ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಶುಕ್ರವಾರ, ಮೃಗಶಿರ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:28
Advertisement
ರಾಹುಕಾಲ: ಬೆಳಗ್ಗೆ 10:54 ರಿಂದ 12:30
ಗುಳಿಕಕಾಲ: ಬೆಳಗ್ಗೆ 7:42 ರಿಂದ 9:18
ಯಮಗಂಡಕಾಲ: ಮಧ್ಯಾಹ್ನ 3:41 ರಿಂದ 5:17
ದಿನ ವಿಶೇಷ: ಪ್ರದೋಷ
Advertisement
ಮೇಷ: ಮಾನಸಿಕ ಒತ್ತಡ, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು, ವಾಹನದಿಂದ ತೊಂದರೆ, ತಾಯಿಗೆ ಅನಾರೋಗ್ಯ, ದಾಯಾದಿಗಳ ಕಲಹ.
Advertisement
ವೃಷಭ: ಪತ್ರ ವ್ಯವಹಾರಗಳಲ್ಲಿ ತೊಂದರೆ, ಪ್ರಯಾಣದಲ್ಲಿ ಅಡೆತಡೆ, ಸಹೋದರರಿಂದ ನೋವು, ಅತಿಯಾದ ಆತ್ಮ ವಿಶ್ವಾಸ, ಉದ್ಯೋಗ ಬದಲಾವಣೆಗೆ ಆಲೋಚನೆ.
Advertisement
ಮಿಥುನ: ಬಾಯಿ ಹುಣ್ಣು, ವಾಹನಗಳಿಂದ ತೊಂದರೆ, ಕಾರ್ಮಿಕರೊಂದಿಗೆ ವಾಗ್ವಾದ, ಸಹೋದರನಿಂದ ಲಾಭ, ಹಳೇ ಮಿತ್ರರಿಂದ ಅನುಕೂಲ.
ಕಟಕ: ಮಕ್ಕಳ ಆರೋಗ್ಯದಲ್ಲಿ ಏರುಪೇರು, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ದುಶ್ಚಟಗಳಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯೋಗದಲ್ಲಿ ಅಡೆತಡೆ, ಮೇಲಾಧಿಕಾರಿಗಳಿಂದ ಕಿರಿಕಿರಿ.
ಸಿಂಹ: ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ವ್ಯವಹಾರಗಳಿಂದ ನಷ್ಟ, ಗುಪ್ತ ಇಚ್ಛೆಗಳು ನೆರವೇರುವುದು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.
ಕನ್ಯಾ: ಮಿತ್ರರೊಂದಿಗೆ ಕಲಹ, ಅನಗತ್ಯ ತೊಂದರೆಗೆ ಸಿಲುಕುವಿರಿ, ಆಕಸ್ಮಿಕ ಲಾಭ, ಆಸೆಗಳು ಈಡೇರುವುದು, ದೂರ ಪ್ರಯಾಣ, ಹಣಕಾಸು ಪ್ರಾಪ್ತಿ.
ತುಲಾ: ಉದ್ಯೋಗ ಸ್ಥಳದಲ್ಲಿ ಒತ್ತಡ, ಕೆಲಸ ಕಾರ್ಯಗಳಲ್ಲಿ ಜಯ, ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಅಧಿಕ ಒತ್ತಡ, ಹಣಕಾಸು ಚಿಂತೆ, ಉನ್ನತ ಹುದ್ದೆಯ ಅವಕಾಶ.
ವೃಶ್ಚಿಕ: ಅಧಿಕ ಉಷ್ಣ ಬಾಧೆ, ಸಂಧಿವಾತ ಹೆಚ್ಚಾಗುವುದು, ಸ್ಥಿರಾಸ್ತಿ-ವಾಹನ ಸಾಲದ ಚಿಂತೆ, ಬಂಧುಗಳಿಂದ ನೋವು, ಪ್ರಯಾಣದಲ್ಲಿ ವಸ್ತುಗಳು ಕಳವು, ತಂದೆಯೇ ಶತ್ರುವಾಗುವರು.
ಧನಸ್ಸು: ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ, ಗರ್ಭಿಣಿಯರು ಎಚ್ಚರಿಕೆ, ಪ್ರೇಮ ವಿಚಾರದಲ್ಲಿ ತೊಂದರೆ, ದುಶ್ಚಟಗಳಿಂದ ಜೈಲು ಪಾಲು, ಪಾಪ ಪ್ರಜ್ಞೆ ಕಾಡುವುದು.
ಮಕರ: ದಾಂಪತ್ಯದಲ್ಲಿ ಕಲಹ, ಭೂ ವ್ಯವಹಾರಗಳಲ್ಲಿ ಕಲಹ, ಗುಪ್ತ ವಿಚಾರಗಳಿಂದ ಸಮಸ್ಯೆ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ, ಉದ್ಯೋಗದಲ್ಲಿ ಅನುಕೂಲ, ಸ್ವಯಂಕೃತ್ಯದಿಂದ ಹಣಕಾಸು ನಷ್ಟ.
ಕುಂಭ: ಶತ್ರುಗಳು ನಾಶ, ಕಬ್ಬಿಣದ ವಸ್ತುಗಳು ಕಳವಾಗುವುದು, ಉದ್ಯೋಗ ನಷ್ಟ, ಉದ್ಯಮದಲ್ಲಿ ಪ್ರಗತಿ, ದಾಯಾದಿಗಳು ಶತ್ರುಗಳಾಗುವರು, ಸಹೋದ್ಯೋಗಿಗಳಿಂದ ಕಿರಿಕಿರಿ.
ಮೀನ: ಬರಬೇಕಾದ ಹಣಕಾಸು ಹಿನ್ನಡೆ, ಮಕ್ಕಳೊಂದಿಗೆ ಕಿರಿಕಿರಿ, ಅತಿಯಾದ ಸಿಟ್ಟು, ತಂದೆ ಮಾಡಿದ ತಪ್ಪುಗಳ ಬಗ್ಗೆ ಚಿಂತೆ, ಹೆಣ್ಮಕ್ಕಳಿಂದ ಧನ ಸಹಾಯ, ಆಕಸ್ಮಿಕ ಉದ್ಯೋಗ ಪ್ರಾಪ್ತಿ.