ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಶನಿವಾರ, ಶತಭಿಷ ನಕ್ಷತ್ರ.
Advertisement
ಶುಭ ಘಳಿಗೆ: ಮಧ್ಯಾಹ್ನ 12:26 ರಿಂದ 2:02
ಅಶುಭ ಘಳಿಗೆ: ಬೆಳಗ್ಗೆ 9:14 ರಿಂದ 10:50
Advertisement
ರಾಹುಕಾಲ: ಬೆಳಗ್ಗೆ 9:14 ರಿಂದ 10:48
ಗುಳಿಕಕಾಲ: ಬೆಳಗ್ಗೆ 6:07 ರಿಂದ 7:41
ಯಮಗಂಡಕಾಲ: ಮಧ್ಯಾಹ್ನ 1:56 ರಿಂದ 3:29
Advertisement
ಮೇಷ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಸ್ನೇಹಿತರಿಂದ ಧನಾಗಮನ, ಪ್ರೀತಿ-ವಿಶ್ವಾಸಕ್ಕೆ ದ್ರೋಹ, ಮಕ್ಕಳ ದುರ್ನಡತೆಗಳಿಂದ ಆತಂಕ.
Advertisement
ವೃಷಭ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಉದ್ಯಮಸ್ಥರಿಗೆ ಅನುಕೂಲ, ಶತ್ರುಗಳಿಂದ ನಿಂದನೆ, ಮಾನಸಿಕ ವೇದನೆ, ಸಾಲ ಮಾಡುವ ಆಲೋಚನೆ, ಶೀತ ಸಂಬಂಧಿತ ರೋಗ, ಆರೋಗ್ಯದಲ್ಲಿ ವ್ಯತ್ಯಾಸ.
ಮಿಥುನ: ಪ್ರೇಮ ವಿಚಾರಕ್ಕೆ ವಿರೋಧ, ಅಲಂಕಾರಿಕ ವಸ್ತುಗಳ ಖರೀದಿ, ಅತಿಯಾದ ಆಲೋಚನೆ, ವಿಷಯಾಸಕ್ತಿಗಳು ವೃದ್ಧಿ, ಮನಸ್ಸಿನಲ್ಲಿ ನಾನಾ ಭಾವನೆ.
ಕಟಕ: ಸ್ತ್ರೀಯರಿಂದ ಅನಾನುಕೂಲ, ಸ್ನೇಹಿತರಿಂದ ಹಣಕಾಸು ನಷ್ಟ, ಗುಪ್ತ ವಿಚಾರಗಳು ಬಯಲು, ಸ್ಥಿರಾಸ್ತಿ-ವಾಹನ ಕಳೆದುಕೊಳ್ಳುವ ಭೀತಿ.
ಸಿಂಹ: ಉದ್ಯೋಗದಲ್ಲಿ ಕಿರಿಕಿರಿ, ಮಿತ್ರರು ದೂರವಾಗುವರು, ಮಹಿಳೆಯರಿಂದ ಸಮಸ್ಯೆ, ವಿಕೃತ ಆಸೆಗಳು, ದುಶ್ಚಟಗಳಿಂದ ತೊಂದರೆ, ಮಕ್ಕಳು ಪ್ರೀತಿಯಲ್ಲಿ ಬೀಳುವರು, ಹೆತ್ತವರಿಗೆ ನಿದ್ರಾಭಂಗ.
ಕನ್ಯಾ: ಸ್ನೇಹಿತರಿಂದ ಲಾಭ, ಹಣಕಾಸು ಅನುಕೂಲ, ದೂರ ಪ್ರದೇಶಗಳಲ್ಲಿ ಉದ್ಯೋಗ, ಸ್ವಂತ ಉದ್ಯಮಸ್ಥರಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ, ಉತ್ತಮ ಅವಕಾಶ ಪ್ರಾಪ್ತಿ.
ತುಲಾ: ಆಕಸ್ಮಿಕ ಮಿತ್ರರ ಭೇಟಿ, ಭಾವನೆಗಳೊಂದಿಗೆ ವಿಹಾರ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಪ್ರಗತಿ.
ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ, ಆಕಸ್ಮಿಕ ದುರ್ಘಟನೆ, ಪ್ರಯಾಣದಿಂದ ನಷ್ಟ, ದುರಾಸೆಗಳಿಂದ ಸಂಕಷ್ಟ, ಉದ್ಯೋಗ ಸ್ಥಳದಲ್ಲಿ ಸಂಶಯ.
ಧನಸ್ಸು: ಆರೋಗ್ಯ ಸಮಸ್ಯೆ, ಮನಸ್ಸಿನಲ್ಲಿ ಆತಂಕ, ಸಾಲ ಬಾಧೆ, ಶತ್ರುಗಳ ಕಾಟ, ಭವಿಷ್ಯದ ಬಗ್ಗೆ ಚಿಂತೆ, ಸಂಗಾತಿಯ ಬಂಧುಗಳಿಂದ ಲಾಭ.
ಮಕರ: ಪ್ರೇಮದ ಬಲೆಗೆ ಸಿಲುಕುವಿರಿ, ಉದ್ಯೋಗದಲ್ಲಿ ಅನುಕೂಲ, ಉತ್ತಮ ಗೌರವ ಸ್ಥಾನಮಾನ, ಮಕ್ಕಳಿಗಾಗಿ ಖರ್ಚು, ಧಾರ್ಮಿಕ ಕಾರ್ಯಗಳಿಗೆ ವೆಚ್ಚ.
ಕುಂಭ: ಮಕ್ಕಳು ವಾಹನ ಕೇಳುವರು, ಪ್ರಯಾಣದಲ್ಲಿ ಶತ್ರುಕಾಟ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾಭ್ಯಾಸಕ್ಕೆ ಆಲೋಚನೆ.
ಮೀನ: ಮಕ್ಕಳಿಂದ ಆಕಸ್ಮಿಕ ಸಮಸ್ಯೆ, ಮನಸ್ಸಿಗೆ ನೋವು, ಬಂಧಗಳೊಂದಿಗೆ ಬಾಂಧವ್ಯ, ಸ್ಥಿರಾಸ್ತಿ-ವಿಚ್ಚೇದನೆ ವಿಚಾರದಲ್ಲಿ ಕಲಹ, ಆಯುಷ್ಯ-ಜ್ಞಾನ ವೃದ್ಧಿಸೋ ಚಿಂತೆ.