ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ
ಶನಿವಾರ, ಆರಿದ್ರಾ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:05 ರಿಂದ 10:47
ರಾಹುಕಾಲ: ಬೆಳಗ್ಗೆ 9:13 ರಿಂದ 10:49
ಗುಳಿಕಕಾಲ: ಬೆಳಗ್ಗೆ 7:37 ರಿಂದ 9:13
ಯಮಗಂಡಕಾಲ: ಮಧ್ಯಾಹ್ನ 3:37 ರಿಂದ 5:13
Advertisement
ಮೇಷ: ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ಸರ್ಕಾರಿ ಅಧಿಕಾರಿಗಳಿಗೆ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ವಾಹನ ಅಪಘಾತ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.
Advertisement
ವೃಷಭ: ಅಧಿಕ ಕೋಪ, ಅಹಂಭಾವ, ದಾಂಪತ್ಯದಲ್ಲಿ ಕಲಹ, ಆಕಸ್ಮಿಕ ಧನ ನಷ್ಟ, ಸಾಲ ಮಾಡುವ ಪರಿಸ್ಥಿತಿ, ಪಿತ್ರಾರ್ಜಿತ ಆಸ್ತಿ ತಗಾದೆ, ತಂದೆ ಮಕ್ಕಳಲ್ಲಿ ಮನಃಸ್ತಾಪ.
Advertisement
ಮಿಥುನ: ದೂರ ಪ್ರದೇಶದಲ್ಲಿ ಉದ್ಯೋಗ, ದೂರ ಪ್ರಯಾಣ ಸಾಧ್ಯತೆ, ವಿದ್ಯಾರ್ಥಿಗಳಲ್ಲಿ ಉತ್ಸಾಹ, ಕಾರ್ಮಿಕ ಸೇವಕರಿಂದ ಸಮಸ್ಯೆ.
Advertisement
ಕಟಕ: ಮಕ್ಕಳಿಂದ ಧನಾಗಮನ, ಸ್ವಯಂಕೃತ್ಯಗಳಿಂದ ನಷ್ಟ, ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ, ಕೆಲಸಗಳಲ್ಲಿ ಅಧಿಕ ಒತ್ತಡ, ಪ್ರೇಮ ವಿಚಾರದಲ್ಲಿ ಪ್ರೀತಿಸಿದವರಿಂದಲೇ ವಿರೋಧ.
ಸಿಂಹ: ವಿಪರೀತ ರಾಜಯೋಗ, ಉದ್ಯೋಗದ ಚಿಂತೆ, ದೂರ ಪ್ರದೇಶಕ್ಕೆ ಪ್ರಯಾಣ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುತ್ವ ಬೆಳೆಯುವುದು.
ಕನ್ಯಾ: ಮಿತ್ರರಿಂದ ಉತ್ತಮ ಹೆಸರು, ಉದ್ಯೋಗ ಬದಲಾವಣೆಗೆ ಉತ್ತಮ ಅವಕಾಶ, ಅನಿರೀಕ್ಷಿತ ಪ್ರಯಾಣ, ಭೂ ವ್ಯವಹಾರಗಳಲ್ಲಿ ಸಮಸ್ಯೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.
ತುಲಾ: ಆತ್ಮ ಸಂಕಟಗಳು, ಚರ್ಮ ತುರಿಕೆ, ಕಾಲು ನೋವು, ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರು-ಕುಟುಂಬದವರಿಗಾಗಿ ಖರ್ಚು, ಆಕಸ್ಮಿಕ ಹಣವ್ಯಯ, ಸಂಗಾತಿಯೊಂದಿಗೆ ವಾಗ್ವಾದ.
ವೃಶ್ಚಿಕ: ಮಾನ ಅಪಮಾನ, ಅಪನಿಂದನೆ, ಕೆಲಸಗಳಲ್ಲಿ ನಿಧಾನ, ಪ್ರಯಾಣದಲ್ಲಿ ಅಡೆತಡೆ, ಅನಗತ್ಯ ತಿರುಗಾಟ, ವಿದ್ಯಾರ್ಥಿಗಳಲ್ಲಿ ಮಂದತ್ವ, ಆಲಸ್ಯ ಮನೋಭಾವ, ಸ್ಥಿರಾಸ್ತಿ-ವಾಹನದ ಮೇಲೆ ಸಾಲ ಪಡೆಯುವಿರಿ.
ಧನಸ್ಸು: ತಂದೆಯಿಂದ ನಷ್ಟ, ವಿದೇಶದಲ್ಲಿ ಉದ್ಯೋಗದ ಆಸೆ ಈಡೇರುವುದು, ಕಾರಣವಿಲ್ಲದೇ ಆತ್ಮೀಯರು ದೂರವಾಗುವರು.
ಮಕರ: ಸಾಲಗಾರರಿಂದ ಕಾಟ, ಮಿತ್ರರು ದೂರವಾಗುವರು, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಚರ್ಮವ್ಯಾಧಿ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.
ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಮಹಿಳೆಯರಿಗೆ ಮಿತ್ರರಿಂದ ಅನುಕೂಲ, ಸ್ನೇಹಿತರೊಂದಿಗೆ ಸಂತಸ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕೆಲಸ ಮಾಡಬೇಕೆಂಬ ಹಂಬಲ.
ಮೀನ: ಒಂಟಿಯಾಗಿರಲು ಮನಸ್ಸು, ಪ್ರೇಮದ ಬಲೆಗೆ ಸಿಲುಕುವಿರಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಕ್ಕಳಿಂದ ಸಾಲ ತೀರಿಸಲು ಸಹಕಾರ.