ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಗುರುವಾರ, ಅಶ್ವಿನಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 2:00 ರಿಂದ 3:31
ಗುಳಿಕಕಾಲ: ಬೆಳಗ್ಗೆ 9:27 ರಿಂದ 10:58
ಯಮಗಂಡಕಾಲ: ಬೆಳಗ್ಗೆ 6:24 ರಿಂದ 7:56
Advertisement
ಮೇಷ: ಸ್ಥಿರಾಸ್ತಿ, ವಾಹನ ಯೋಗ, ಸ್ವಂತ ಕೆಲಸ ಕಾರ್ಯಗಳಲ್ಲಿ ಅಡೆತಡೆ, ವ್ಯಾಪಾರೋದ್ಯೋಗದಲ್ಲಿ ವಿಘ್ನ, ದಾಂಪತ್ಯ ಸಮಸ್ಯೆಗೆ ಮುಕ್ತಿ, ಮಾನಸಿಕ ನೆಮ್ಮದಿ ಲಭಿಸುವುದು.
Advertisement
ವೃಷಭ: ಉದ್ಯೋಗದಲ್ಲಿ ಒತ್ತಡ, ಯೋಚನೆಯಿಂದ ನಿದ್ರಾಭಂಗ, ಸ್ನೇಹಿತರು-ಬಂಧುಗಳಿಂದ ತೊಂದರೆ, ಸಾಲ ಬಾಧೆ,
ಬ್ಯಾಂಕ್‍ನಿಂದ ನೋಟಿಸ್ ಸಾಧ್ಯತೆ.
Advertisement
ಮಿಥುನ: ಕೌಟುಂಬಿಕ ಸಮಸ್ಯೆ ನಿವಾರಣೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಪ್ರೀತಿ ಪ್ರೇಮ ವಿಚಾರದಲ್ಲಿ ಜಯ, ಮಾವನಿಂದ ಕಿರಿಕಿರಿ, ಮೇಲಾಧಿಕಾರಿಗಳಿಂದ ತೊಂದರೆ, ಯೋಚನೆಯಿಂದ ನಿದ್ರಾಭಂಗ.
Advertisement
ಕಟಕ: ವ್ಯಾಪಾರಸ್ಥರಿಗೆ ಅಧಿಕ ಲಾಭ, ಉದ್ಯೋಗಾವಕಾಶ ಲಭಿಸುವುದು, ಸ್ಥಿರಾಸ್ತಿ-ವಾಹನ ಖರೀದಿಗೆ ಸಾಲ ಸೌಲಭ್ಯ,
ಸಿಂಹ: ತಂದೆಗೆ ಅನಾರೋಗ್ಯ, ಅನಗತ್ಯ ತಿರುಗಾಟ, ಅಧಿಕವಾದ ಖರ್ಚು, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಶತ್ರುಗಳ ಕಾಟ, ಮಾನಸಿಕ ಹಿಂಸೆ.
ಕನ್ಯಾ: ಆಕಸ್ಮಿಕ ಧನ ಲಾಭ,ದಾಯಾದಿಗಳ ಕಲಹ, ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಸಾಧ್ಯತೆ, ಉದ್ಯೋಗ ನಿಮಿತ್ತ ಓಡಾಟ,
ಆಕಸ್ಮಿಕ ಪ್ರಯಾಣ ಮಾಡುವ ಪರಿಸ್ಥಿತಿ.
ತುಲಾ: ಶುಭ ಕಾರ್ಯ ನಿಮಿತ್ತ ಪ್ರಯಾಣ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಅನಿರೀಕ್ಷಿತ ಘಟನೆ, ಕೆಲಸ ಬದಲಾವಣೆಯ ಚಿಂತೆ, ವ್ಯಾಪಾರ ವ್ಯವಹಾರಕ್ಕೆ ಶತ್ರುಗಳಿಂದ ತೊಂದರೆ.
ವೃಶ್ಚಿಕ: ಶೀತ, ಕಫ, ಸಂಧಿವಾತ, ಗ್ಯಾಸ್ಟ್ರಿಕ್, ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಮೋಜು ಮಸ್ತಿಗಾಗಿ ಸಾಲ ಮಾಡುವ ಸಾಧ್ಯತೆ.
ಧನಸ್ಸು: ಆಕಸ್ಮಿಕ ಗೌರವ ಸನ್ಮಾನ ಯೋಗ, ಭೂ ವ್ಯವಹಾರಗಳಲ್ಲಿ ಜಯ, ಸ್ನೇಹಿತರು ಮತ್ತು ಮಕ್ಕಳಲ್ಲಿ ವೈಮನಸ್ಸು, ಆತ್ಮೀಯರೇ ಶತ್ರುಗಳಾಗುವರು.
ಮಕರ: ದಾಂಪತ್ಯದಲ್ಲಿ ಅನ್ಯೋನ್ಯತೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಮಾನಸಿಕ ನೆಮ್ಮದಿ, ಪ್ರೀತಿ-ಪ್ರೇಮದ ಆಲೋಚನೆ, ಕಂಕಣ ಭಾಗ್ಯಕ್ಕೆ ಶುಭ ಕಾಲ.
ಕುಂಭ: ತಂದೆಯ ಬಂಧುಗಳಿಂದ ಸಾಲ ಕೇಳುವಿರಿ, ಆಸ್ತಿಯ ಭಾಗ ಕೇಳುವ ಸಂದರ್ಭ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಉದ್ಯೋಗದಲ್ಲಿ ತೊಂದರೆಲ.
ಮೀನ: ಬಾಡಿಗೆದಾರರೊಂದಿಗೆ ವಾಗ್ವಾದ, ಸ್ತ್ರೀಯರಿಂದ ಧನ ಸಹಾಯ, ಉದ್ಯೋಗದ ಭರವಸೆ, ತಂದೆಯ ಸ್ವಯಂಕೃತ್ಯದಿಂದ ನಷ್ಟ ಸಾಧ್ಯತೆ, ಸಂಕಷ್ಟದ ಕಾಲ ಎದುರಿಸುವಿರಿ.