AstrologyDina BhavishyaDistrictsKarnatakaLatestMain Post

ದಿನ ಭವಿಷ್ಯ: 26-08-2022

ಪಂಚಾಂಗ: ಶ್ರೀ ಶುಭಕೃತನಾಮ ಸಂವತ್ಸರೆ, ದಕ್ಷಿಣಾಯಣ,
ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಚತುರ್ದಶಿ
(ಹಗಲು 12:25) ನಂತರ ಅಮಾವಾಸ್ಯೆ.
ರಾಹುಕಾಲ: 10:52 ರಿಂದ 12:25
ಗುಳಿಕಕಾಲ: 07:46 ರಿಂದ 09:19
ಯಮಗಂಡಕಾಲ: 03:31 ರಿಂದ 05:04
ವಾರ: ಶುಕ್ರವಾರ
ನಕ್ಷತ್ರ:
ಆಶ್ಲೇಷ ನಕ್ಷತ್ರ

ಮೇಷ: ಸ್ಥಿರಾಸ್ತಿ ಮೇಲೆ ಸಾಲ, ಶತ್ರುಗಳ ದಮನ, ಶತ್ರುಗಳೆಂದರೆ ಅನುಕೂಲ, ಪಿತ್ತ ದೋಷ, ಕಣ್ಣಿನ ಸಮಸ್ಯೆ, ತಲೆ ನೋವು ಅಥವಾ ತಲೆ ಕೂದಲು ಉದುರುವುದು, ಬೆನ್ನು ಸೆಳೆತ, ಬೆನ್ನುಹುರಿ, ಸೊಂಟ ನೋವು, ಬಂಧುಗಳಿಂದ ತೊಂದರೆ, ಪ್ರೀತಿ ಪಾತ್ರವರದಿಂದಲೇ ಸಮಸ್ಯೆ, ಸಾಲದ ಭಯಭೀತಿ, ತಂದೆ ಅಥವಾ ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.

ವೃಷಭ: ಬಂಧುಗಳಿಂದ ಸಹಕಾರ, ಆರ್ಥಿಕಾಭಿವೃದ್ಧಿ, ಸ್ಥಿರಾಸ್ತಿಯಿಂದ ಅನುಕೂಲ, ಸರ್ಕಾರ ಮತ್ತು ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಅತಿಯಾದ ಪ್ರೀತಿ ಪ್ರೇಮ, ಭಾವನೆಗಳು ನೇರ ನಡೆ-ನುಡಿ, ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸ ಪ್ರಗತಿ.

ಮಿಥುನ: ಸ್ವಂತ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಧೈರ್ಯದಿಂದ ಕಾರ್ಯ ಜಯ, ಪ್ರಯಾಣದಿಂದ ಅನುಕೂಲ, ಕುಟುಂಬದಿಂದ ಸಹಕಾರ, ಸ್ಥಿರಾಸ್ತಿ ಮತ್ತು ವಾಹನದಿಂದ ನಷ್ಟ, ಮಾರಾಟದಲ್ಲಿ ಹಿನ್ನಡೆ, ತಾಯಿಯಿಂದ ಸಹಕಾರ ಕೋಪತಾಪಗಳು.

ಕಟಕ: ಆರ್ಥಿಕ ನಷ್ಟ ಮಾತಿನಿಂದ ಸಮಸ್ಯೆ, ನಿದ್ರಾಭಂಗ, ಕುಟುಂಬ ಕಲಹ, ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ.

ಸಿಂಹ: ದುಃಸ್ವಪ್ನಗಳು, ಆರ್ಥಿಕ ಸರ್ಕಾರಿ ಅಥವಾ ರಾಜಕೀಯ ಕೆಲಸಕಾರ್ಯಗಳಿಗೆ ಖರ್ಚು, ಕುಟುಂಬದಿಂದ ಸಹಕಾರ.

ಕನ್ಯಾ: ದೂರ ಪ್ರಯಾಣ, ಅಧಿಕ ಖರ್ಚು, ಉದ್ಯೋಗ ಸ್ಥಳಗಳಲ್ಲಿ ಕಿರಿಕಿರಿ, ಮೇಲಾಧಿಕಾರಿಗಳಿಂದ ಸಮಸ್ಯೆ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಹಿನ್ನಡೆ.

ತುಲಾ: ಲಾಭ-ನಷ್ಟ ಸಮ ಪ್ರಮಾಣ, ಆರೋಗ್ಯದಲ್ಲಿ ಏರುಪೇರು, ಆತ್ಮ ಸಂಕಟ, ತಂದೆಗೋಸ್ಕರ ಖರ್ಚು, ಬಂಧುಗಳಿಂದ ಸಹಕಾರ, ಉನ್ನತ ವಿದ್ಯಾಭ್ಯಾಸದಲ್ಲಿ ಅನುಕೂಲ.

ವೃಶ್ಚಿಕ: ಉದ್ಯೋಗದಲ್ಲಿ ಅನುಕೂಲ, ಸ್ನೇಹಿತರಿಂದ ಸಹಕಾರ, ಸರ್ಕಾರಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು, ಕೋರ್ಟ್ ಕೇಸ್ ಗಳಲ್ಲಿ ಜಯ.

ಧನಸು: ತಂದೆಯಿಂದ ಸಹಕಾರ, ಉದ್ಯೋಗದ ಬದಲಾವಣೆ ಮನಸ್ಸು, ಅನಿರೀಕ್ಷಿತ ಧನಾಗಮನ, ಸಂಗಾತಿ ನಡವಳಿಕೆಯಿಂದ ಬೇಸರ, ಪ್ರಯಾಣದಲ್ಲಿ ಅನುಕೂಲ, ಆರ್ಥಿಕ ಹಿನ್ನಡೆ, ಆಯುಷ್ಯದ ಚಿಂತೆ.

ಮಕರ: ಉದ್ಯೋಗ ಸ್ಥಳದಲ್ಲಿ ಒತ್ತಡ, ಕೋರ್ಟ್ ಕೇಸ್‌ಗಳಿಂದ ಅಲೆದಾಟ, ಮೇಲಧಿಕಾರಿ ಅಥವಾ ರಾಜಕೀಯ ವ್ಯಕ್ತಿಗಳಿಂದ ಕಿರಿಕಿರಿ, ಸರ್ಕಾರದಿಂದ ನಷ್ಟ, ಉದ್ಯೋಗ ಬದಲಾವಣೆ ಆಲೋಚನೆ, ಸಂಗಾತಿಯಿಂದ ಬೇಸರ.

ಕುಂಭ: ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸ, ಸಂಗಾತಿಯಿಂದ ಆರ್ಥಿಕ ನೆರವು, ದಾಂಪತ್ಯದಲ್ಲಿ ಕಿರಿಕಿರಿ, ಮಕ್ಕಳಿಂದ ಸಮಸ್ಯೆ, ಭಾವನಾತ್ಮಕ ಸೋಲು.

ಮೀನ: ಆರೋಗ್ಯದಲ್ಲಿ ಏರುಪೇರು, ಶತ್ರು ಬಾಧೆ, ಸ್ಥಿರಾಸ್ತಿ ಗಾಗಿ ಸಾಲ, ತಾಯಿಯಿಂದ ಸಹಕಾರದ ನಿರೀಕ್ಷೆ, ಆತ್ಮೀಯರಿಂದ ನೋವು, ಅಧಿಕ ನಷ್ಟ.

Live Tv

Leave a Reply

Your email address will not be published.

Back to top button