ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಅಷ್ಠಮಿ ತಿಥಿ,
ಮಂಗಳವಾರ, ಅನುರಾಧ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:34 ರಿಂದ 5:03
ಗುಳಿಕಕಾಲ: ಮಧ್ಯಾಹ್ನ 12:36 ರಿಂದ 2:05
ಯಮಗಂಡಕಾಲ: ಬೆಳಗ್ಗೆ 9:38 ರಿಂದ 11:07
Advertisement
ಮೇಷ: ವ್ಯಾಪಾರದಲ್ಲಿ ಪ್ರಗತಿ, ಧನ ಲಾಭ, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ, ಶತ್ರುಗಳ ಬಾಧೆ, ದಾನ-ಧರ್ಮದಲ್ಲಿ ಆಸಕ್ತಿ.
Advertisement
ವೃಷಭ: ಋಣ ಬಾಧೆ, ಅಧಿಕವಾದ ಖರ್ಚು, ಆರೋಗ್ಯದಲ್ಲಿ ಏರುಪೇರು, ಪಾಪ ಬುದ್ಧಿ, ದ್ರವ್ಯ ನಾಶ, ಅತಿಯಾದ ಕೋಪ, ದುಃಖದಾಯ ಪ್ರಸಂಗ.
Advertisement
ಮಿಥುನ: ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಗುರುಗಳ ಭೇಟಿ ಸಾಧ್ಯತೆ, ಉತ್ತಮವಾದ ಬುದ್ಧಿಶಕ್ತಿ, ಸ್ಥಿರಾಸ್ತಿಯಿಂದ ನಷ್ಟ.
Advertisement
ಕಟಕ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಶತ್ರುಗಳನ್ನು ಸದೆ ಬಡೆಯುವಿರಿ, ಧನ ಲಾಭ, ಉನ್ನತ ವಿದ್ಯಾಭ್ಯಾಸದಲ್ಲಿ ಮನ್ನಡೆ.
ಸಿಂಹ: ಕೆಲಸ ಕಾರ್ಯಗಳಲ್ಲಿ ವಿಘ್ನ, ಮಾತಿನ ಚಕಮಕಿ, ಮಾನಸಿಕ ವ್ಯಥೆ, ಇಲ್ಲ ಸಲ್ಲದ ತಕರಾರು, ಮಿತ್ರರಿಂದ ದ್ರೋಹ.
ಕನ್ಯಾ: ವ್ಯಾಪಾರದಲ್ಲಿ ನಷ್ಟ, ಸ್ನೇಹಿತರಿಂದ ಹಣಕಾಸು ಸಹಾಯ, ಮಾನಸಿಕ ನೆಮ್ಮದಿ, ಪುಣ್ಯಕ್ಷೇತ್ರದ ದರ್ಶನ ಭಾಗ್ಯ.
ತುಲಾ: ಮನಸ್ಸಿಗೆ ಬೇಸರ, ಸಾಧಾರಣ ಲಾಭ, ವಿರೋಧಿಗಳಿಂದ ತೊಂದರೆ, ಆತ್ಮೀಯರೊಂದಿಗೆ ಮನಃಸ್ತಾಪ, ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಸಮಸ್ಯೆ.
ವೃಶ್ಚಿಕ: ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಸಾಧಾರಣ ಲಾಭ, ಅಕಾಲ ಭೋಜನ, ದೂರ ಪ್ರಯಾಣ, ದಾಯಾದಿಗಳ ಕಲಹ, ಚಿನ್ನಾಭರಣ ಕಳವು ಸಾಧ್ಯತೆ.
ಧನಸ್ಸು: ಎಲ್ಲಿ ಹೋದರೂ ಅಶಾಂತಿ, ಅಧಿಕವಾದ ಧನ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ರಾಜ ಸನ್ಮಾನ, ಆರೋಗ್ಯದ ಕಡೆ ಗಮನಹರಿಸಿ.
ಮಕರ: ವಾಹನ ಯೋಗ, ಸ್ತ್ರೀಯರಿಗೆ ಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ತಂದೆಗೆ ಅನಾರೋಗ್ಯ, ಆದಾಯ ಕಡಿಮೆ ಅಧಿಕವಾದ ಖರ್ಚು,ಮನಸ್ಸಿನಲ್ಲಿ ಗೊಂದಲ.
ಕುಂಭ: ವಿವಾಹಕ್ಕೆ ಅಡಚಣೆ, ಪಾಪ ಕಾರ್ಯದಲ್ಲಿ ಆಸಕ್ತಿ, ಪರರ ಧನ ಪ್ರಾಪ್ತಿ, ಅಗೌರವ-ಅಪಕೀರ್ತಿ, ವಾಹನ ಯೋಗ, ವಸ್ತ್ರಾಭರಣ ಖರೀದಿ.
ಮೀನ: ಋಣ ಬಾಧೆಯಿಂದ ಮುಕ್ತಿ, ಶುಭ ಕಾರ್ಯಗಳಲ್ಲಿ ಭಾಗಿ, ವ್ಯರ್ಥ ಧನ ಹಾನಿ, ದೂರ ಪ್ರಯಾಣ, ಸುಖ ಭೋಜನ ಪ್ರಾಪ್ತಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv