ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಧನುರ್ಮಾಸ,
ಕೃಷ್ಣ ಪಕ್ಷ, ತೃತೀಯಾ ಉಪರಿ ಚತುರ್ಥಿ ತಿಥಿ,
ಮಂಗಳವಾರ, ಪುಷ್ಯ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:14 ರಿಂದ 4:39
ಗುಳಿಕಕಾಲ: ಮಧ್ಯಾಹ್ನ 12:23 ರಿಂದ 1:48
ಯಮಗಂಡಕಾಲ: ಬೆಳಗ್ಗೆ 9:32 ರಿಂದ 10:57
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಹಿರಿಯರ ಆಶೀರ್ವಾದದಿಂದ ಅನುಕೂಲ.
Advertisement
ವೃಷಭ: ಅನಿರೀಕ್ಷಿತ ಖರ್ಚು, ಮಾನಸಿಕವಾದ ಒತ್ತಡ, ದುಃಖದಾಯಕ ಪ್ರಸಂಗ, ವೈಯುಕ್ತಿ ವಿಚಾರಗಳಲ್ಲಿ ಗಮನಹರಿಸಿ.
Advertisement
ಮಿಥುನ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಸುಖ ಭೋಜನ ಪ್ರಾಪ್ತಿ, ಮಾನಸಿಕ ನೆಮ್ಮದಿ, ಕೆಲಸ ಕಾರ್ಯಗಳಲ್ಲಿ ಮಂದಗತಿ.
Advertisement
ಕಟಕ: ಸ್ನೇಹಿತರಿಂದ ಸಹಾಯ, ಪತಿ-ಪತ್ನಿಯರಲ್ಲಿ ವೈಮನಸ್ಸು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
ಸಿಂಹ: ಪರಸ್ಥಳ ವಾಸ, ಶರೀರದಲ್ಲಿ ಆಲಸ್ಯ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಪರಿಶ್ರಮಕ್ಕೆ ತಕ್ಕ ವರಮಾನ ಪ್ರಾಪ್ತಿ.
ಕನ್ಯಾ: ಆತ್ಮೀಯರಿಂದ ಸಹಾಯ, ಕಾರ್ಯ ವೈಖರಿಯಲ್ಲಿ ಸ್ವಲ್ಪ ವಿಳಂಬ, ಗೆಳೆಯರಿಂದ ಅನರ್ಥ, ಆಹಾರ ಸೇವನೆಯಲ್ಲಿ ಎಚ್ಚರಿಕೆ.
ತುಲಾ: ದ್ರವ್ಯ ಲಾಭ, ಸಂತಾನ ಪ್ರಾಪ್ತಿ, ಪರರಿಂದ ಮೋಸ ಹೋಗುವ ಸಾಧ್ಯತೆ, ಉದ್ಯೋಗದಲ್ಲಿ ಅಭಿವೃದ್ಧಿ.
ವೃಶ್ಚಿಕ: ವ್ಯಾಪಾರದಲ್ಲಿ ಅಭಿವೃದ್ಧಿ, ಹಿತ ಶತ್ರುಗಳಿಂದ ತೊಂದರೆ, ಮಾನ ಹಾನಿ, ದಂಡ ಕಟ್ಟುವ ಸಾಧ್ಯತೆ, ಚಂಚಲ ಮನಸ್ಸು.
ಧನಸ್ಸು: ಕುಟುಂಬದಲ್ಲಿ ಅಹಿತಕರವಾದ ವಾತಾವರಣ, ಸ್ತ್ರೀಯರಿಗೆ ಸೌಖ್ಯ, ಮಾನಸಿಕ ನೆಮ್ಮದಿ, ಆಕಸ್ಮಿಕ ಧನ ಲಾಭ, ಶತ್ರುಗಳ ಬಾಧೆ.
ಮಕರ: ಕಾರ್ಯ ಸಾಧನೆಗಾಗಿ ತಿರುಗಾಟ, ಬಾಕಿ ಹಣ ವಸೂಲಿ, ಸುಖ ಭೋಜನ ಪ್ರಾಪ್ತಿ, ಪುಣ್ಯಕ್ಷೇತ್ರ ದರ್ಶನ, ಧರ್ಮ ಕಾರ್ಯದಲ್ಲಿ ಆಸಕ್ತಿ.
ಕುಂಭ: ಸ್ವಯಂಕೃತ ಅಪರಾಧಗಳಿಂದ ತೊಂದರೆ, ಕುಟುಂಬದಲ್ಲಿ ಅನರ್ಥ, ಯತ್ನ ಕಾರ್ಯದಲ್ಲಿ ಅನುಕೂಲ, ದುಷ್ಟರಿಂದ ದೂರವಿರುವುದು ಉತ್ತಮ, ಅಧಿಕವಾದ ಕೋಪ.
ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಶುಭ, ವಾದ-ವಿವಾದಗಳಲ್ಲಿ ಎಚ್ಚರ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಮಾನಸಿಕ ವ್ಯಥೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv