ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಶನಿವಾರ, ಮೃಗಶಿರ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:27 ರಿಂದ 10:58
ಗುಳಿಕಕಾಲ: ಬೆಳಗ್ಗೆ 6:24 ರಿಂದ 7:56
ಯಮಗಂಡಕಾಲ: ಮಧ್ಯಾಹ್ನ 2:00 ರಿಂದ 3:31
Advertisement
ಮೇಷ: ಮಿತ್ರರೊಂದಿಗೆ ಕಿರಿಕಿರಿ, ವ್ಯಾಪಾರ ವ್ಯವಹಾರದಲ್ಲಿ ಅಡೆತಡೆ, ಉದ್ಯೋಗ ಸ್ಥಳದಲ್ಲಿ ಒತ್ತಡ, ವಿದ್ಯಾಭ್ಯಾಸದಲ್ಲಿ ಗೊಂದಲ, ಉಷ್ಣ ಬಾಧೆ.
Advertisement
ವೃಷಭ: ದಾಂಪತ್ಯದಲ್ಲಿ ಕಲಹ, ನೀವಾಡುವ ಮಾತಿನಿಂದ ಮನಸ್ತಾಪ, ಪಾಲುದಾರಿಕೆಯಲ್ಲಿ ಸಮಸ್ಯೆ, ಉದ್ಯೋಗದಲ್ಲಿ ಗಡಿಬಿಡಿ, ಎಲೆಕ್ಟ್ರಾನಿಕ್ ವಸ್ತುಗಳಿಂದ ತೊಂದರೆ, ತಂದೆಯೊಂದಿಗೆ ಮನಸ್ತಾಪ.
Advertisement
ಮಿಥುನ: ಸಂಗಾತಿಯ ನಡವಳಿಕೆಯಿಂದ ಬೇಸರ, ಹೊಟ್ಟೆ-ಕಾಲು ನೋವು, ಉಷ್ಣ ಬಾಧೆ, ಕೆಲಸಗಾರರೊಂದಿಗೆ ಮನಸ್ತಾಪ, ಕೈಗಾರಿಕೋದ್ಯಮಿಗಳಿಗೆ ಲಾಭ, ರಿಯಲ್ ಎಸ್ಟೇಟ್ನವರಿಗೆ ಅನುಕೂಲ.
Advertisement
ಕಟಕ: ನಿದ್ರೆಯಲ್ಲಿ ಕೆಟ್ಟ ಕನಸುಗಳು, ಆತಂಕದ ವಾತಾವರಣ, ಮಕ್ಕಳಿಂದ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ಶತ್ರುಗಳ ದಮನ, ಆಕಸ್ಮಿಕ ಅದೃಷ್ಟ ಒಲಿಯುವುದು, ಶುಭ ಕಾರ್ಯಗಳಿಗೆ ಅಡೆತಡೆ, ವಾಹನ ರಿಪೇರಿಗಾಗಿ ಅಧಿಕ ಖರ್ಚು.
ಸಿಂಹ: ದೂರದ ವ್ಯಕ್ತಿಗಳಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಒತ್ತಡ, ದಾಯಾದಿಗಳೊಂದಿಗೆ ವೈಮನಸ್ಸು, ಮಿತ್ರರಿಂದ ಸಹಾಯ, ಪಿತ್ರಾರ್ಜಿತ ಆಸ್ತಿ ತಗಾದೆ, ತಂದೆಯಿಂದ ಲಾಭ, ವಾಹನ ಯೋಗ, ಯಂತ್ರೋಪಕರಣ ಖರೀದಿ.
ಕನ್ಯಾ: ಆಕಸ್ಮಿಕ ಉದ್ಯೋಗ ಲಾಭ, ವಾಹನ ಅಪಘಾತ, ಪ್ರಯಾಣದಲ್ಲಿ ಕಳವು, ಮಕ್ಕಳು ಬಿದ್ದು ಪೆಟ್ಟು ಮಾಡಿಕೊಳ್ಳುವರು, ವಿದ್ಯಾಭ್ಯಾಸದಲ್ಲಿ ತೊಂದರೆ, ಆರೋಗ್ಯ ಸಮಸ್ಯೆ, ಮಾನಸಿಕ ಒತ್ತಡ, ಸಾಲಗಾರರಿಂದ ತೊಂದರೆ.
