ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಗುರುವಾರ, ಉತ್ತರಭಾದ್ರಪದ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 2:04 ರಿಂದ 3:39
ಗುಳಿಕಕಾಲ: ಬೆಳಗ್ಗೆ 9:19 ರಿಂದ 10:54
ಯಮಗಂಡಕಾಲ: ಬೆಳಗ್ಗೆ 6:10 ರಿಂದ 7:44
Advertisement
ಮೇಷ: ಮನಸ್ಸಿನಲ್ಲಿ ದೈವ ಚಿಂತನೆ, ದೇವತಾ ಕಾರ್ಯಗಳಿಗೆ ಅಧಿಕ ಖರ್ಚು, ಆಕಸ್ಮಿಕ ದುರ್ಘಟನೆಗಳಿಂದ ನಿದ್ರಾಭಂಗ, ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ.
Advertisement
ವೃಷಭ: ಬಂಧುಗಳಿಂದ ಸಹಕಾರ, ಮಿತ್ರರಿಂದ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಕಿರಿಕಿರಿ, ಮಾನಸಿಕವಾದ ಗೊಂದಲ, ಮನಸ್ಸಿನಲ್ಲಿ ಆತಂಕ.
Advertisement
ಮಿಥುನ: ಕೆಲಸ ಕಾರ್ಯಗಳಲ್ಲಿ ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೋರ್ಟ್ ಕೇಸ್‍ಗಳಲ್ಲಿ ತೊಂದರೆ.
ಕಟಕ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಉದ್ಯೋಗದಲ್ಲಿ ಯಶಸ್ಸು,ತಂದೆ ಮಕ್ಕಳಲ್ಲಿ ಕಿರಿಕಿರಿ, ಮಕ್ಕಳಿಂದ ಮಾನಹಾನಿ, ದಾಂಪತ್ಯದಲ್ಲಿ ವಿರಸ, ದುಶ್ಚಟಗಳಿಂದ ದೂರವಿರಿ.
ಸಿಂಹ: ವಿಪರೀತ ರಾಜಯೋಗ, ಆಲಸ್ಯ ಮನೋಭಾವ, ಮನಸ್ಸಿನಲ್ಲಿ ಜಿಗುಪ್ಸೆ, ಕಾಲಿಗೆ ಪೆಟ್ಟಾಗುವ ಸಾಧ್ಯತೆ.
ಕನ್ಯಾ: ಬಂಧುಗಳು-ಆತ್ಮೀಯರು ದೂರವಾಗುವರು, ನೆರೆಹೊರೆಯವರಿಂದ ನಿದ್ರಾಭಂಗ, ವಿಚ್ಛೇದನ ಕೇಸ್‍ಗಳಲ್ಲಿ ಜಯ.
ತುಲಾ: ಉದ್ಯೋಗ ಸ್ಥಳದಲ್ಲಿ ವಾಗ್ವಾದ, ಉದ್ಯೋಗ ನಷ್ಟ ಸಾಧ್ಯತೆ, ಗ್ರಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಆರ್ಥಿಕ ಸಂಕಷ್ಟ ಬಾಧಿಸುವುದು.
ವೃಶ್ಚಿಕ: ಹೆಣ್ಣು ಮಕ್ಕಳಿಂದ ಅನುಕೂಲ, ಗ್ಯಾಸ್ಟ್ರಿಕ್‍ನಿಂದ ಉದರಬಾಧೆ, ಕೆಲಸಗಳಲ್ಲಿ ನಿರಾಸಕ್ತಿ,ಹಣಕಾಸು ಪರಿಸ್ಥಿತಿ ಚೇತರಿಕೆ.
ಧನಸ್ಸು: ಮಕ್ಕಳಿಗೆ ವಿದೇಶ ಪ್ರಯಾಣ ಯೋಗ, ಚಂಚಲ ಮನಸ್ಸು, ಆತುರ ಸ್ವಭಾವದಿಂದ ಹಣ ನಷ್ಟ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಾಹನ ಚಾಲನೆಯಲ್ಲಿ ಎಚ್ಚರಿಕೆ.
ಮಕರ: ಕಂಕಣ ಭಾಗ್ಯ ಒಲಿಯುವುದು, ಅಕ್ರಮ ಸಂಪಾದನೆಗೆ ಮನಸ್ಸು, ಒಳ್ಳೆಯ ಸ್ನೇಹಿತರ ಪರಿಚಯ,
ಕುಂಭ: ಉದ್ಯೋಗಕ್ಕಾಗಿ ಅಧಿಕ ಖರ್ಚು, ಆರ್ಥಿಕ ಮುಗ್ಗಟ್ಟು, ಸಾಲ ಮಾಡುವ ಪರಿಸ್ಥಿತಿ, ಸೇವಕರು-ಕೆಲಸಗಾರರಿಂದ ತೊಂದರೆ.
ಮೀನ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬಸ್ಥರಿಂದಲೇ ಮಾನಹಾನಿ, ಸಾಲಗಾರರು-ಶತ್ರುಗಳಿಂದ ತೊಂದರೆ, ಆಧ್ಯಾತ್ಮಿಕ ಚಿಂತನೆಗಳು ಅಧಿಕ.