ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ, ಗುರುವಾರ.
ಮೇಷ: ಮಿತ್ರರೊಂದಿಗೆ ದೂರ ಪ್ರಯಾಣ ಮಾಡುವಿರಿ, ತಂದೆ ಮಕ್ಕಳಲ್ಲಿ ಮನಃಸ್ತಾಪ, ವೈರತ್ವ ಬೆಳೆಯುವುದು, ದೇವರ ಕಾರ್ಯಕ್ಕೆ ಅಧಿಕವಾದ ಖರ್ಚು, ಮನಸ್ಸಿನಲ್ಲಿ ಆತಂಕ, ದಿನ ಅಂತ್ಯದಲ್ಲಿ ನೆಮ್ಮದಿ ಲಭಿಸುವ ಸಾಧ್ಯತೆ.
Advertisement
ವೃಷಭ: ಆಕಸ್ಮಿಕವಾಗಿ ಉದ್ಯೋಗ ಬದಲಾವಣೆ, ಪಿತ್ರಾರ್ಜಿತ ಆಸ್ತಿ ತಗಾದೆ, ಸ್ಥಿರಾಸ್ತಿ ವ್ಯವಹಾರದಲ್ಲಿ ಎಚ್ಚರಿಕೆ, ದಾಂಪತ್ಯದಲ್ಲಿ ವಿರಹ, ಮನಸ್ಸಿಗೆ ಅಸಮಾಧಾನ.
Advertisement
ಮಿಥುನ: ತಂದೆಯಿಂದ ಪ್ರಯಾಣಕ್ಕೆ ಆರ್ಥಿಕ ಸಹಾಯ, ಉದ್ಯೋಗ ಸ್ಥಳದಲ್ಲಿನ ಕಿರಿಕಿರಿ, ಉದ್ಯೋಗ ಬದಲಾವಣೆಗೆ ಮನಸ್ಸು ಮಾಡುವಿರಿ,ಕುಟುಂಬದಲ್ಲಿ ದಾಯಾದಿಗಳ ಕಲಹ, ಸಮಾಜದಲ್ಲಿ ಗೌರವ ಪ್ರತಿಷ್ಠೆ ಧಕ್ಕೆ.
Advertisement
ಕಟಕ: ಕುಟುಂಬ ಸಮೇತ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ, ವಾಹನ ಅಪಘಾತವಾಗುವ ಸಂಭವ, ಅನಗತ್ಯ ಮಾತುಗಳಿಂದ ವಾಗ್ವಾದ, ಮಕ್ಕಳೊಂದಿಗೆ ಕಿರಿಕಿರಿ, ನೆಮ್ಮದಿ ಜೀವನಕ್ಕೆ ಧಕ್ಕೆ.
Advertisement
ಸಿಂಹ: ಮಕ್ಕಳಿಗಾಗಿ ದೈವ ಕಾರ್ಯ ಮಾಡುವಿರಿ, ಆಕಸ್ಮಿಕ ಅಧಿಕವಾದ ಖರ್ಚು, ಹಳೆಯ ಕಬ್ಬಿಣದಿಂದ ಪೆಟ್ಟಾಗುವ ಸಾಧ್ಯತೆ, ತಾಯಿ ಜೊತೆ ಮುನಿಸು,ಕಾರ್ಯ ಸ್ಥಳದಲ್ಲಿನ ಯಂತ್ರಗಳಿಂದ ಪೆಟ್ಟು.
ಕನ್ಯಾ; ಕೆಲಸಗಾರರು-ಸೇವಕರಿಂದ ಅನುಕೂಲ, ಶತ್ರುಗಳಿಂದ ನಿದ್ರಾಭಂಗ, ವಾಹನ ರಿಪೇರಿ, ಸ್ಥಿರಾಸ್ತಿ ನಷ್ಟ, ದಾಂಪತ್ಯದಲ್ಲಿ ವಿರಸ, ವೈಮನಸ್ಸು, ಈ ದಿನ ಮಿಶ್ರ ಫಲ.
