ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಮಂಗಳವಾರ, ಅಶ್ವಿನಿ ನಕ್ಷತ್ರ.
ರಾಹುಕಾಲ: ಮಧ್ಯಾಹ್ನ 3:37 ರಿಂದ 5:13
ಗುಳಿಕಕಾಲ: ಮಧ್ಯಾಹ್ನ 12:24 ರಿಂದ 2:01
ಯಮಗಂಡಕಾಲ: ಬೆಳಗ್ಗೆ 9:12 ರಿಂದ 10:48
Advertisement
ಮೇಷ: ಅಧಿಕ ತಿರುಗಾಟ, ಶತ್ರು ಬಾಧೆ, ಋಣ ಬಾಧೆ, ಮನಃಕ್ಲೇಷ, ಮಿತ್ರರೊಂದಿಗೆ ವಾಗ್ವಾದ.
Advertisement
ವೃಷಭ: ದೂರ ಪ್ರಯಾಣ, ಸುಖ ಭೋಜನ, ಸ್ಥಗಿತ ಕಾರ್ಯಗಳು ಪ್ರಗತಿ, ಮಾನಸಿಕ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಏರುಪೇರು.
Advertisement
ಮಿಥುನ: ವ್ಯವಹಾರದಲ್ಲಿ ಏರುಪೇರು, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ವಾಹನ ರಿಪೇರಿ, ಸಾಮಾನ್ಯ ನೆಮ್ಮದಿಗೆ ಭಂಗ.
Advertisement
ಕಟಕ: ಯತ್ನ ಕಾರ್ಯದಲ್ಲಿ ಅನುಕೂಲ, ಸೇವಕ ವರ್ಗದವರಿಂದ ಸಹಾಯ, ಭೂ ಲಾಭ, ಸ್ಥಳ ಬದಲಾವಣೆ, ದಾಂಪತ್ಯ ಕಲಹ.
ಸಿಂಹ: ಸಹೋದರ-ಸಹೋದರಿಯರ ಜೊತೆ ಕಲಹ, ಆರೋಗ್ಯದಲ್ಲಿ ಏರುಪೇರು, ಶತ್ರುಗಳ ಬಾಧೆ, ಯತ್ನ ಕಾರ್ಯದಲ್ಲಿ ವಿಘ್ನ.
ಕನ್ಯಾ: ಕುಲದೇವರ ದರ್ಶನ ಮಾಡಿ, ಎಲ್ಲರೊಂದಿಗೆ ಆತ್ಮೀಯತೆ, ಕೆಲಸ ಕಾರ್ಯಗಳಲ್ಲಿ ಪರಿಶ್ರಮ.
ತುಲಾ: ಕೃಷಿಯಲ್ಲಿ ಅಲ್ಪ ಲಾಭ, ವೃಥಾ ಧನವ್ಯಯ, ಸ್ಥಿರಾಸ್ತಿ ಮಾರಾಟ, ನಾನಾ ರೀತಿಯ ಚಿಂತೆ, ವ್ಯಾಪಾರದಲ್ಲಿ ಸಾಧಾರಣ ಲಾಭ.
ವೃಶ್ಚಿಕ: ಮಾಡುವ ಕೆಲಸಗಳಲ್ಲಿ ಜಯ, ಉದ್ಯೋಗದಲ್ಲಿ ಪ್ರಗತಿ, ಅನಗತ್ಯ ಕಲಹ, ಕಠೋರವಾಗಿ ಮಾತನಾಡುವಿರಿ.
ಧನಸ್ಸು: ಪ್ರಿಯ ಜನರ ಭೇಟಿ, ಆದಾಯಕ್ಕಿಂತ ಖರ್ಚು ಹೆಚ್ಚು, ಹಣಕಾಸು ತೊಂದರೆ, ಎಲ್ಲಿ ಹೋದರೂ ಅಶಾಂತಿ, ಅತಿಯಾದ ಕೋಪ.
ಮಕರ: ತೀರ್ಥಯಾತ್ರೆ ದರ್ಶನ, ಶ್ರಮಕ್ಕೆ ತಕ್ಕ ಫಲ, ಸಾಲ ಬಾಧೆ, ಮನಸ್ಸಿನಲ್ಲಿ ಆತಂಕ, ಮೃಷ್ಟಾನ್ನ ಭೋಜನ, ದುಷ್ಟರಿಂದ ತೊಂದರೆ.
ಕುಂಭ: ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಮಕ್ಕಳ ಬಗ್ಗೆ ಕಾಳಜಿವಹಿಸಿ, ಆರೋಗ್ಯದಲ್ಲಿ ಸುಧಾರಣೆ, ಕುಟುಂಬದಲ್ಲಿ ನೆಮ್ಮದಿ.
ಮೀನ: ಪರರಿಂದ ಸಹಾಯ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಮಹಿಳೆಯರಿಗೆ ಅನುಕೂಲ, ಋಣ ಬಾಧೆಯಿಂದ ಮುಕ್ತಿ.