ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ,
ಶುಕ್ರವಾರ, ಉತ್ತರಾಷಾಢ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 11:09 ರಿಂದ 12:35
ಗುಳಿಕಕಾಲ: ಬೆಳಗ್ಗೆ 8:16 ರಿಂದ 9:42
ಯಮಗಂಡಕಾಲ: ಮಧ್ಯಾಹ್ನ 3:28 ರಿಂದ 4:55
Advertisement
ದಿನ ವಿಶೇಷ: ಅವರಾತ್ರಿ ಅಮಾವಾಸ್ಯೆ
Advertisement
ಮೇಷ: ವಿದ್ಯಾಭ್ಯಾಸ ನಿಮಿತ್ತ ಒತ್ತಡ, ಆಲೋಚನೆಗಳಿಂದ ನಿದ್ರಾಭಂಗ, ವ್ಯಾಪಾರದಲ್ಲಿ ಅಧಿಕ ಚಿಂತೆ, ಮಕ್ಕಳ ಪ್ರಗತಿಗಾಗಿ ಮಾಡಿದ ಸಾಲ ಬಾಧೆ, ಕುತ್ತಿಗೆ, ಸೊಂಟ, ತಲೆ ನೋವು, ಆರೋಗ್ಯದ ಬಗ್ಗೆ ಕಾಳಜಿವಹಿಸಿ.
Advertisement
ವೃಷಭ: ವಾಹನದಿಂದ ಅನುಕೂಲ, ಪಿತ್ರಾರ್ಜಿತ ಆಸ್ತಿಯಿಂದ ಧನಾಗಮನ, ಮಿತ್ರರಿಂದ ಸಹಾಯ, ನೆರೆಹೊರೆ ಬಂಧುಗಳಿಂದ ನೋವು, ಮಕ್ಕಳಲ್ಲಿ ಚುರುಕುತನ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಉನ್ನತ ಪದವಿಗೆ ಹಂಬಲ.
ಮಿಥುನ: ವಿದ್ಯಾಭ್ಯಾಸ ನಿಮಿತ್ತ ಪ್ರಯಾಣ, ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ನೆರೆಹೊರೆಯವರಿಂದ ಸಂಶಯ ವಾತಾವರಣ.
ಕಟಕ: ವಿದ್ಯಾಭ್ಯಾಸದಲ್ಲಿ ಪ್ರಗಿತ, ಅವಕಾಶಗಳು ಪ್ರಾಪ್ತಿ, ಪ್ರಯಾಣದಲ್ಲಿ ನಷ್ಟ, ಸಂಕಷ್ಟ ಎದುರಾಗುವುದು, ಅಹಂಭಾವ, ಆತ್ಮಾಭಿಮಾನ ಹೆಚ್ಚು, ಆತುರ ಸ್ವಭಾವದಿಂದ ತೊಂದರೆ.
ಸಿಂಹ: ಸ್ವಯಂಕೃತ ಅಪರಾಧಗಳಿಂದ ತೊಂದರೆ, ಮಿತ್ರರೊಂದಿಗೆ ಕಲಹ, ಬಂಧುಗಳಿಂದ ಅನುಕೂಲ, ಆಕಸ್ಮಿಕ ಧನಾಗಮನ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
ಕನ್ಯಾ: ಅಹಂಭಾವದಿಂದ ದಾಂಪತ್ಯದಲ್ಲಿ ಕಲಹ, ದೂರ ಪ್ರದೇಶದಲ್ಲಿ ಮಕ್ಕಳಿಗೆ ಉದ್ಯೋಗಾವಕಾಶ, ಉದ್ಯೋಗ-ವ್ಯಾಪಾರದಲ್ಲಿ ನೆಮ್ಮದಿ, ಕಾರ್ಯ ಕ್ಷೇತ್ರದಲ್ಲಿ ಮಿತ್ರರಿಂದ ಅನುಕೂಲ.
ತುಲಾ: ಉದ್ಯೋಗದಲ್ಲಿ ಲಾಭ, ಮಕ್ಕಳಿಗೆ ಉತ್ತಮ ಅವಕಾಶ, ಉನ್ನತ ಪದವಿ ಯೋಗ, ವಿದ್ಯಾಭ್ಯಾಸಕ್ಕೆ ಅನುಕೂಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಿತ್ರರೇ ಶತ್ರುಗಳಾಗುವರು.
ವೃಶ್ಚಿಕ: ಉದ್ಯೋಗ ನಿಮಿತ್ತ ಓಡಾಟ, ಆಕಸ್ಮಿಕ ದೂರ ಪ್ರಯಾಣ, ವಿದ್ಯಾರ್ಥಿಗಳಲ್ಲಿ ಅನುಕೂಲ, ಮಕ್ಕಳ ನಡವಳಿಕೆಯಿಂದ ನೋವು, ಪ್ರೀತಿ ಪ್ರೇಮ ವಿಚಾರವಾಗಿ ವೈಮನಸ್ಸು.
ಧನಸ್ಸು: ಪಿತ್ರಾರ್ಜಿತ ಆಸ್ತಿ ಗೊಂದಲ ನಿವಾರಣೆ, ಉದ್ಯೋಗದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರಕ್ಕೆ ಉತ್ತಮ, ಆಕಸ್ಮಿಕ ಧನ ಯೋಗ.
ಮಕರ: ನೆರೆಹೊರೆ, ಬಂಧುಗಳಿಂದ ಕುತಂತ್ರ, ದಾಂಪತ್ಯದಲ್ಲಿ ಸಮಸ್ಯೆ, ಸಾಲ ಸಹಾಯಕ್ಕೆ ತಂದೆಯ ಭೇಟಿ, ಆಕಸ್ಮಿಕ ಪ್ರಯಾಣ, ಸಹೋದರನಿಂದ ಕಿರಿಕಿರಿ, ಕೌಟುಂಬಿಕ ಸಮಸ್ಯೆ ನಿವಾರಣೆ.
ಕುಂಭ: ಸಾಲ ತೀರಿಸಲು ಮನಸ್ಸು ಮಾಡುವಿರಿ, ಮಕ್ಕಳಿಂದ ಕುಟುಂಬಕ್ಕೆ ಆರ್ಥಿಕ ನೆರವು, ಅಹಂಭಾವ, ಆತುರ ಸ್ವಭಾವ, ನೀವಾಡುವ ಮಾತಿನಿಂದ ಅನರ್ಥ, ದಾಂಪತ್ಯದಲ್ಲಿ ಕಲಹ.
ಮೀನ: ತಲೆ ನೋವು, ಅಧಿಕ ಉಷ್ಣ, ಸಹೋದರಿಯಿಂದ ಅನುಕೂಲ, ಸ್ಥಿರಾಸ್ತಿ ಕಲಹಗಳಿಂದ ಮುಕ್ತಿ ಸಾಧ್ಯತೆ, ವ್ಯವಹಾರಗಳಲ್ಲಿ ಮುನ್ನಡೆ.