ಪಂಚಾಂಗ
ರಾಹುಕಾಲ: 7:57 ರಿಂದ 9:28
ಗುಳಿಕಕಾಲ: 2:01 ರಿಂದ 3:32
ಯಮಗಂಡಕಾಲ: 10:59 ರಿಂದ 12:30
ವಾರ: ಸೋಮವಾರ ತಿಥಿ: ಪಂಚಮಿ
ನಕ್ಷತ್ರ: ಕೃತಿಕ
ಶ್ರೀ ಪರಾಭವ ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ಚೈತ್ರ ಮಾಸ, ಶುಕ್ಲ ಪಕ್ಷ
ಮೇಷ: ಉತ್ತಮ ಪ್ರಗತಿ, ಕೃಷಿಕರಿಗೆ ಲಾಭ, ಉನ್ನತ ವ್ಯಾಸಂಗಕ್ಕೆ ಅವಕಾಶ, ಮಾನಸಿಕ ಶಾಂತಿ, ಶತ್ರು ನಾಶ, ದಾಂಪತ್ಯದಲ್ಲಿ ಪ್ರೀತಿ.
ವೃಷಭ: ಮಕ್ಕಳಿಂದ ನೆಮ್ಮದಿ, ಸಹೋದರರ ಜೊತೆ ಭಿನ್ನಾಭಿಪ್ರಾಯ, ಸಾಲಭಾದೆ, ದುಂದು ವೆಚ್ಚಕ್ಕೆ ಕಡಿವಾಣ ಹಾಕಿ.
ಮಿಥುನ: ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ, ಆರೋಗ್ಯದಲ್ಲಿ ಏರುಪೇರು, ನಿಂದನೆ, ಅಪವಾದ ಎಚ್ಚರ.
ಕಟಕ: ದೃಷ್ಟಿ ದೋಷದಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಮನಕ್ಲೇಶ, ಮಿಶ್ರಫಲ, ತಾಳ್ಮೆ ಸಹನೆಯಿಂದ ವರ್ತಿಸಿ.
ಸಿಂಹ: ಬಂಧುಗಳಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಸುಧಾರಣೆ, ಕಾರ್ಯ ಸಫಲತೆ, ನಿಮ್ಮ ಆಲೋಚನೆಗೆ ಆದ್ಯತೆ ನೀಡಿ.
ಕನ್ಯಾ: ನಿರೀಕ್ಷೆಗೂ ಮೀರಿದ ಆದಾಯ, ಮಾತಿನಲ್ಲಿ ಹಿಡಿತವಿರಲಿ, ಕಾರ್ಯವೈಖರಿ, ಅನ್ಯರಿಗೆ ಸಹಾಯ ಮಾಡುವಿರಿ, ಉದ್ಯೋಗದಲ್ಲಿ ಬಡ್ತಿ.
ತುಲಾ: ಸಾಲದ ವ್ಯವಹಾರಕ್ಕೆ ಕೈ ಹಾಕಬೇಡಿ, ವಿದ್ಯಾರ್ಥಿಗಳಿಗೆ ಶುಭ, ಹಿರಿಯರ ರಕ್ಷೆಯಿಂದ ಕಾರ್ಯ ಸಫಲತೆ.
ವೃಶ್ಚಿಕ: ಉದ್ಯೋಗ ವ್ಯವಹಾರದಲ್ಲಿ ತೊಡಕು, ಅನಾರೋಗ್ಯ, ದಾಂಪತ್ಯದಲ್ಲಿ ಕಲಹ, ಆಸ್ತಿ ವಿಷಯದಲ್ಲಿ ಕಿರಿಕಿರಿ.
ಧನಸ್ಸು: ಕೆಲಸ ಕಾರ್ಯಗಳಲ್ಲಿ ಜಯ, ಅಧಿಕ ತಿರುಗಾಟ, ಮನೆಯಲ್ಲಿ ಸಂತಸ, ಆರೋಗ್ಯದತ್ತ ಗಮನಹರಿಸಿ, ಶತ್ರು ನಾಶ.
ಮಕರ: ಜನ ಮನ್ನಣೆ, ಅನಾವಶ್ಯಕ ಚರ್ಚೆಗೆ ಆಸ್ಪದ ಕೊಡಬೇಡಿ, ಉದ್ಯೋಗದಲ್ಲಿ ಅಭಿವೃದ್ಧಿ, ದೂರ ಪ್ರಯಾಣ.
ಕುಂಭ: ಅನ್ಯ ಜನರ ಸಹಕಾರ, ಕಾರ್ಯಸಿದ್ಧಿ, ನಿರೀಕ್ಷೆಗೂ ಮೀರಿದ ಪ್ರಗತಿ, ಅತಿಯಾದ ಆತ್ಮವಿಶ್ವಾಸ, ವಾಹನ ಖರೀದಿ.
ಮೀನ: ಅಲ್ಪ ಆದಾಯ ಖರ್ಚು ಜಾಸ್ತಿ, ಅನಾವಶ್ಯಕ ಸ್ಪರ್ಧೆ ಬೇಡ, ನಾನಾ ಮೂಲಗಳಿಂದ ಧನ ಲಾಭ, ಮನಸ್ಸಿಗೆ ನೆಮ್ಮದಿ.

