Dina Bhavishya

ದಿನಭವಿಷ್ಯ 25-02-2017

ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು ಮಾಘ ಮಾಸ,
ಕೃಷ್ಣ ಪಕ್ಷ, ಚತುರ್ದಶಿ,
ಶನಿವಾರ, ಧನಿಷ್ಠ ನಕ್ಷತ್ರ

ಶುಭ ಘಳಿಗೆ: ಮಧ್ಯಾಹ್ನ 12:40 ರಿಂದ 2:07
ಅಶುಭ ಘಳಿಗೆ: ಬೆಳಗ್ಗೆ 9:47 ರಿಂದ 11:13

ರಾಹುಕಾಲ: ಬೆಳಗ್ಗೆ 9:38 ರಿಂದ 11:07
ಗುಳಿಕಕಾಲ: ಬೆಳಗ್ಗೆ 6:41 ರಿಂದ 8:09
ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:34

ಮೇಷ: ಸ್ವಂತ ವ್ಯವಹಾರದಲ್ಲಿ ಲಾಭ, ಭೂ ವ್ಯವಹಾರದಲ್ಲಿ ಪ್ರಗತಿ, ಅನಿರೀಕ್ಷಿತ ಲಾಭ, ಅಧಿಕ ಧನಾಗಮನ, ವಾಹನ ಅಪಘಾತ, ತಾಯಿಗೆ ಅನಾರೋಗ್ಯ, ಕಾರ್ಮಿಕರಿಂದ ಸಮಸ್ಯೆ.

ವೃಷಭ: ದಾಂಪತ್ಯದಲ್ಲಿ ಜಗಳ, ಕೌಟುಂಬಿಕ ಸಮಸ್ಯೆ, ಉದ್ಯೋಗದಲ್ಲಿ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಮನಸ್ಸಿನಲ್ಲಿ ಬೇಸರ.

ಮಿಥುನ: ಸಾಲಗಾರರಿಂದ ಕಿರಿಕಿರಿ, ಶತ್ರುಗಳ ಕಾಟ, ಕುಟುಂಬ ಗೌರವಕ್ಕೆ ಧಕ್ಕೆ, ಬಾಡಿಗೆದಾರರಿಂದ ಸಮಸ್ಯೆ, ಕಾರ್ಮಿಕರಿಂದ ನಷ್ಟ, ಮಿತ್ರರು ಶತ್ರುಗಳಾಗುವರು.

ಕಟಕ: ಮಕ್ಕಳಿಂದ ಅನುಕೂಲ, ಉದ್ಯೋಗದಲ್ಲಿ ಬೇಸರ, ಅಭಿವೃದ್ಧಿ ಕುಂಠಿತ, ಬಡ್ತಿಗೆ ಅಡೆತಡೆ, ಸ್ವಯಂಕೃತ್ಯಗಳಿಂದ ನಷ್ಟ, ಉದ್ಯೋಗ ಕಳೆದುಕೊಳ್ಳುವ ಭೀತಿ, ಕೆಲಸ ಕಾರ್ಯಗಳಲ್ಲಿ ಒತ್ತಡ.

ಸಿಂಹ: ವಾಹನದಿಂದ ತೊಂದರೆ, ಭೂ ವ್ಯವಹಾರಗಳಲ್ಲಿ ನಷ್ಟ, ಸ್ಥಿರಾಸ್ತಿ ನಷ್ಟ, ಸಾಲ ಬಾಧೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.

ಕನ್ಯಾ: ಅನಿರೀಕ್ಷಿತ ಪ್ರಯಾಣ, ನೆರೆಹೊರೆಯವರಿಂದ ಕಿರಿಕಿರಿ, ದಾಯಾದಿಗಳ ಕಲಹ, ಬಂಧುಗಳು ಕುತಂತ್ರ ಮಾಡುವರು, ಭೂ ವ್ಯವಹಾರಗಳು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.

ತುಲಾ: ಆರ್ಥಿಕ ಮುಗ್ಗಟ್ಟು, ಭವಿಷ್ಯದ ಚಿಂತೆ, ಸಂಗಾತಿ-ಮಕ್ಕಳೊಂದಿಗೆ ವಾಗ್ವಾದ, ಆರೋಗ್ಯದಲ್ಲಿ ಏರುಪೇರು, ಪಿತ್ರಾರ್ಜಿತ ಆಸ್ತಿಯಿಂದ ಧನಾಗಮನ.

ವೃಶ್ಚಿಕ: ಅಧಿಕ ಉಷ್ಣ ಬಾಧೆ, ರೋಗ ಬಾಧೆ, ಗ್ಯಾಸ್ಟ್ರಿಕ್-ತಲೆನೋವು, ಅನಗತ್ಯ ತಿರುಗಾಟ, ಸ್ಥಿರಾಸ್ತಿ ಮೇಲೆ ಸಾಲ ಮಾಡುವ ಸಾಧ್ಯತೆ.

ಧನಸ್ಸು: ಜೂಜಾಟಗಳಿಂದ ನಷ್ಟ, ದುಶ್ಚಟಗಳಿಗೆ ಮನಸ್ಸು, ಮಕ್ಕಳ ಭವಿಷ್ಯದ ಚಿಂತೆ, ಕಾರಣವಿಲ್ಲದೇ ಆತ್ಮೀಯರು ದೂರವಾಗುವರು.

ಮಕರ: ವ್ಯಾಪಾರೋದ್ಯಮದಲ್ಲಿ ಲಾಭ, ಭೂಮಿಯಿಂದ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ, ಸೈಟ್-ಮನೆ ಖರೀದಿಗೆ ಮನಸ್ಸು, ಗುಪ್ತ ಸಂಬಂಧಗಳಿಂದ ತೊಂದರೆ.

ಕುಂಭ: ಸಹೋದ್ಯೋಗಿಗಳಿಂದ ಸಹಾಯ ಕೇಳುವಿರಿ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಕೆಲಸದಲ್ಲಿ ಅಧಿಕ ಒತ್ತಡ, ನಿದ್ರಾಭಂಗ, ಸ್ವಂತ ವ್ಯಾಪಾರದಲ್ಲಿ ನಷ್ಟ.

ಮೀನ: ದೂರ ಪ್ರದೇಶದಿಂದ ಧನಾಗಮನ, ತಂದೆಯಿಂದ ನಷ್ಟ, ಸ್ವಯಂಕೃತ್ಯಗಳಿಂದ ಸಮಸ್ಯೆ, ಕುಟುಂಬದಲ್ಲಿ ಆತಂಕ, ಒಂಟಿಯಾಗಿರಲು ಮನಸ್ಸು.

Related Articles

Leave a Reply

Your email address will not be published. Required fields are marked *