ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಚರ್ತುದಶಿ ತಿಥಿ,
ಸೋಮವರ, ಪುಷ್ಯ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 8:13 ರಿಂದ 9:41
ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:33
ಯಮಗಂಡಕಾಲ: ಬೆಳಗ್ಗೆ 11:09 ರಿಂದ 12:37
Advertisement
ಮೇಷ: ಶ್ರಮಕ್ಕೆ ತಕ್ಕ ಫಲ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಅನ್ಯರನ್ನು ನಿಂದಿಸುವ ಸಾಧ್ಯತೆ, ಉದ್ವೇಗಕ್ಕೆ ಒಳಗಾಗುವಿರಿ.
Advertisement
ವೃಷಭ: ದೂರ ಪ್ರಯಾಣ, ಸ್ವಜನರ ವಿರೋಧ, ಶತ್ರುಗಳ ಭಯ, ಸಣ್ಣ ಪುಟ್ಟ ವಿಚಾರಗಳಲ್ಲಿ ವೈಮನಸ್ಸು, ಶರೀರದಲ್ಲಿ ಆಲಸ್ಯ.
Advertisement
ಮಿಥುನ: ಸುಗಂಧ ದ್ರವ್ಯಗಳಿಗೆ ಖರ್ಚು, ಅಲಂಕಾರಿಕ ವಸ್ತುಗಳ ಖರೀದಿ, ದಾಂಪತ್ಯದಲ್ಲಿ ವೈಮನಸ್ಸು, ನೆಮ್ಮದಿ ಇಲ್ಲದ ಜೀವನ.
ಕಟಕ: ಇಷ್ಟವಾದ ವಸ್ತು ಖರೀದಿ, ಬಂಧುಗಳಿಂದ ಸಹಕಾರ, ಮನಸ್ಸಿನಲ್ಲಿ ಆತಂಕ-ಭಯ, ಅನಿರೀಕ್ಷಿತ ತೊಂದರೆ.
ಸಿಂಹ: ದೂರ ಪ್ರಯಾಣ, ವಿಪರೀತ ಖರ್ಚು, ಶುಭ ಸಮಾರಂಭಕ್ಕೆ ಭೇಟಿ, ವಾದ-ವಿವಾದಗಳಿಂದ ಲಾಭ.
ಕನ್ಯಾ: ಚಂಚಲ ಮನಸ್ಸು, ಸ್ತ್ರೀಯರಿಗೆ ಲಾಭ, ಆರೋಗ್ಯದಲ್ಲಿ ಚೇತರಿಕೆ, ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ.
ತುಲಾ: ವ್ಯಾಪಾರದಲ್ಲಿ ಲಾಭ, ವಿರೋಧಿಗಳಿಂದ ತೊಂದರೆ, ಇತರರ ಮಾತಿನಿಂದ ಜಗಳ, ಮನಃಸ್ತಾಪ.
ವೃಶ್ಚಿಕ: ಅಧಿಕ ಧನವ್ಯಯ, ವ್ಯಾಪಾರದಲ್ಲಿ ನಷ್ಟ, ಅನ್ಯರಲ್ಲಿ ವೈಮನಸ್ಸು, ಕೆಲಸ ಕಾರ್ಯಗಳಲ್ಲಿ ವಿಘ್ನ, ಮಿತ್ರರಿಂದ ಸಹಾಯ.
ಧನಸ್ಸು: ಉದ್ಯೋಗದಲ್ಲಿ ಬಡ್ತಿ, ಶುಭ ಸಮಾರಂಭಗಳಲ್ಲಿ ಭಾಗಿ, ಚಂಚಲ ಸ್ವಭಾವ, ವಾದ-ವಿವಾದಗಳಿಂದ ದೂರವಿರಿ.
ಮಕರ: ಸ್ಥಳ ಬದಲಾವಣೆ, ಭೂ ಲಾಭ, ಯಾರನ್ನೂ ಹೆಚ್ಚು ನಂಬಬೇಡಿ, ಮಿತ್ರರಲ್ಲಿ ಮನಃಸ್ತಾಪ, ಅಲ್ಪ ಲಾಭ, ಅಧಿಕ ಖರ್ಚು.
ಕುಂಭ: ಸ್ತ್ರೀಯರಿಗೆ ಅಧಿಕಾರ ಪ್ರಾಪ್ತಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣ, ಮನಸ್ಸಿಗೆ ನಾನಾ ರೀತಿಯ ಚಿಂತೆ.
ಮೀನ: ಋಣ ಬಾಧೆ, ಕಾರ್ಯ ಭಂಗ, ಸಾಲ ಬಾಧೆ, ಕೋರ್ಟ್ ಕೇಸ್‍ಗಳಿಂದ ತೊಂದರೆ, ಇಲ್ಲ ಸಲ್ಲದ ಅಪವಾದ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv