ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ನಿಜ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಗುರುವಾರ, ಹಸ್ತ ನಕ್ಷತ್ರ.
ರಾಹುಕಾಲ: ಮಧ್ಯಾಹ್ನ 2:01 ರಿಂದ 3:37
ಗುಳಿಕಕಾಲ: ಬೆಳಗ್ಗೆ 9:12 ರಿಂದ 10:48
ಯಮಗಂಡಕಾಲ: ಬೆಳಗ್ಗೆ 5:59 ರಿಂದ 7:36
Advertisement
ಮೇಷ: ಸಾಲಗಾರರಿಂದ ಕಿರಿಕಿರಿ, ಶತ್ರುಗಳಿಂದ ಮಾನಸಿಕ ಹಿಂಸೆ, ಪಿತ್ರಾರ್ಜಿತ ಆಸ್ತಿ ತಗಾದೆ.
Advertisement
ವೃಷಭ: ಹಣಕಾಸು ವಿಚಾರವಾಗಿ ಅವಮಾನ, ದುಶ್ಚಟಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ, ನೆರೆಹೊರೆ-ಬಂಧುಗಳಿಂದ ಕಿರಿಕಿರಿ.
Advertisement
ಮಿಥುನ: ಸ್ಥಿರಾಸ್ತಿಯಿಂದ ನಷ್ಟ, ನರ ದೌರ್ಬಲ್ಯ, ಆರೋಗ್ಯದಲ್ಲಿ ಏರುಪೇರು, ತಾಯಿಗೆ ಅನಾರೋಗ್ಯ.
Advertisement
ಕಟಕ: ಆತ್ಮೀಯರಿಂದ ಸಮಸ್ಯೆ, ಬಂಧು ಮಿತ್ರರಿಂದಲೇ ನಷ್ಟ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ತಂದೆಯಿಂದ ಮಾನಸಿಕ ಕಿರಿಕಿರಿ.
ಸಿಂಹ: ಹೊಸ ವಸ್ತು ಖರೀದಿಯಿಂದ ನಷ್ಟ, ಮನಸ್ಸಿನಲ್ಲಿ ಆತಂಕ, ಕನಸಿನಲ್ಲಿ ಸರ್ಪ ಪ್ರತ್ಯಕ್ಷ, ಕುಟುಂಬಕ್ಕೆ ಮಾಟ-ಮಂತ್ರದ ಆತಂಕ.
ಕನ್ಯಾ: ಮಿತ್ರರಿಂದ ಆಕಸ್ಮಿಕ ಲಾಭ, ತಂದೆಯಿಂದ ಬೈಗುಳ ಕೇಳುವಿರಿ, ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಕಿರಿಕಿರಿ, ಮಾನಸಿಕ ವ್ಯಥೆ.
ತುಲಾ: ಪ್ರಯಾಣದಲ್ಲಿ ನಷ್ಟ, ಆಕಸ್ಮಿಕ ಉದ್ಯೋಗ ನಷ್ಟ, ತಂದೆಯೊಂದಿಗೆ ವಾಗ್ವಾದ, ನಿದ್ರಾಭಂಗ.
ವೃಶ್ಚಿಕ: ಮಿತ್ರರಿಂದ ದಾಂಪತ್ಯದಲ್ಲಿ ಸಂಶಯ, ಕುಟುಂಬದಲ್ಲಿ ಮನಃಸ್ತಾಪ, ಅತಿಯಾದ ಆಸೆಗಳಿಂದ ಸಂಕಷ್ಟ, ಕೆಟ್ಟ ಆಲೋಚನೆಗಳಿಂದ ತೊಂದರೆ.
ಧನಸ್ಸು: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಆಕಸ್ಮಿಕ ಅವಘಢ, ವಿಶ್ರಾಂತಿ ವೇತನಕ್ಕೆ ಅಡೆತಡೆ, ಗೌರವ ಸನ್ಮಾನದಿಂದ ವಂಚಿತರಾಗುವಿರಿ, ಆತುರ ಸ್ವಭಾವದಿಂದ ಸಂಕಷ್ಟ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಸಂಶಯ, ತಂದೆ ಮಾಡಿದ ಸಾಲದಿಂದ ಮಾನಹಾನಿ, ಪ್ರತಿಭೆಗೆ ತಕ್ಕ ಫಲ, ಸ್ಪರ್ಧಾತ್ಮಕ ಚಟುವಟಿಕೆಗಳಿಂದ ದೂರ ಉಳಿಯುವಿರಿ,
ಕುಂಭ: ವಾಹನ ಅಪಘಾತದಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಬಾಡಿಗೆದಾರರು-ಸೇವಕರಿಂದ ತೊಂದರೆ, ಆಕಸ್ಮಿಕ ಧನ ಯೋಗ, ಸಾಲ ದೊರೆಯುವ ಸಾಧ್ಯತೆ.
ಮೀನ: ಮಕ್ಕಳ ಬಗ್ಗೆ ಸಂಶಯ, ಮನಸ್ಸಿನಲ್ಲಿ ಆತಂಕ, ಶೀತ ಸಂಬಂಧಿತ ರೋಗ ಬಾಧೆ, ಶರೀರ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ವಿಚಾರದಲ್ಲಿ ಮೋಸ-ನಷ್ಟ.