Connect with us

Dina Bhavishya

ದಿನ ಭವಿಷ್ಯ: 23-11-2019

Published

on

ಪಂಚಾಂಗ:
ಶ್ರೀವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಶನಿವಾರ, ಹಸ್ತ ನಕ್ಷತ್ರ
ಮಧ್ಯಾಹ್ನ 2:44 ನಂತರ ಚಿತ್ತಾ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:17 ರಿಂದ 10:43
ಗುಳಿಕಕಾಲ: ಬೆಳಗ್ಗೆ 6:24 ರಿಂದ 7:51
ಯಮಗಂಡಕಾಲ: ಮಧ್ಯಾಹ್ನ 1:36 ರಿಂದ 3:02

ಮೇಷ: ಸ್ಥಿರಾಸ್ತಿ ಮೇಲೆ ಸಾಲ ಪಡೆಯುವಿರಿ, ಮಕ್ಕಳಿಂದ ಒತ್ತಡ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಪಿತ್ರಾರ್ಜಿತ ಆಸ್ತಿಯಿಂದ ನಷ್ಟ, ತಾಯಿಯೊಂದಿಗೆ ವಾಗ್ವಾದ, ಉದ್ಯಮ-ವ್ಯಾಪಾರದಲ್ಲಿ ಪ್ರಗತಿ, ಬಂದಂತಹ ಲಾಭ ಖರ್ಚು, ವಾಹನ ಅಪಘಾತ ಸಾಧತೆ.

ವೃಷಭ: ಸಂಗಾತಿಯಿಂದ ಅನುಕೂಲ, ಅಹಂಭಾವದಿಂದ ದಾಂಪತ್ಯದಲ್ಲಿ ಮನಃಸ್ತಾಪ, ಮಿತ್ರರಿಂದ ನಿದ್ರಾಭಂಗ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಸಹಕಾರ, ಕೆಲಸ ಕಾರ್ಯಗಳಲ್ಲಿ ಜಯ, ಸ್ನೇಹಿತರು-ಬಂಧುಗಳಿಗಾಗಿ ಖರ್ಚು, ಯಂತ್ರೋಪಕರಣಗಳಿಂದ ನಷ್ಟ, ಸ್ಥಿರಾಸ್ತಿ-ವಾಹನದಿಂದ ಅನುಕೂಲ.

ಮಿಥುನ: ಉದ್ಯೋಗ ನಿಮಿತ್ತ ಪ್ರಯಾಣ, ನೆರೆಹೊರೆಯವರಿಂದ ಒತ್ತಡ, ಸಾಲಗಾರರ ಕಾಟ, ಅಧಿಕವಾದ ಉಷ್ಣ ಬಾಧೆ, ರೋಗ ಬಾಧೆ, ನಿದ್ರಾಭಂಗ, ಆದಾಯದಲ್ಲಿ ಕುಂಠಿತ, ಸ್ನೇಹಿತರು ದೂರವಾಗುವ ಸಾಧ್ಯತೆ, ಅರೋಗ್ಯಕ್ಕಾಗಿ ಖರ್ಚು.

ಕಟಕ: ಮಕ್ಕಳಿಂದ ಲಾಭ-ಧನಾಗಮನ, ಉದ್ಯೋಗದಲ್ಲಿ ಅನುಕೂಲ, ಕುಟುಂಬಸ್ಥರಿಂದ ಸ್ವಾಭಿಮಾನಕ್ಕೆ ಧಕ್ಕೆ, ದಾಯಾದಿಗಳ ಕಲಹ, ರಕ್ತ ದೋಷ-ದೇಹದಲ್ಲಿ ಆಯಾಸ, ಮಕ್ಕಳಲ್ಲಿ ಉತ್ತಮ ಪ್ರಗತಿ, ವಿದ್ಯಾಭ್ಯಾಸದಲ್ಲಿ ಅನುಕೂಲ.

ಸಿಂಹ: ಮೇಲಾಧಿಕಾರಿಗಳಿಂದ ನೋವು, ಉದ್ಯೋಗದಲ್ಲಿ ಪ್ರಗತಿ, ಸ್ವಯಂಕೃತ ಅಪರಾಧಗಳಿಂದ ನಿಂದನೆ, ಗೃಹೋಪಯೋಗಿ ವಸ್ತುಗಳಿಗೆ ಖರ್ಚು, ಅವಕಾಶಗಳು ಕೈ ತಪ್ಪುವುದು, ಭೂಮಿ-ವಾಹನದಿಂದ ಧನಾಗಮನ, ತಂದೆಯಿಂದ ಅನುಕೂಲ, ಎಲೆಕ್ಟ್ರಾನಿಕ್ ವಸ್ತುಗಳಿಂದ ತೊಂದರೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಪದವಿ ವಿದ್ಯಾರ್ಥಿಗಳಿಗೆ ಸಮಸ್ಯೆ.

ಕನ್ಯಾ: ದಾಂಪತ್ಯದಲ್ಲಿ ವಿರಸ, ಅಧಿಕ ಸಿಟ್ಟು, ಆತುರ ಸ್ವಭಾವ, ಆಕಸ್ಮಿಕ ನಷ್ಟ, ತಂದೆಯಿಂದ ಕಿರಿಕಿರಿ, ಸರ್ಕಾರಿ ಅಧಿಕಾರಿಗಳಿಂದ ನಷ್ಟ, ರಾಜಕೀಯ ವ್ಯಕ್ತಿಗಳಿಂದ ಸಂಕಷ್ಟ, ಅನಿರೀಕ್ಷಿತ ಸೋಲು, ನಷ್ಟ-ನಿರಾಸೆ, ನಿದ್ರಾಭಂಗ, ವಿದ್ಯಾಭ್ಯಾಸಕ್ಕೆ ಒತ್ತಡ, ನೆರೆಹೊರೆ ದಾಯಾದಿಗಳ ಕಲಹ, ಹಳೇ ವಸ್ತುಗಳಿಂದ ಖರ್ಚು.

