ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಭಾನುವಾರ, ವಿಶಾಖ ನಕ್ಷತ್ರ
ರಾಹುಕಾಲ: ಸಂಜೆ 4:48 ರಿಂದ 6:18
ಗುಳಿಕಕಾಲ: ಮಧ್ಯಾಹ್ನ 3:17 ರಿಂದ 4:48
ಯಮಗಂಡಕಾಲ: ಮಧ್ಯಾಹ್ನ 12:15 ರಿಂದ 1:46
Advertisement
ಮೇಷ: ಕೃಷಿಯಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಉತ್ಸಾಹ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಪ್ರಭಾವಿ ವ್ಯಕ್ತಿಗಳ ಭೇಟಿ, ದಂಪತಿಗಳಲ್ಲಿ ಕಲಹ, ಗೊಂದಲಗಳಿಂದ ದೂರವಿರಿ, ಶತ್ರುಗಳ ಬಾಧೆ.
Advertisement
ವೃಷಭ: ಇಲ್ಲ ಸಲ್ಲದ ತಕರಾರು, ಚಂಚಲ ಮನಸ್ಸು, ಹಿತ ಶತ್ರುಗಳಿಂದ ಸಲಹೆ, ನೀವಾಡುವ ಮಾತಿನಿಂದ ಅನರ್ಥ, ಕೆಲಸ ಕಾರ್ಯದಲ್ಲಿ ವಿಳಂಬ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ರಾಜ ವಿರೋಧ.
Advertisement
ಮಿಥುನ: ದೇವತಾ ಕಾರ್ಯಗಳಲ್ಲಿ ಒಲವು, ಸೇವಕರ ವರ್ಗದಿಂದ ತೊಂದರೆ, ಧನ ಹಾನಿ, ಆಹಾರ ಸೇವನೆಯಲ್ಲಿ ಜಾಗ್ರತೆ, ಯಾರನ್ನೂ ಹೆಚ್ಚು ನಂಬಬೇಡಿ, ನಂಬಿಕಸ್ಥರಿಂದ ಮೋಸ ಸಾಧ್ಯತೆ, ಕಾರ್ಯದಲ್ಲಿ ನಿಧಾನ.
Advertisement
ಕಟಕ: ವಿದ್ಯಾರ್ಥಿಗಳಲ್ಲಿ ಪ್ರಗತಿ, ವಾಹನ ಖರೀದಿ, ದುಷ್ಟ ಆಲೋಚನೆ, ಸ್ತ್ರೀಯರಿಗೆ ಲಾಭ, ಪತ್ನಿಯಿಂದ ಹಿತನುಡಿ, ನಾನಾ ವಿಚಾರಗಳಲ್ಲಿ ಅಸಕ್ತಿ, ದಾಂಪತ್ಯದಲ್ಲಿ ಪ್ರೀತಿ.
ಸಿಂಹ: ಭೋಗ ವಸ್ತು ಪ್ರಾಪ್ತಿ, ವಿವಾಹ ಯೋಗ, ಸೋಮಾರಿತನ, ಆರೋಗ್ಯದಲ್ಲಿ ಏರುಪೇರು, ಪರರಿಗೆ ಸಹಾಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಮಿತ್ರರಲ್ಲಿ ಕಲಹ.
ಕನ್ಯಾ: ಕಾರ್ಯ ಕ್ಷೇತ್ರದಲ್ಲಿ ಪ್ರಗತಿ, ವಿದೇಶ ಪ್ರಯಾಣ, ದ್ರವ್ಯ ಲಾಭ, ಶತ್ರು ಬಾಧೆ, ದಾನ-ಧರ್ಮದಲ್ಲಿ ಆಸಕ್ತಿ, ಕೆಟ್ಟ ಶಬ್ಧಗಳಿಂದ ನಿಂದನೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.
ತುಲಾ: ಕ್ರಯ ವಿಕ್ರಯಗಳಲ್ಲಿ ಲಾಭ, ಸುಖ ಭೋಜನ, ಹೆತ್ತವರಲ್ಲಿ ದ್ವೇಷ, ತಾಳ್ಮೆ ಅತ್ಯಗತ್ಯ, ಕೆಲಸ ಕಾರ್ಯಗಳಲ್ಲಿ ವಿಳಂಬ, ಪ್ರೀತಿ ಸಮಾಗಮ, ಅತಿಯಾದ ನಿದ್ರೆ.
ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಕುಟುಂಬದಲ್ಲಿ ಪ್ರೀತಿಯ ವಾತಾವರಣ, ಕಾರ್ಯಗಳಲ್ಲಿ ಪ್ರಮಾಣಿಕ ಪ್ರಯತ್ನ, ವ್ಯರ್ಥ ಧನಹಾನಿ, ವಾಹನ ಖರೀದಿಯಲ್ಲಿ ನಿಧಾನ, ನಂಬಿಕಸ್ಥರಿಂದ ಮೋಸ, ಅಧಿಕ ತಿರುಗಾಟ.
ಧನಸ್ಸು: ಆತ್ಮೀಯರೊಂದಿಗೆ ಪ್ರಯಾಣ, ಕುಲದೇವರ ಪ್ರಾರ್ಥನೆ, ಮಾತಿನ ಚಕಮಕಿ, ಆಕಸ್ಮಿಕ ಧನ ಲಾಭ, ಸ್ಥಗಿತ ಕಾರ್ಯಗಳಲ್ಲಿ ಪ್ರಗತಿ, ದುಷ್ಟರಿಂದ ದೂರವಿರಿ.
ಮಕರ: ಶ್ರಮಕ್ಕೆ ತಕ್ಕ ಫಲ, ಮಿತ್ರರಿಂದ ದ್ರೋಹ, ಆದಾಯಕ್ಕಿಂತ ಖರ್ಚು ಹೆಚ್ಚು, ಮಾನಸಿಕ ಒತ್ತಡ, ಇತರರ ಮಾತಿಗೆ ಮರುಳಾಗಬೇಡಿ, ಶುಭ ಸುದ್ದಿ ಕೇಳುವಿರಿ.
ಕುಂಭ: ಗುರಿ ಸಾಧನೆಗೆ ಸುಸಮಯ, ಮಾನಸಿಕ ನೆಮ್ಮದಿ, ಸಾಲ ಮರುಪಾವತಿ, ಪ್ರಭಾವಿ ವ್ಯಕ್ತಿಗಳ ಭೇಟಿ, ಅಲ್ಪ ಲಾಭ, ಮನಸ್ಸಿನಲ್ಲಿ ಗೊಂದಲ, ಶತ್ರುಗಳ ಬಾಧೆ.
ಮೀನ: ಕೆಲಸ ಕಾರ್ಯಗಳಲ್ಲಿ ನಿಷ್ಠೆ, ಸ್ತ್ರೀಯರಿಗೆ ಶುಭ ಫಲ ಪ್ರಾಪ್ತಿ, ಆರೋಗ್ಯದಲ್ಲಿ ಏರುಪೇರು, ಹೊಗಳಿಕೆಗೆ ಪಾತ್ರರಾಗುವಿರಿ, ವಸ್ತ್ರ ವ್ಯಾಪಾರಿಗಳಿಗೆ ನಷ್ಟ.