ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಗುರುವಾರ, ಹಸ್ತ ನಕ್ಷತ್ರ,
ಬೆಳಗ್ಗೆ 7:54 ನಂತರ ಚಿತ್ತ ನಕ್ಷತ್ರ.
Advertisement
ರಾಹುಕಾಲ: ಮಧ್ಯಾಹ್ನ 2:05 ರಿಂದ 3:41
ಗುಳಿಕಕಾಲ: ಬೆಳಗ್ಗೆ 9:18 ರಿಂದ 10:54
ಯಮಗಂಡಕಾಲ: ಮಧ್ಯಾಹ್ನ 3:41 ರಿಂದ 5:17
Advertisement
ಮೇಷ: ಭೂಮಿ-ವಾಹನದಿಂದ ಲಾಭ, ವಿದ್ಯಾರ್ಥಿಗಳಲ್ಲಿ ಆತಂಕ, ಕೆಲಸಗಳಲ್ಲಿ ಒತ್ತಡ-ನಿರುತ್ಸಾಹ, ಆರ್ಥಿಕ ಸಮಸ್ಯೆ ಬಗೆಹರಿಯುವುದು.
Advertisement
ವೃಷಭ: ವಿದ್ಯಾಭ್ಯಾಸದಲ್ಲಿ ಗೊಂದಲ, ಸ್ಥಿರಾಸ್ತಿ-ಪತ್ರವ್ಯವಹಾರಗಳಲ್ಲಿ ಲಾಭ, ಮಕ್ಕಳ ಅಭಿವೃದ್ಧಿಗಾಗಿ ಖರ್ಚು, ವ್ಯಾಪಾರ ಆರಂಭಕ್ಕೆ ಹಣವ್ಯಯ.
Advertisement
ಮಿಥುನ: ಹಣಕಾಸು ವಿಚಾರವಾಗಿ ರಾಜಯೋಗ, ಉದ್ಯೋಗ ನಿಮಿತ್ತ ಪ್ರಯಾಣ, ಉಷ್ಣ ಬಾಧೆ, ಒತ್ತಡದ ಜೀವನ, ಮಕ್ಕಳ ಆರೋಗ್ಯದಲ್ಲಿ ಏರುಪೇರು.
ಕಟಕ: ಸ್ವಯಂಕೃತ ಅಪರಾಧ ಮಾಡುವಿರಿ, ಮೆಚ್ಚುಗೆಯ ಮಾತುಗಳಿಂದ ಕಾರ್ಯ ಪ್ರಗತಿ, ಗೌರವ ಸನ್ಮಾನಕ್ಕೆ ಅಡೆತಡೆ, ಉದ್ಯೋಗ ಬಡ್ತಿಗೆ ತೊಂದರೆ.
ಸಿಂಹ: ಸ್ಥಿರಾಸ್ತಿ-ವಾಹನ ಖರೀದಿಗಾಗಿ ಖರ್ಚು, ದೀರ್ಘಕಾಲದ ಅನಾರೋಗ್ಯ, ಮಾನಸಿಕ ವ್ಯಥೆ, ವಿದ್ಯಾಭ್ಯಾಸಕ್ಕಾಗಿ ಓಡಾಟ, ನಿದ್ರಾಭಂಗ.
ಕನ್ಯಾ: ವ್ಯಾಪಾರ-ವ್ಯವಹಾರಕ್ಕೆ ಸಾಲ ಪ್ರಾಪ್ತಿ, ಉದ್ಯೋಗ ಬದಲಾವಣೆಯಿಂದ ಅದೃಷ್ಟ, ಉದಾಸೀನದಿಂದ ಅವಕಾಶ ಕೈತಪ್ಪುವುದು, ದಾಯಾದಿಗಳಿಂದ ಕಿರಿಕಿರಿ, ನಿದ್ರಾಭಂಗ.
ತುಲಾ: ಉದ್ಯೋಗ ಸ್ಥಳದಲ್ಲಿ ಗೌರವ ಸಂಪಾದನೆ, ಹಿರಿಯರ ಸಹೋದರನೊಂದಿಗೆ ವಾಗ್ವಾದ, ಕುಟುಂಬದಲ್ಲಿ ಆರ್ಥಿಕ ಸಂಕಷ್ಟ, ವಿದ್ಯಾಭ್ಯಾಸಕ್ಕೆ ತೊಂದರೆ, ಮನಸ್ಸಿನಲ್ಲಿ ಆತಂಕ.
ವೃಶ್ಚಿಕ: ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ಕಲಹ, ಶತ್ರುಗಳ ಕಾಟ, ವಿಶ್ರಾಂತಿ ಇಲ್ಲದ ಜೀವನ.
ಧನಸ್ಸು: ಆಕಸ್ಮಿಕ ಲಾಭ ಹೆಚ್ಚಾಗುವುದು, ಮಕ್ಕಳಲ್ಲಿ ಗೊಂದಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆತ್ಮೀಯರು-ನೆರೆಹೊರೆಯವರು ದೂರವಾಗುವರು.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಧನಾಗಮನ, ಹಳೇ ವಾಹನ ಖರೀದಿಗೆ ಚಿಂತೆ, ಸೈಟ್ ಖರೀದಿಸುವ ಆಲೋಚನೆ, ಮಿತ್ರರಿಂದ ಸಹಾಕರ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಸರ್ಕಾರಿ ಅಧಿಕಾರಿಗಳಿಂದ ಪ್ರಗತಿ.
ಕುಂಭ: ಪತ್ರ ವ್ಯವಹಾರದಲ್ಲಿ ಓಡಾಟ, ಗೃಹ ಬದಲಾವಣೆಗೆ ಅಡೆತಡೆ, ಉದ್ಯೋಗ ಬದಲಾವಣೆಯಿಂದ ತೊಂದರೆ, ತಂದೆ-ಮಕ್ಕಳಲ್ಲಿ ಮನಃಸ್ತಾಪ, ಶೀತ ಸಂಬಂಧಿಸಿದ ಸಮಸ್ಯೆ.
ಮೀನ: ತಂದೆಯಿಂದ ಅನಿರೀಕ್ಷಿತ ಹಣ ಸಹಾಯ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಮಕ್ಕಳ ಭವಿಷ್ಯಕ್ಕಾಗಿ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಒತ್ತಡ.