ತುಲಾ: ಸಂಗಾತಿಯಿಂದ ತೊಂದರೆ, ಪಾಲುದಾರಿಕೆಯಲ್ಲಿ ಸಮಸ್ಯೆ, ಶತ್ರುಗಳ ದಮನ, ಲಾಭ ಪ್ರಮಾಣ ಕುಂಠಿತ, ಅವಕಾಶಗಳು ಕೈ ತಪ್ಪುವುದು, ಸ್ನೇಹಿತರು ದೂರವಾಗುವರು, ಉದ್ಯೋಗ ಪ್ರಾಪ್ತಿ, ವಿಚ್ಛೇದನ ಕೇಸ್‍ಗಳಲ್ಲಿ ಜಯ, ಸಂಬಂಧಿಕರಿಂದ ಅನುಕೂಲ, ವಿದ್ಯಾರ್ಥಿಗಳಲ್ಲಿ ಅನಾರೋಗ್ಯ.

ವೃಶ್ಚಿಕ: ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಸ್ವಂತ ಉದ್ಯಮ-ವ್ಯಾಪಾರದಲ್ಲಿ ಲಾಭ, ಮೇಲಾಧಿಕಾರಿಗಳಿಂದ ಪ್ರಶಂಸೆ, ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ, ಕಂಟ್ರಾಕ್ಟರ್‍ಗಳಿಗೆ ಲಾಭ, ಶುಭ ಕಾರ್ಯದ ಸಂತಸ ಸುದ್ದಿ, ಅಧಿಕ ಉಷ್ಣ ಬಾಧೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಧನಸ್ಸು; ತಂದೆಯಿಂದ ಅನುಕೂಲ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಜಯ, ಆರೋಗ್ಯದಲ್ಲಿ ಸಮಸ್ಯೆ, ಭವಿಷ್ಯದ ಚಿಂತನೆ, ಮಕ್ಕಳೊಂದಿಗೆ ವಾಗ್ವಾದ, ಮಾನಸಿಕ ಒತ್ತಡ, ಅತಿಯಾದ ಒಳ್ಳೆತನದಿಂದ ನಷ್ಟ, ದಾಯಾದಿಗಳ ಕಲಹ, ಕೆಲಸ ಕಾರ್ಯಗಳಿಗೆ ಖರ್ಚು, ವಿದ್ಯಾರ್ಥಿಗಳಲ್ಲಿ ಮಂದತ್ವ.

ಮಕರ: ಪತ್ರ ವ್ಯವಹಾರಗಳಲ್ಲಿ ತೊಂದರೆ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಕೋರ್ಟ್ ಕೇಸ್‍ಗಾಗಿ ಓಡಾಟ, ಮಕ್ಕಳಿಂದ ನೋವು, ಸೋಲು-ನಷ್ಟ, ನಿರಾಸೆ, ಸ್ನೇಹಿತರಿಂದ ಆಕಸ್ಮಿಕ ಅವಘಡ, ಅನಿರೀಕ್ಷಿತ ಲಾಭ, ಧನ ಸಂಪತ್ತು ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಅಡೆತಡೆ.

ಕುಂಭ: ಉದ್ಯೋಗ ಬದಲಾವಣೆಗೆ ಮನಸ್ಸು, ಸಂಗಾತಿಯಿಂದ ಧನಾಗಮನ, ಪಾಲುದಾರಿಕೆಯಲ್ಲಿ ಲಾಭ, ಬಂಧುಗಳೊಂದಿಗೆ ಉತ್ತಮ ಬಾಂಧವ್ಯ, ಉದ್ಯೋಗದಲ್ಲಿ ಅನುಕೂಲ, ಸ್ಥಿರಾಸ್ತಿ ಸಂಪಾದಿಸುವ ಮನಸ್ಸು, ವಾಹನ ಯೋಗ, ಪತ್ರ ವ್ಯವಹಾರಗಳಲ್ಲಿ ತೊಡಗುವಿರಿ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಅನುಕೂಲ.

ಮೀನ: ಸ್ವಂತ ಉದ್ಯಮ-ವ್ಯಾಪಾರ ಆರಂಭಕ್ಕೆ ಸಾಲ, ಬಾಯಿ ಹುಣ್ಣು, ತಲೆ ನೋವು, ಉಸಿರಾಟದ ಸಮಸ್ಯೆ, ದೂರ ಪ್ರಯಾಣ ಸಾಧ್ಯತೆ, ಕಾರ್ಯಗಳಲ್ಲಿ ಜಯ, ಮಕ್ಕಳಿಂದ ಆರ್ಥಿಕ ಅನುಕೂಲ, ನೀವಾಡುವ ಮಾತಿನಿಂದ ಶತ್ರುತ್ವ, ತಂದೆಯಿಂದ ಭಾಗ್ಯೋದಯ, ಪದವಿ ವಿದ್ಯಾರ್ಥಿಗಳಲ್ಲಿ ಯಶಸ್ಸು.

Click to comment

Leave a Reply

Your email address will not be published. Required fields are marked *