೊಳ್ಳಬೇಡಿ, ವ್ಯಾಪಾರದಲ್ಲಿ ಲಾಭ, ಸ್ನೇಹಿತರಿಗೆ ಸಹಾಯ, ವೈರಿಗಳಿಂದ ದೂರವಿರಿ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications