ಶ್ರೀ ವಿಶ್ವಾವಸುನಾಮ ಸಂವತ್ಸರ,
ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಕೃಷ್ಣಪಕ್ಷ,
ಅಮಾವಾಸ್ಯೆ, ಶುಕ್ರವಾರ,
ಜೇಷ್ಠ ನಕ್ಷತ್ರ
ರಾಹುಕಾಲ: 10:54 ರಿಂದ 12:20
ಗುಳಿಕಕಾಲ: 08:02 ರಿಂದ 09:28
ಯಮಗಂಡಕಾಲ: 03:11 ರಿಂದ 04:37
ಮೇಷ: ಆರ್ಥಿಕ ಚೇತರಿಕೆ, ಕುಟುಂಬದ ಸಹಕಾರ, ಪ್ರಯಾಣದಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ಯಶಸ್ಸು.
ವೃಷಭ: ವ್ಯಾಪಾರದಲ್ಲಿ ಅನಿರೀಕ್ಷಿತ ಬೆಳವಣಿಗೆ, ಅಧಿಕ ಒತ್ತಡ, ಮಾತಿನಿಂದ ಶತ್ರುತ್ವ, ಪ್ರೀತಿ ಪ್ರೇಮ ವಿಷಯಗಳಲ್ಲಿ ಸಮಸ್ಯೆ.
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ಉದ್ಯೋಗ ನಷ್ಟ, ಶತ್ರುಗಳ ವಿರುದ್ಧ ಜಯ.
ಕಟಕ: ಅಧಿಕ ಖರ್ಚು, ಸಂಗಾತಿಯಿಂದ ಅಂತರ, ಬಂಧುಗಳಿಂದ ನೋವು, ಸಾಲದ ಚಿಂತೆ, ಅವಮಾನ ಅಪವಾದಗಳು.
ಸಿಂಹ: ಸ್ತ್ರೀಯರಿಂದ ಅನುಕೂಲ ಮತ್ತು ಲಾಭ, ಆರ್ಥಿಕವಾಗಿ ಏಳಿಗೆ, ಪ್ರೀತಿ ಪ್ರೇಮದಲ್ಲಿ ಯಶಸ್ಸು, ಕುಟುಂಬದ ಸಹಕಾರ.
ಕನ್ಯಾ: ಆರ್ಥಿಕ ಅನುಕೂಲ, ಸಹೋದರಿಯರಿಂದ ಲಾಭ, ಮಾಧ್ಯಮಕ್ಷೇತ್ರದವರಿಗೆ ಅದೃಷ್ಟ, ಅನಿರೀಕ್ಷಿತ ಪ್ರಯಾಣ.
ತುಲಾ: ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ಅನುಕೂಲ, ನೆರೆಹೊರೆಯವರೊಂದಿಗೆ ಸಹಕಾರ.
ವೃಶ್ಚಿಕ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಅಡೆತಡೆ, ಪ್ರಯಾಣ ವಿಘ್ನ, ಶುಭ ಸಮಾಚಾರಗಳು.
ಧನಸ್ಸು: ಅನಾರೋಗ್ಯ ಸಮಸ್ಯೆ, ವ್ಯವಹಾರದಲ್ಲಿ ಉತ್ತಮ ಅವಕಾಶ, ಸೇವಕರಿಂದ ಸಮಸ್ಯೆ, ಉದ್ಯೋಗ ಲಾಭ.
ಮಕರ: ಅಧಿಕ ಖರ್ಚು, ಜೂಜು ರೇಸು ಲಾಟರಿಗಳಿಂದ ಸಮಸ್ಯೆ, ದೂರಪ್ರದೇಶದಲ್ಲಿ ಉದ್ಯೋಗ ಲಾಭ, ಸಾಲದ ಚಿಂತೆ ಕಾಡುವುದು, ತಂದೆಯಿಂದ ಅನುಕೂಲ.
ಕುಂಭ: ಸ್ಥಿರಾಸ್ತಿ ಲಾಭ, ತಾಯಿಯಿಂದ ಅನುಕೂಲ, ವಸ್ತ್ರಾಭರಣ ಖರೀದಿ, ಪ್ರಯಾಣದಿಂದ ಲಾಭ.
ಮೀನ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಸಂಗಾತಿಯೊಂದಿಗೆ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ಉದ್ಯೋಗ ಒತ್ತಡ, ಮಾಟ ಮಂತ್ರ ತಂತ್ರದ ಆತಂಕ.

