ದಿನ ಭವಿಷ್ಯ: 21-01-2020

Public TV
1 Min Read
DINA BHAVISHYA 5 5 1 1

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಮಂಗಳವಾರ, ಜೇಷ್ಠ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:27 ರಿಂದ 4:53
ಗುಳಿಕಕಾಲ: ಮಧ್ಯಾಹ್ನ 12:34 ರಿಂದ 2:01
ಯಮಗಂಡಕಾಲ: ಬೆಳಗ್ಗೆ 9:42 ರಿಂದ 11:08

ಮೇಷ: ಇಂದು ಭಾಗ್ಯ ವೃದ್ಧಿ, ಅಧಿಕಾರ ಪ್ರಾಪ್ತಿ, ನಾನಾ ರೀತಿಯ ಸಂಪಾದನೆ, ಶತ್ರುಗಳ ಬಾಧೆ, ವಿದ್ಯಾರ್ಥಿಗಳಿಗೆ ತೊಂದರೆ, ವಸ್ತ್ರ ಖರೀದಿ ಯೋಗ.

ವೃಷಭ: ಕುಟುಂಬ ಸೌಖ್ಯ, ವೃಥಾ ತಿರುಗಾಟ, ದುಃಖ, ಅಶಾಂತಿ, ಸಾಲ ಬಾಧೆ, ಕೆಲಸ ಕಾರ್ಯಗಳಲ್ಲಿ ವಿಳಂಬ.

ಮಿಥುನ: ಅಧಿಕವಾದ ತಿರುಗಾಟ, ಹಣಕಾಸು ತೊಂದರೆ, ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರಲ್ಲಿ ದ್ವೇಷ, ಗೌರವಕ್ಕೆ ಧಕ್ಕೆ.

ಕಟಕ: ಉದ್ಯೋಗದಲ್ಲಿ ಪ್ರಗತಿ, ಕೋರ್ಟ್ ಕೇಸ್‍ಗಳಲ್ಲಿ ಅಡೆತಡೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ಮನಸ್ಸಿಗೆ ಅಶಾಂತಿ, ವಾಹನ ರಿಪೇರಿ, ಹಣಕಾಸು ಖರ್ಚು.

ಸಿಂಹ: ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಅನುಕೂಲ, ಮಾಡಿದ ಕೆಲಸದಲ್ಲಿ ಪ್ರಗತಿ, ಆರೋಗ್ಯದಲ್ಲಿ ಚೇತರಿಕೆ, ಅನಿರೀಕ್ಷಿತ ದ್ರವ್ಯ ಲಾಭ.

ಕನ್ಯಾ: ರಾಜಕೀಯ-ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಉತ್ತಮ ಬುದ್ಧಿ ಶಕ್ತಿ, ಮಾತೃವಿನಿಂದ ಸಹಾಯ, ಸಾಲ ಬಾಧೆ, ವ್ಯವಹಾರದಲ್ಲಿ ಎಚ್ಚರ.

ತುಲಾ: ಬಿಡುವಿಲ್ಲದ ಕೆಲಸ ಕಾರ್ಯಗಳು, ದೇಹದಲ್ಲಿ ವಿಪರೀತ ಆಯಾಸ, ಅವಿವಾಹಿತರಿಗೆ ವಿವಾಹ ಯೋಗ, ಸ್ತ್ರೀಯರಿಗೆ ಲಾಭ.

ವೃಶ್ಚಿಕ: ಗುತ್ತಿಗೆ ಕೆಲಸದವರಿಗೆ ಶುಭ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಅವಕಾಶ ಸದುಪಯೋಗ ಪಡಿಸಿಕೊಳ್ಳಿ, ಮನಸ್ಸಿಗೆ ಅಸಮಾಧಾನ-ಬೇಸರ, ಆತ್ಮೀಯರೊಂದಿಗೆ ವೈಮನಸ್ಸು.

ಧನಸ್ಸು: ದಾನ ಧರ್ಮದಲ್ಲಿ ಆಸಕ್ತಿ, ಸಹೋದ್ಯೋಗಿಗಳಿಂದ ಬೆಂಬಲ, ಷೇರು ವ್ಯವಹಾರದಲ್ಲಿ ಧನ ಲಾಭ, ಈ ದಿನ ಶುಭ ಫಲ ಯೋಗ.

ಮಕರ: ಮಹಿಳೆಯರಿಗೆ ಶುಭ, ಮಾನಸಿಕ ನೆಮ್ಮದಿ, ಕುಟುಂಬದಲ್ಲಿ ಶಾಂತಿ, ಸುಖ ಭೋಜನ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ.

ಕುಂಭ: ವಿವಿಧ ಮೂಲಗಳಿಂದ ಧನ ಲಾಭ, ಮಿತ್ರರಿಂದ ಸಹಾಯ, ತಾಳ್ಮೆ ಅತ್ಯಗತ್ಯ, ಪರಾಕ್ರಮ ಕೆಲಸಗಳಲ್ಲಿ ಯಶಸ್ಸು.

ಮೀನ: ನಿರ್ಧಾರಗಳಿಂದ ದೂರ ಉಳಿಯುವಿರಿ, ಚಂಚಲ ಮನಸ್ಸು, ನೆಮ್ಮದಿಗೆ ಭಂಗ, ಸ್ತ್ರೀಯರಿಗೆ ತಾಳ್ಮೆ ಅತ್ಯಗತ್ಯ.

Share This Article
Leave a Comment

Leave a Reply

Your email address will not be published. Required fields are marked *