ಪಂಚಾಂಗ:
ಸಂವತ್ಸರ: ಕ್ರೋಧಿ ನಾಮ
ಋತು: ವಸಂತ, ಅಯನ:ಉತ್ತರಾಯಣ
ಮಾಸ: ವೈಶಾಖ, ಪಕ್ಷ: ಕೃಷ್ಣ
ತಿಥಿ: ಬಿದಿಗೆ, ನಕ್ಷತ್ರ: ಜೇಷ್ಠಾ
ರಾಹುಕಾಲ: 09:04- 10:40
ಗುಳಿಕಕಾಲ: 5:52- 07:28
ಯಮಗಂಡಕಾಲ: 1:52- 3:28
ಮೇಷ: ಸ್ಥಿರಾಸ್ತಿಯ ವಿಚಾರದಲ್ಲಿ ಶುಭವಾರ್ತೆ, ಹೆಣ್ಣುಮಕ್ಕಳ ಅಲಂಕಾರಿಕ ವಸ್ತುಗಾಗಿ ಧನವ್ಯಯ, ಕೃಷಿ ಚಟುವಟಿಕೆಯಲ್ಲಿ ಮಂದಗತಿ.
Advertisement
ವೃಷಭ: ವೈದ್ಯ ವೃತ್ತಿಯವರಿಗೆ ಹೆಚ್ಚಿನ ಒತ್ತಡ, ನಿರೀಕ್ಷಿತ ಕೆಲಸಗಳಲ್ಲಿ ಉತ್ತಮ ಫಲಿತಾಂಶ, ಯಂತ್ರಗಳ ಕೆಲಸದವರು ಎಚ್ಚರಿಕೆ ವಹಿಸಿ.
Advertisement
ಮಿಥುನ: ಉನ್ನತ ವಿದ್ಯಾಭ್ಯಾಸಕ್ಕೆ ಉತ್ತಮ ಅವಕಾಶ, ಒತ್ತಡ ಕಡಿಮೆಯಾಗುವ ಸಾಧ್ಯತೆ, ಆದಾಯಕ್ಕಿಂತ ನಷ್ಟವೇ ಹೆಚ್ಚು.
Advertisement
ಕಟಕ: ಮನೆಯಲ್ಲಿ ಸಂತೋಷದ ವಾತಾವರಣ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಸರ್ಕಾರಿ ಸಾಲಗಳು ದೊರೆಯುತ್ತವೆ.
Advertisement
ಸಿಂಹ: ಹೊಸ ಕೆಲಸ ಆರಂಭಿಸುವವರಿಗೆ ಶುಭ ಫಲ, ನಿಮ್ಮ ಮಾತುಗಳು ಬೇರೆಯವರಿಗೆ ನೋವು ತರಬಹುದು, ಬಂಧು ಬಾಂಧವರೊಂದಿಗೆ ಸಂಬಂಧ ವೃಧ್ಧಿಸುತ್ತದೆ.
ಕನ್ಯಾ: ಹೂಡಿಕೆ ಹಣ ಲಾಭವನ್ನು ಗಳಿಸುತ್ತದೆ, ಹೈನುಗಾರಿಕೆ ಮಾಡುವವರಿಗೆ ಆದಾಯ, ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಪಡಬೇಕು.
ತುಲಾ: ಹಿರಿಯ ಅಧಿಕಾರಿಗಳಿಂದ ಅನುಕೂಲ, ಆಭರಣ ಮಾರಾಟಗಾರರಿಗೆ ಲಾಭ, ಆಸ್ತಿ ಕೊಳ್ಳಲು ಇದು ಸಕಾಲವಲ್ಲ.
ವೃಶ್ಚಿಕ: ಕೃಷಿಕರಿಗೆ ಉತ್ತಮ ಬೆಳೆ ಇದೆ, ಸಂಗಾತಿಯ ಆದಾಯದಲ್ಲಿ ಏರಿಕೆ, ಮಕ್ಕಳ ವಿದ್ಯೆಗೆ ಹೆಚ್ಚಿನ ಹಣ ಖರ್ಚು.
ಧನಸ್ಸು: ಹೊಸ ಉದ್ಯಮ ಪ್ರಾರಂಭಿಸುವ ಮುನ್ನ ಯೋಚಿಸಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಮೂಳೆ ನೋವು ಸ್ವಲ್ಪ ಬಾಧಿಸಬಹುದು.
ಮಕರ: ವೃತ್ತಿಯಲ್ಲಿ ಸ್ವಲ್ಪ ಅಭಿವೃದ್ದಿ ಕಾಣಬಹುದು, ಆಸ್ತಿ ಮಾರಾಟದಿಂದ ಹಣ ಗಳಿಸಬಹುದು, ಪ್ರೀತಿ ಸೆಳೆತಕ್ಕೆ ಒಳಗಾಗಬಹುದು.
ಕುಂಭ: ಉಪನ್ಯಾಸಕರಿಗೆ ಉತ್ತಮ ವೇದಿಕೆ, ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆ, ಬಂಧುಗಳು ಸಾಲ ಕೇಳಬಹುದು.
ಮೀನ: ಬರಬೇಕಾಗಿದ್ದ ಹಣವನ್ನು ಒಳ್ಳೆಯ ಮಾತಿನಿಂದ ಪಡೆಯಿರಿ, ಹೆಣ್ಣುಮಕ್ಕಳ ಅಭಿವೃದ್ದಿಯು ಉತ್ತಮವಾಗಿರಲಿದೆ, ಕಾಲಿನ ನೋವು ನಿಮ್ಮನ್ನು ಭಾದಿಸಬಹುದು.