ತುಲಾ: ದಾಯಾದಿಗಳ ಕಲಹ, ಹಣಕಾಸು ವಿಚಾರದಲ್ಲಿ ವಾಗ್ವಾದ, ಅನ್ಯರಿಂದ ದಾಂಪತ್ಯದ ಮೇಲೆ ದುಷ್ಪರಿಣಾಮ, ಪ್ರಯಾಣದಲ್ಲಿ ನಿರಾಸಕ್ತಿ, ಸ್ಥಿರಾಸ್ತಿ ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಮಾಟ-ಮಂತ್ರದ ಭೀತಿ, ಅಗ್ನಿಯಿಂದ ತೊಂದರೆ.
ವೃಶ್ಚಿಕ: ಬಂಧುಗಳೊಂದಿಗೆ ಮನಸ್ತಾಪ, ನೆರೆಹೊರೆಯವರೊಂದಿಗೆ ವಾಗ್ವಾದ, ಉಷ್ಣ ಬಾಧೆ, ರಕ್ತ ದೋಷ, ಆಕಸ್ಮಿಕ ಸಾಲ ಮಾಡುವ ಪರಿಸ್ಥಿತಿ, ಪ್ರಯಾಣದಲ್ಲಿ ವಿಘ್ನ, ಮೇಲಾಧಿಕಾರಿಗಳಿಂದ ನೋವು, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಧನಸ್ಸು: ಕೋರ್ಟ್ ಕೇಸ್ಗಳಲ್ಲಿ ಓಡಾಟ, ಸ್ವಯಂಕೃತ್ಯಗಳಿಂದ ತೊಂದರೆ, ಆತುರ ಸ್ವಭಾವ, ಮಕ್ಕಳಿಂದ ಅನುಕೂಲ, ಭೂ ವ್ಯವಹಾರದಲ್ಲಿ ಲಾಭ, ಪಾಲುದಾರಿಕೆಯಲ್ಲಿ ಶುಭ, ಆಕಸ್ಮಿಕ ಧನಸಂಪತ್ತು ಪ್ರಾಪ್ತಿ.
ಮಕರ: ಕೆಲಸಗಳಲ್ಲಿ ವಿಪರೀತ ಒತ್ತಡ, ಕಿಬ್ಬೊಟ್ಟೆ ನೋವು, ಆರೋಗ್ಯದಲ್ಲಿ ಸಮಸ್ಯೆ, ಹಿತ ಶತ್ರುಗಳ ಕಾಟ, ಮಿತ್ರರಿಂದ ನಷ್ಟ, ಸಂಗಾತಿಯಲ್ಲಿ ಹಠಮಾರಿತನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.
ಕುಂಭ: ಉದ್ಯೋಗ ಲಾಭ, ಮಕ್ಕಳ ಜೀವನದಲ್ಲಿ ಪ್ರಗತಿ, ಉತ್ತಮ ಅವಕಾಶಗಳು ಪ್ರಾಪ್ತಿ, ಬಂಧುಗಳಿಂದ ಸಹಕಾರ, ಮಾಡುವ ಕೆಲಸಕ್ಕೆ ಅನ್ಯರಿಂದ ಒತ್ತಡ, ವಿದೇಶ ಪ್ರಯಾಣ ಯೋಗ.
ಮೀನ: ಹಣಕಾಸು ಪ್ರಾಪ್ತಿ, ಧನ ಯೋಗ, ಮಕ್ಕಳ ಜೀವನದಲ್ಲಿ ಪ್ರಗತಿ, ವಿದ್ಯಾಭ್ಯಾಸದಲ್ಲಿ ಅನುಕೂಲ, ತಂದೆಯಿಂದ ಲಾಭ, ಆಕಸ್ಮಿಕ ಬಂಧುಗಳ ಆಗಮನ, ದುಶ್ಚಟಗಳಿಂದ ತೊಂದರೆ, ವಿಕೃತ ಭಾವನೆಗಳು ಮೂಡುವುದು.