Connect with us

Dina Bhavishya

ದಿನ ಭವಿಷ್ಯ: 19-11-2019

Published

on

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಮಂಗಳವಾರ, ಆಶ್ಲೇಷ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:02 ರಿಂದ 4:29
ಗುಳಿಕಕಾಲ: ಮಧ್ಯಾಹ್ನ 12:09 ರಿಂದ 1:36
ಯಮಗಂಡಕಾಲ: ಬೆಳಗ್ಗೆ 9:16 ರಿಂದ 10:43

ಮೇಷ: ಕೆಲಸದಲ್ಲಿ ಹೆಚ್ಚಿನ ಏಕಾಗ್ರತೆ, ದುಷ್ಟರಿಂದ ದೂರವಿರಿ, ಎಲ್ಲರ ಮನಸ್ಸು ಗೆಲ್ಲುವಿರಿ, ಕೆಲಸ ಕಾರ್ಯಗಲಲ್ಲಿ ಪ್ರಗತಿ, ಈ ದಿನ ಶುಭ ಫಲ ಲಭಿಸುವುದು.

ವೃಷಭ: ಕುಟುಂಬದಲ್ಲಿ ಶಾಂತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಮಾನಸಿಕ ವ್ಯಥೆ, ಆಕಸ್ಮಿಕ ಖರ್ಚು, ಇತರರ ಮಾತಿಗೆ ಮರುಳಾಗಬೇಡಿ.

ಮಿಥುನ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಹಳೇ ಸಾಲ ಮರುಪಾವತಿ, ಶುಭ ಸುದ್ದಿ ಕೇಳುವಿರಿ, ಈ ದಿನ ಮಿಶ್ರ ಫಲ.

ಕಟಕ: ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಅತಿಯಾದ ಕೋಪ, ಆರೋಗ್ಯದಲ್ಲಿ ತಳಮಳ, ವೈಯುಕ್ತಿಕ ಕೆಲಸದಲ್ಲಿ ನಿಗಾವಹಿಸಿ, ಶತ್ರುಗಳ ಬಾಧೆ.

ಸಿಂಹ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಗುರು ಹಿರಿಯರಲ್ಲಿ ಭಕ್ತಿ, ಅಕಾಲ ಭೋಜನ, ಪ್ರಿಯ ಜನರ ಭೇಟಿ, ಮಿತ್ರರಿಂದ ದಸಹಾಯ.

ಕನ್ಯಾ: ಮಿತ್ರರಲ್ಲಿ ಪ್ರೀತಿ ವಾತ್ಸಲ್ಯ, ಸ್ತ್ರೀಯರಿಗೆ ತೊಂದರೆ, ಧನ ಲಾಭ, ಅಧಿಕಾರ ಪ್ರಾಪ್ತಿ, ಸಮಾಜದಲ್ಲಿ ಗೌರವ, ಅಧಿಕಾರಿಗಳಲ್ಲಿ ಕಲಹ.

ತುಲಾ: ಮೇಲಾಧಿಕಾರಿಗಳಿಂದ ಪ್ರಶಂಸೆ, ವ್ಯಾಪಾರದಲ್ಲಿ ಮಂದಗತಿ, ಮಾನಸಿಕ ವ್ಯಥೆ, ಕುಟುಂಬದ ಬಗ್ಗೆ ಗಮನಹರಿಸಿ.

ವೃಶ್ಚಿಕ: ಪ್ರತಿಯೊಂದು ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಸದಾ ಸಂಕಟ, ಅನಗತ್ಯ ನಿಷ್ಠೂರ ಮಾಡಿಕೊಳ್ಳುವಿರಿ.

ಧನಸ್ಸು: ಉದ್ಯೋಗದಲ್ಲಿ ಬಡ್ತಿ, ಕೆಲಸದಲ್ಲಿ ಯಶಸ್ಸು, ಉತ್ತಮ ಆದಾಯ ಪ್ರಾಪ್ತಿ, ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ, ಈ ದಿನ ಶುಭ ಫಲ ಪ್ರಾಪ್ತಿ.

ಮಕರ: ಅವಿವಾಹಿತರಿಗೆ ವಿವಾಹಯೋಗ, ಆತುರ ಸ್ವಭಾವ, ಶತ್ರುಗಳ ಬಾಧೆ, ಸ್ಥಿರಾಸ್ತಿ ಮಾರಾಟ, ಪರರ ಧನ ಪ್ರಾಪ್ತಿ.

ಕುಂಭ: ವಿದ್ಯಾರ್ಥಿಗಳಲ್ಲಿ ಪ್ರಗತಿ, ಗೆಳೆಯರಿಂದ ಸಹಾಯ, ದೇವತಾ ಕಾರ್ಯಗಳಲ್ಲಿ ಭಾಗಿ, ಕೃಷಿಯಲ್ಲಿ ಲಾಭ, ಹಿರಿಯರ ಭೇಟಿ.

ಮೀನ: ಸ್ತ್ರೀಯರಿಂದ ಖರ್ಚು, ಆದಾಯಕ್ಕಿಂದ ಖರ್ಚು ಹೆಚ್ಚು, ಹೊಸ ಕಾರ್ಯಾರಂಭಕ್ಕೆ ಪ್ರಯತ್ನ, ಉತ್ತಮ ಫಲ ಲಭಿಸುವುದು, ವಿರೋಧಿಗಳಿಂದ ಕುತಂತ್ರ, ಈ ದಿನ ತಾಳ್ಮೆಯಿಂದ ಕಾರ್ಯ ಪ್ರಗತಿ.

Click to comment

Leave a Reply

Your email address will not be published. Required fields are marked *