ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಶುಕ್ರವಾರ, ಉತ್ತರಾಷಾಢ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 10:47 ರಿಂದ 12:21
ಗುಳಿಕಕಾಲ: ಬೆಳಗ್ಗೆ 7:39 ರಿಂದ 9:13
ಯಮಗಂಡಕಾಲ: ಮಧ್ಯಾಹ್ನ 3:29 ರಿಂದ 5:03
Advertisement
ಮೇಷ: ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ತಾಯಿ ಕಡೆಯಿಂದ ಅನುಕೂಲ, ಉತ್ಪನ್ನ ಕ್ಷೇತ್ರಗಳಲ್ಲಿ ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ ಲಭಿಸುವುದು.
Advertisement
ವೃಷಭ: ಬಂಧು-ಮಿತ್ರರೊಂದಿಗೆ ಪ್ರಯಾಣ ಸಾಧ್ಯತೆ, ದಾಂಪತ್ಯದಲ್ಲಿ ಆಲಸ್ಯ, ಮನಸ್ಸಿಗೆ ಬೇಸರ, ಮಾಡುವ ಕೆಲಸಗಳಲ್ಲಿ ನಿರಾಸೆ, ಮನಸ್ಸಿನಲ್ಲಿ ಜಿಗುಪ್ಸೆ, ಪಾಲುದಾರಿಕೆ ವ್ಯವಹಾರದಲ್ಲಿ ನೋವು.
Advertisement
ಮಿಥುನ: ಆಕಸ್ಮಿಕ ಧನಾಗಮನ, ಕೋರ್ಟ್ ಕೇಸ್‍ಗಳಲ್ಲಿ ಜಯ, ಬಂಧುಗಳಿಂದ ಸಾಲ ಮಾಡುವಿರಿ, ಈ ದಿನ ಶುಭ ಫಲ ಪ್ರಾಪ್ತಿ.
ಕಟಕ: ವ್ಯಾಪಾರ-ವ್ಯವಹಾರದಲ್ಲಿ ಲಾಭ, ದುಶ್ಚಟಗಳು ಹೆಚ್ಚಾಗುವುದು, ಜೂಜು, ರೇಸ್, ಇಸ್ಪಿಟ್ ಆಟಗಳಿಂದ ಸಂಕಷ್ಟ,ಕುಟುಂಬಸ್ಥರಿಂದಲೇ ಮಾನಹಾನಿ, ಈ ದಿನ ಎಚ್ಚರಿಕೆಯ ನಡೆ ಅಗತ್ಯ.
ಸಿಂಹ: ಶತ್ರುಗಳಿಂದ ಕಿರಿಕಿರಿ, ಕೆಲಸಗಾರರಿಂದ ತೊಂದರೆ, ಕುಟುಂಬಸ್ಥರಿಂದ ನಷ್ಟ, ಸಾಲ ಬಾಧೆ, ಮಾನಸಿಕ ವ್ಯಥೆ, ಗ್ಯಾಸ್ಟ್ರಿಕ್-ಸಂಧಿವಾತ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.
ಕನ್ಯಾ: ಮಿತ್ರರಿಂದ ಉತ್ತಮ ಗೌರವ, ಕಿರಿಯ ಸಹೋದರನಿಂದ ತೊಂದರೆ, ಮಾನಸಿಕ ನೋವು, ಪ್ರಯಾಣದಲ್ಲಿ ಅಡೆತಡೆ.
ತುಲಾ: ಕೃಷಿ ಚಟುವಟಿಕೆಗಳಿಂದ ಲಾಭ, ಉದ್ಯೋಗ ಸ್ಥಳದಲ್ಲಿ ಒತ್ತಡ, ಮಾನಸಿಕವಾಗಿ ಕಿರಿಕಿರಿ, ನೀವಾಡುವ ಮಾತಿನಿಂದ ತಾಯಿಗೆ ನೋವು.
ವೃಶ್ಚಿಕ: ತಂದೆಯ ಬಂಧುಗಳಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಆತ್ಮೀಯರಲ್ಲಿ ವೈಮನಸ್ಸು, ಬಂಧು-ಮಿತ್ರರು ದೂರವಾಗುವರು.
ಧನಸ್ಸು: ಕುಟುಂಬದಲ್ಲಿ ಆಕಸ್ಮಿಕ ದುರ್ಘಟನೆ, ಹಣಕಾಸು ಸಮಸ್ಯೆ, ಆಕಸ್ಮಿಕ ನಷ್ಟ ಬಾಧಿಸುವುದು, ಅನ್ಯರ ಮಾತಿನಿಂದ ನೋವು ಪಡುವಿರಿ.
ಮಕರ: ಕುಟುಂಬಸ್ಥರಿಂದ ಅನುಕೂಲ, ಸ್ನೇಹಿತರಿಂದ ಸಹಕಾರ, ಸಹೋದರನಿಂದ ಬೈಗುಳ, ಹೇಳಿಕೆ ಮಾತುಗಳಿಂದ ಕಲಹ, ಅಹಂಭಾವದಿಂದ ದಾಂಪತ್ಯದಲ್ಲಿ ವಿರಸ.
ಕುಂಭ: ಋಣ ರೋಗ ಬಾಧೆ, ಅಧಿಕವಾದ ಖರ್ಚು, ಶೀತ ಕಫ ಬಾಧೆ, ಗರ್ಭ ದೋಷ, ಬಾಲಗ್ರಹ ದೋಷ, ಕೆಲಸಗಾರರಿಂದ ನಷ್ಟ.
ಮೀನ: ಹೆಣ್ಣು ಮಕ್ಕಳಿಂದ ಲಾಭ, ಮಹಿಳಾ ಮಿತ್ರರ ಭೇಟಿ, ಮಕ್ಕಳಿಗೆ ಉತ್ತಮ ಅವಕಾಶ, ಶುಭ ಸೂಚನೆ ಲಭಿಸುವುದು.