ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಬೆಳಗ್ಗೆ 7:44 ನಂತರ ಷಷ್ಠಿ ತಿಥಿ,
ಶನಿವಾರ, ಮೃಗಶಿರ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:10 ರಿಂದ 10:39
ಗುಳಿಕಕಾಲ: ಬೆಳಗ್ಗೆ 6:13 ರಿಂದ 7:41
ಯಮಗಂಡಕಾಲ: ಮಧ್ಯಾಹ್ನ 1:31 ರಿಂದ 3:06
Advertisement
ಮೇಷ: ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ಸ್ತ್ರೀಯರಿಂದ ಅಪಮಾನ, ಗೌರವಕ್ಕೆ ಧಕ್ಕೆ, ಸ್ನೇಹಿತರೊಂದಿಗೆ ಮನಃಸ್ತಾಪ, ಮಕ್ಕಳಿಂದ ಸಂಗಾತಿಯ ನಿಂದನೆ.
Advertisement
ವೃಷಭ: ಸ್ಥಿರಾಸ್ತಿ ತಗಾದೆ, ಆಸ್ತಿ ವಿಚಾರದಲ್ಲಿ ಮನಃಸ್ತಾಪ, ಮಹಿಳಾ ಶತ್ರುಗಳಿಂದ ಕಿರಿಕಿರಿ, ಮಾನಸಿಕ ವೇದನೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ನಷ್ಟದ ಭೀತಿ.
Advertisement
ಮಿಥುನ: ಮೋಜು-ಮಸ್ತಿಗಾಗಿ ಪ್ರಯಾಣ, ಪ್ರೇಮ ವಿಚಾರ ಮನೆಯಲ್ಲಿ ಪ್ರಸ್ತಾವನೆ, ವಸ್ತ್ರಾಭರಣ ಕಳೆದುಕೊಳ್ಳುವ ಸಾಧ್ಯತೆ, ದೈವ ನಿಂದನೆ ಮಾಡುವಿರಿ, ಮಕ್ಕಳಿಗೆ ಅನಾರೋಗ್ಯ, ಮನಸ್ಸಿನಲ್ಲಿ ಆತಂಕ.
Advertisement
ಕಟಕ: ಹಣಕಾಸು ಮೋಸ, ಸ್ಥಿರಾಸ್ತಿ-ವಾಹನ ಖರೀದಿಗೆ ಸಮಸ್ಯೆ, ಮಹಿಳಾ ಮಿತ್ರರಿಗೆ ಸಂಕಷ್ಟ, ಜೀವನದಲ್ಲಿ ಏರುಪೇರು, ಸ್ನೇಹಿತರ ನಡುವೆ ಮನಃಸ್ತಾಪ.
ಸಿಂಹ: ಉದ್ಯೋಗ ಸ್ಥಳದಲ್ಲಿ ಸಂಶಯ, ಗೌರವಕ್ಕೆ ಧಕ್ಕೆ, ವಿಕೃತ ಆಸೆಗಳು, ಚಂಚಲ ಮನಸ್ಸು, ಮಕ್ಕಳ ವಿಚಾರದಲ್ಲಿ ನೋವು, ಸಹೋದರಿಯ ನಡವಳಿಕೆಯಿಂದ ಕಿರಿಕಿರಿ.
ಕನ್ಯಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಭವಿಷ್ಯದ ಬಗ್ಗೆ ಚಿಂತೆ, ನಿದ್ರಾಭಂಗ, ಕೆಟ್ಟ ಕನಸು ಬೀಳುವುದು, ಪತ್ರ ವ್ಯವಹಾರಗಳಲ್ಲಿ ಎಚ್ಚರ.
ತುಲಾ: ಮಿತ್ರರೇ ಶತ್ರುವಾಗುವರು, ಅಹಂಭಾವದ ನಡವಳಿಕೆ, ಗೌರವಕ್ಕೆ ಚ್ಯುತಿ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಆಕಸ್ಮಿಕ ಉತ್ತಮ ಅವಕಾಶ.
ವೃಶ್ಚಿಕ: ಕೆಟ್ಟ ಹವ್ಯಾಸ ಹೆಚ್ಚಾಗುವುದು, ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ, ಹೊಸ ವಸ್ತುಗಳ ಖರೀದಿ, ವಸ್ತ್ರಾಭರಣ ಖರೀದಿಯಲ್ಲಿ ಮೋಸ, ಉದ್ಯೋಗದಲ್ಲಿ ನಷ್ಟ, ಗೌರವಕ್ಕೆ ಧಕ್ಕೆ-ನಿಂದನೆ.
ಧನಸ್ಸು: ಆತ್ಮೀಯರಿಂದ ಸಾಲ ಕೇಳುವಿರಿ, ಶತ್ರುಕಾಟ, ಮಾನಸಿಕ ವೇದನೆ, ದೇವತಾ ಕಾರ್ಯಗಳಲ್ಲಿ ಆಸಕ್ತಿ, ಕುಲದೇವರ ನಿಂದನೆ ಮಾಡುವಿರಿ.
ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆಸ್ಪತ್ರೆಗೆ ಅಲೆದಾಟ, ಅನಿರೀಕ್ಷಿತ ದುರ್ಘಟನೆ, ಆರ್ಥಿಕ ಸಮಸ್ಯೆಗಳು, ಆತ್ಮೀಯರಲ್ಲಿ ಕಲಹ, ಭಾವನೆಗಳಿಗೆ ಪೆಟ್ಟು.
ಕುಂಭ: ಕುಟುಂಬ ಗೌರವಕ್ಕೆ ಚ್ಯುತಿ, ಭವಿಷ್ಯದ ಬಗ್ಗೆ ಚಿಂತನೆ, ದಾಂಪತ್ಯದಲ್ಲಿ ಸಂಶಯ, ಶಕ್ತಿದೇವತೆಗಳ ದರ್ಶನ ಮಾಡುವಿರಿ.
ಮೀನ: ಅನ್ಯರ ತಪ್ಪಿನಿಂದ ಶಿಕ್ಷೆ, ಸಾಲಗಾರರಾಗುವ ಸಾಧ್ಯತೆ, ಮಕ್ಕಳು ಪೆಟ್ಟು ಮಾಡಿಕೊಳ್ಳುವರು, ಆರೋಗ್ಯದಲ್ಲಿ ವ್ಯತ್ಯಾಸ, ಸಂತಾನ ವಿಚಾರದಲ್ಲಿ ಅಲೆದಾಟ.