ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಚತುರ್ಥಿ,
ಗುರುವಾರ, ರೋಹಿಣಿ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 1:56 ರಿಂದ 3:29
ಗುಳಿಕಕಾಲ: ಬೆಳಗ್ಗೆ 9:16 ರಿಂದ 10:49
ಯಮಗಂಡಕಾಲ: ಬೆಳಗ್ಗೆ 6:09 ರಿಂದ 7:43
Advertisement
ಮೇಷ: ಸ್ಥಿರಾಸ್ತಿಯಿಂದ ಧನಾಗಮನ, ಉದಾಸೀನದಿಂದ ತೊಂದರೆ, ಉದ್ಯೋಗದಲ್ಲಿ ಒತ್ತಡ, ವಾಹನ ಚಾಲನೆಯಲ್ಲಿ ಎಚ್ಚರ, ಮೇಲಾಧಿಕಾರಿಗಳಿಂದ ಕಿರಿಕಿರಿ, ಮಕ್ಕಳಿಂದ ಆಕಸ್ಮಿಕ ತೊಂದರೆ.
Advertisement
ವೃಷಭ: ಪ್ರಯಾಣದಲ್ಲಿ ಅಡೆತಡೆ, ದಾಂಪತ್ಯದಲ್ಲಿ ಕಲಹ, ಮಕ್ಕಳಿಗೆ ಮಾನಸಿಕ ವೇದನೆ, ಪಿತ್ರಾರ್ಜಿತ ಆಸ್ತಿ ತಗಾದೆ, ಬಂಧುಗಳಿಂದ ಕಿರಿಕಿರಿ.
Advertisement
ಮಿಥುನ: ಆರ್ಥಿಕ ಮುಗ್ಗಟ್ಟು, ಸಂಕಷ್ಟಗಳು ಹೆಚ್ಚಾಗುವುದು, ರೋಗ ಬಾಧೆ, ಆಕಸ್ಮಿಕ ದುರ್ಘಟನೆ, ಪ್ರಯಾಣ ಸಾಧ್ಯತೆ, ಬಂಧುಗಳಿಂದ ಸಾಲ ಬಾಧೆ, ನಿದ್ರಾಭಂಗ.
ಕಟಕ: ಉದ್ಯಮ-ವ್ಯಾಪಾರದಲ್ಲಿ ಲಾಭ, ವ್ಯವಹಾರದಲ್ಲಿ ಅನುಕೂಲ, ಮಕ್ಕಳ ಮಿತ್ರರಿಂದ ದುರ್ನಡತೆ, ಮಕ್ಕಳಿಂದ ಗೌರವಕ್ಕೆ ಧಕ್ಕೆ.
ಸಿಂಹ: ಉದ್ಯೋಗ ಹುಡುಕಾಟ, ಅಧಿಕವಾದ ಖರ್ಚು, ಮಾನಸಿಕ ಅಸ್ಥಿರತೆ, ಅನಗತ್ಯ ಕೋಪ ಮಾಡಿಕೊಳ್ಳುವಿರಿ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ.
ಕನ್ಯಾ: ಪ್ರಯಾಣದಿಂದ ಅನುಕೂಲ, ತಂದೆಯಿಂದ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ವ್ಯಾಪಾರ ಆರಂಭಕ್ಕೆ ಅನುಕೂಲ.
ತುಲಾ: ಆಕಸ್ಮಿಕ ಉದ್ಯೋಗ ನಷ್ಟ, ಅನಗತ್ಯ ಮಾತಿನಿಂದ ವಾಗ್ವಾದ, ಅತ್ಮಗೌರವಕ್ಕೆ ಚ್ಯುತಿ, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ಸಂಗಾತಿಯಿಂದ ಅನುಕೂಲ, ಸ್ವಯಂಕೃತ್ಯಗಳಿಂದ ನಷ್ಟ, ಅಹಂಭಾವದಿಂದ ಸಂಕಷ್ಟಕ್ಕೆ ಸಿಲುಕುವಿರಿ, ಉದ್ಯೋಗ ಸ್ಥಳದಲ್ಲಿ ಕಲಹ.
ಧನಸ್ಸು: ವಿಪರೀತ ರಾಜಯೋಗ, ಪ್ರಯಾಣದಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ಒತ್ತಡ, ವ್ಯಾಪಾರದಲ್ಲಿ ನಷ್ಟ, ನಿದ್ರಾಭಂಗ.
ಮಕರ: ಪ್ರೇಮ ವಿಚಾರದಲ್ಲಿ ಮಿತ್ರರಿಂದ ತೊಂದರೆ, ಪೂರ್ವಜನ್ಮದ ಕರ್ಮ ಫಲ ಪ್ರಾಪ್ತಿ, ವ್ಯಾಪಾರ ವ್ಯವಹಾರದಲ್ಲಿ ತೊಂದರೆ, ಮೇಲಾಧಿಕಾರಿಗಳಿಂದ ಕಿರಿಕಿರಿ.
ಕುಂಭ: ಮನೋರೋಗ ಬಾಧೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ನಷ್ಟ ಪ್ರಮಾಣ ಅಧಿಕ, ಮಾನಸಿಕ ಚಿಂತೆ, ವ್ಯಾಪಾರದಲ್ಲಿ ಆಕಸ್ಮಿಕ ಬೆಳವಣಿಗೆ, ದಾಂಪತ್ಯದಲ್ಲಿ ಕಲಹ.
ಮೀನ: ವ್ಯಾಪಾರೋದ್ಯಮದಲ್ಲಿ ಲಾಭ, ವ್ಯವಹಾರದಲ್ಲಿ ಉತ್ತಮ ಹೆಸರು, ಕುಟುಂಬದಲ್ಲಿ ಅಶಾಂತಿ, ಪ್ರಗತಿ ಕುಂಠಿತ, ಮೇಲಾಧಿಕಾರಿಗಳಿಂದ ಒತ್ತಡ, ಪ್ರಯಾಣ ಮಾಡುವ ಸಾಧ್ಯತೆ.