ಪಂಚಾಂಗ
ಶ್ರೀ ಪರಾಭವನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಶುಕ್ಲ ಪಕ್ಷ,
ಅಷ್ಟಮಿ/ನವಮಿ,
ಗುರುವಾರ, ಅರಿದ್ರ ನಕ್ಷತ್ರ
ರಾಹುಕಾಲ: 02:00 ರಿಂದ 03:31
ಗುಳಿಕಕಾಲ: 09:27 ರಿಂದ 10:58
ಯಮಗಂಡಕಾಲ: 06:24 ರಿಂದ 07:56
ಮೇಷ: ರಾಜಕೀಯ ವ್ಯಕ್ತಿಗಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಪಘಾತಗಳು, ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕವಾಗಿ ನಷ್ಟ ಮತ್ತು ಮೋಸ.
ವೃಷಭ: ಅಹಂಭಾವ ಮತ್ತು ಕೋಪದಿಂದ ಸಮಸ್ಯೆ, ಧನ ನಷ್ಟ ಸಾಲ ಮಾಡುವ ಸಂದರ್ಭ, ತಂದೆ ಮಕ್ಕಳಲ್ಲಿ ಮನಸ್ತಾಪ, ಸ್ಥಿರಾಸ್ತಿ ಸಮಸ್ಯೆ.
ಮಿಥುನ: ಉದ್ಯೋಗ ಲಾಭ, ದೂರ ಪ್ರಯಾಣ, ಅಧಿಕ ಉತ್ಸಾಹ, ಕಾರ್ಮಿಕರಿಂದ ತೊಂದರೆ, ಉದ್ಯೋಗ ಒತ್ತಡ ಸಾಲ ಮಾಡುವ ಸನ್ನಿವೇಶ.
ಕಟಕ: ಮಕ್ಕಳಿಂದ ಧನಾಗಮನ, ಉದ್ಯೋಗ ನಷ್ಟ, ಪ್ರೀತಿ ಪ್ರೇಮದಲ್ಲಿ ವಿರೋಧ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬಸ್ಥರಿಂದ ನೋವು.
ಸಿಂಹ: ಅವಕಾಶ ವಂಚಿತರಾಗುವಿರಿ, ಉದ್ಯೋಗ ಚಿಂತೆ, ದೂರ ಪ್ರದೇಶಕ್ಕೆ ತೆರಳುವ ಆಸೆ, ಪ್ರಯಾಣದಲ್ಲಿ ಸಮಸ್ಯೆ, ದಾಯಾದಿ ಕಲಹ ಆರೋಗ್ಯದಲ್ಲಿ ವ್ಯತ್ಯಾಸ.
ಕನ್ಯಾ: ಮಿತ್ರರೊಂದಿಗೆ ಮನಸ್ತಾಪ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಅನಿರೀಕ್ಷಿತ ಪ್ರಯಾಣ, ಕೋರ್ಟ್ ಕೇಸ್ ಚಿಂತೆ, ಭೂ ವ್ಯವಹಾರಗಳಿಂದ ಸಮಸ್ಯೆ, ದಾಂಪತ್ಯ ಕಲಹ.
ತುಲಾ: ಆತ್ಮ ಸಂಕಟ, ಆರೋಗ್ಯದಲ್ಲಿ ಏರುಪೇರು, ಅಪವಾದ ಮತ್ತು ಅಪ ನಿಂದನೆ, ಸಂಗಾತಿಯಿಂದ ನಷ್ಟ, ಅನಿರೀಕ್ಷಿತ ಧನಾಗಮನ.
ವೃಶ್ಚಿಕ: ಮಾನಾಪಮಾನ, ಪ್ರೀತಿ ಪ್ರೇಮದಲ್ಲಿ ತೊಂದರೆ, ಭಾವನಾತ್ಮಕ ಯೋಚನೆಯಿಂದ ನೋವು, ಮಕ್ಕಳಲ್ಲಿ ಮಂದತ್ವ ಮತ್ತು ಆಲಸ್ಯ, ಆರೋಗ್ಯ ಸಮಸ್ಯೆ ಕಾಡುವುದು.
ಧನಸ್ಸು: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹಿತಶತ್ರು ಉದ್ಯೋಗ ಅನುಕೂಲ, ಬಂಧು ಬಾಂಧವರು ದೂರ, ದುಃಸ್ವಪ್ನಗಳು.
ಮಕರ: ಪ್ರೀತಿ ಪ್ರೇಮದಲ್ಲಿ ಸಂಶಯ, ಬಾಲಗ್ರಹ ದೋಷ, ಮಕ್ಕಳಲ್ಲಿ ಮೊಂಡತನ ಮತ್ತು ಕಲಹ, ವಿದ್ಯಾಭ್ಯಾಸದಲ್ಲಿ ತೊಂದರೆ.
ಕುಂಭ: ಭೂ ವ್ಯವಹಾರಗಳಿಂದ ತೊಂದರೆ, ಮಾತಿನಿಂದ ಸಮಸ್ಯೆ, ಕುಟುಂಬದಲ್ಲಿ ಅಂತಃಕಲಹಗಳು, ಸ್ತ್ರೀಯರಿಂದ ತೊಂದರೆ.
ಮೀನ: ಆರ್ಥಿಕ ಚೇತರಿಕೆ, ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ನೆರೆಹೊರೆಯವರೊಂದಿಗೆ ಕಿರಿಕಿರಿ.

