Connect with us

Dina Bhavishya

ದಿನ ಭವಿಷ್ಯ: 22-11-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಶುಕ್ಲ ಪಕ್ಷ.
ವಾರ: ಭಾನುವಾರ, ತಿಥಿ: ಅಷ್ಟಮಿ
ನಕ್ಷತ್ರ: ಧನಿಷ್ಠ
ರಾಹುಕಾಲ: 4.28 ರಿಂದ 5.55
ಗುಳಿಕಕಾಲ: 3.02 ರಿಂದ 4.28
ಯಮಗಂಡಕಾಲ: 12.09 ರಿಂದ 1.36.

ಮೇಷ: ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಇತರರ ಮಾತಿಗೆ ಮರುಳಾಗಬೇಡಿ, ಶ್ರಮಕ್ಕೆ ತಕ್ಕ ಫಲ, ದೇವರ ಕಾರ್ಯಗಳಲ್ಲಿ ಭಾಗಿ, ಭೂ ಲಾಭ, ಉದ್ಯೋಗದಲ್ಲಿ ಬಡ್ತಿ.

ವೃಷಭ: ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ, ಅಮೂಲ್ಯ ವಸ್ತು ಖರೀದಿ, ಜನರಲ್ಲಿ ಕಲಹ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಯೋಗ, ಮನಸ್ಸಿನ ಮೇಲೆ ಕೆಟ್ಟ ಪರಿಣಾಮ, ಅಧಿಕ ತಿರುಗಾಟ.

ಮಿಥುನ: ಕುಟುಂಬದಲ್ಲಿ ಸೌಖ್ಯ, ಕೆಲಸ ಕಾರ್ಯಗಳಲ್ಲಿ ವಿಳಂಬ, ತೀರ್ಥಕ್ಷೇತ್ರಗಳ ದರ್ಶನ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಉತ್ತಮ ಬುದ್ಧಿಶಕ್ತಿ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.

ಕಟಕ: ಯಾರನ್ನು ಹೆಚ್ಚು ನಂಬಬೇಡಿ, ಅಧಿಕ ಖರ್ಚು, ಪ್ರೇಮಿಗಳಿಗೆ ಜಯ, ಹಿತಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಸುಧಾರಣೆ, ಸ್ಥಿರಾಸ್ತಿ ಮಾರಾಟದಿಂದ ಲಾಭ.

ಸಿಂಹ: ಉತ್ತಮ ಆದಾಯ, ದಾಂಪತ್ಯದಲ್ಲಿ ವಿರಸ, ವೃತ್ತ ತಿರುಗಾಟ, ವಸ್ತ್ರ ವ್ಯಾಪಾರಿಗಳಿಗೆ ನಷ್ಟ, ಸಾಲ ಮರುಪಾವತಿ, ಮೇಲಾಧಿಕಾರಿಗಳಿಂದ ತೊಂದರೆ, ಶತ್ರು ಭಾದೆ, ಚಂಚಲ ಮನಸ್ಸು, ಅಧಿಕ ಖರ್ಚು.

ಕನ್ಯಾ: ಕೆಲಸ ಕಾರ್ಯಗಳಲ್ಲಿ ಜಯ, ದಾನ ಧರ್ಮದಲ್ಲಿ ಆಸಕ್ತಿ, ನೀಚ ಜನರ ಸಹವಾಸ, ವಾಹನ ಅಪಘಾತ, ಸಲ್ಲದ ಅಪವಾದ, ಅನಾರೋಗ್ಯ ಎಚ್ಚರದಿಂದಿರಿ, ಯತ್ನ ಕಾರ್ಯದಲ್ಲಿ ತೊಂದರೆ.

ತುಲಾ: ವಿದ್ಯಾಭ್ಯಾಸದಲ್ಲಿ ತೊಂದರೆ, ಪರರಿಂದ ಸಹಾಯ, ಭಯಭೀತಿ ನಿವಾರಣೆ, ಸ್ತ್ರೀಯರಿಗೆ ಶುಭ, ಮಂಗಳ ಕಾರ್ಯದಲ್ಲಿ ಭಾಗ್ಯ, ಮಕ್ಕಳಿಂದ ಸಹಾಯ, ಸ್ಥಳ ಬದಲಾವಣೆ.

ವೃಶ್ಚಿಕ: ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರು ಬಾಧೆ, ಚಂಚಲ ಮನಸ್ಸು, ವಿಪರೀತ ವ್ಯಸನ, ಸಲ್ಲದ ಅಪವಾದ, ಆಲಸ್ಯ ಮನೋಭಾವ, ಅನ್ಯರಲ್ಲಿ ದ್ವೇಷ.

ಧನಸ್ಸು: ಅಲ್ಪ ಆದಾಯ ಅಧಿಕ ಖರ್ಚು, ಕೆಲಸಕಾರ್ಯಗಳಲ್ಲಿ ನಿಧಾನ, ಮನಸ್ಸಿನ ಆರೋಗ್ಯದಲ್ಲಿ ಏರುಪೇರು, ವಿದೇಶ ಪ್ರಯಾಣ, ಶೀತ ಸಂಬಂಧ ರೋಗಗಳು, ನೀಚ ಜನರ ಸಹವಾಸ.

ಮಕರ: ಋಣಭಾದೆ, ಯತ್ನ ಕಾರ್ಯದಲ್ಲಿ ಜಯ, ಬಂಧುಮಿತ್ರರ ಭೇಟಿ, ಇಷ್ಟಾರ್ಥ ಸಿದ್ಧಿ, ಅನಾರೋಗ್ಯ, ಪರಸ್ಥಳ ವಾಸ, ತೀರ್ಥಯಾತ್ರೆ ದರ್ಶನ.

ಕುಂಭ: ವ್ಯಾಪಾರದಲ್ಲಿ ಪ್ರಗತಿ, ಕುಟುಂಬದಲ್ಲಿ ಅನರ್ಥ, ಮಾತಾ-ಪಿತೃಗಳಲ್ಲಿ ದ್ವೇಷ, ಶತ್ರು ಭಾದೆ, ಅಕಾಲ ಭೋಜನ, ಅನಿರೀಕ್ಷಿತ ಖರ್ಚು, ಸಜ್ಜನ ಸಹವಾಸದಿಂದ ಕೀರ್ತಿ, ಅಧಿಕ ಕೋಪ.

ಮೀನ: ಸಾಧಾರಣ ಪ್ರಗತಿ, ಉದ್ಯೋಗದಲ್ಲಿ ವರ್ಗಾವಣೆ, ಮನಸ್ಸಿನಲ್ಲಿ ಆತಂಕ, ಕಾರ್ಯಸ್ಥಳದಲ್ಲಿ ನಿಂದನೆ, ಯಂತ್ರೋಪಕರಣದಿಂದ ಲಾಭ, ಉತ್ತಮ ಬುದ್ಧಿ.

Click to comment

Leave a Reply

Your email address will not be published. Required fields are marked *