ತುಲಾ: ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ಪ್ರಾಪ್ತಿ, ಮಿತ್ರರೊಂದಿಗೆ ಅನಗತ್ಯ ವಾಗ್ವಾದ-ಕಲಹ, ಸ್ಥಳ ಬದಲಾವಣೆಗೆ ಮನಸ್ಸು, ಉದ್ಯೋಗ ಬದಲಾವಣೆಗೆ ಯೋಚನೆ, ಈ ದಿನ ಸಮಾಧಾನಕರವಾಗಲಿದೆ.
ವೃಶ್ಚಿಕ: ಸ್ಥಿರಾಸ್ತಿ ಲಭಿಸುವ ಸಾಧ್ಯತೆ, ನೆಮ್ಮದಿ ಜೀವನಕ್ಕೆ ಸಹಕಾರ, ಹಣಕಾಸು ವಿಚಾರದಲ್ಲಿ ಹಿನ್ನಡೆ, ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಮನ:ಸ್ತಾಪ, ಈ ದಿನ ಮಿಶ್ರ ಫಲ,
ಧನಸ್ಸು: ಬಂಧುಗಳು-ನೆರೆಹೊರೆಯವರಿಂದ ಪ್ರೀತಿ-ವಾತ್ಸಲ್ಯ, ಮಾನಸಿಕ ನೆಮ್ಮದಿಗಾಗಿ ದೂರ ಪ್ರಯಾಣ, ವಾಹನ ಖರೀದಿಗೆ ಉತ್ತಮ ಅವಕಾಶ, ಕೆಲಸ ಕಾರ್ಯಗಳಿಗೆ ಅನುಕೂಲ, ಈ ದಿನ ಶುಭ ಫಲ ಪ್ರಾಪ್ತಿ.
ಮಕರ: ಮಿತ್ರರಲ್ಲಿನ ವೈಮನಸ್ಸಿನಿಂದ ಸಂಸಾರದಲ್ಲಿ ಕಲಹ, ಆಕಸ್ಮಿಕ ಅಧಿಕವಾದ ಖರ್ಚು ಮಾಡುವಿರಿ, ನೆರೆಹೊರೆ-ಬಂಧು ಬಾಂಧವರು ದೂರವಾಗುವ ಸಾಧ್ಯತೆ, ಮಾನಸಿಕ ನೆಮ್ಮದಿಗೆ ಧಕ್ಕೆ, ಈ ದಿನ ಎಚ್ಚರಿಕೆ ನಿರ್ಧಾರ ಅಗತ್ಯ.
ಕುಂಭ: ಹಣಕಾಸು ಪರಿಸ್ಥಿತಿ ಚೇತರಿಕೆ, ಸಾಲಗಾರರಿಂದ ಮುಕ್ತಿ ಸಾಧ್ಯತೆ, ಉತ್ತಮ ಗೌರವ, ಹೆಸರು ಕೀರ್ತಿ ಪ್ರಾಪ್ತಿ, ಗೌರವ ಸನ್ಮಾನ ಲಭಿಸುವುದು.
ಮೀನ: ಮಕ್ಕಳು ದೂರವಾಗುವ ಆಲೋಚನೆ ಮಾಡುವರು, ಬಿಸಿನೆಸ್ ಮಾಡಲು ಯೋಜನೆ ರೂಪಿಸುವಿರಿ, ಹಣ ಸಂಪಾದನೆಗೆ ದೂರ ಪ್ರಯಾಣ, ಪ್ರಯಾಣದಲ್ಲಿ ಬೆಲೆ ಬಾಳುವ ವಸ್ತು ಕಳೆದುಕೊಳ್ಳುವಿರಿ, ಈ ದಿನ ಮಿಶ್ರ ಫಲ.