ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಶನಿವಾರ, ವಿಶಾಖ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:18 ರಿಂದ 1:04
ಅಶುಭ ಘಳಿಗೆ: ಬೆಳಗ್ಗೆ 8:30 ರಿಂದ 9:16
Advertisement
ರಾಹುಕಾಲ: ಬೆಳಗ್ಗೆ 9:41 ರಿಂದ 11:09
ಗುಳಿಕಕಾಲ: ಬೆಳಗ್ಗೆ 6:44 ರಿಂದ 8:13
ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:33
Advertisement
ಮೇಷ: ಮಕ್ಕಳಲ್ಲಿ ಮೊಂಡುತನ, ಸರ್ಕಾರಿ ಕೆಲಸಗಳಲ್ಲಿ ಜಯ, ತಲೆ ನೋವು, ಅಧಿಕ ಉಷ್ಣ ಬಾಧೆ, ನರ ದೌರ್ಬಲ್ಯ, ಆರೋಗ್ಯದಲ್ಲಿ ಎಚ್ಚರಿಕೆ.
Advertisement
ವೃಷಭ: ಪಿತ್ರಾರ್ಜಿತ ಆಸ್ತಿ ತಗಾದೆ, ಸರ್ಕಾರಿ ಕೆಲಸಗಳಿಗೆ ಖರ್ಚು, ಉದ್ಯೋಗಕ್ಕಾಗಿ ಅಲೆದಾಟ, ಪುಣ್ಯಕ್ಷೇತ್ರಗಳ ದರ್ಶನ, ದೂರ ಪ್ರಯಾಣ, ರಾಜಕಾರಣಿಗಳ ಭೇಟಿ, ಒತ್ತಡದ ಜೀವನ ಮಾಡುವಿರಿ.
Advertisement
ಮಿಥುನ: ಸ್ವಂತ ವ್ಯವಹಾರಸ್ಥರಿಗೆ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಮಿತ್ರರಿಂದ ಸಾಲದ ಸಹಾಯ, ತಂದೆಯಿಂದ ಸಹಕಾರ, ಆರ್ಥಿಕ ಸಮಸ್ಯೆ ನಿವಾರಣೆ, ಕುಟುಂಬ ಸಮೇತ ಪ್ರಯಾಣ.
ಕಟಕ: ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ಸರ್ಕಾರಿ ಕೆಲಸಗಳಲ್ಲಿ ನಷ್ಟ, ಅಧಿಕಾರಿಗಳಿಂದ ಕಾರ್ಯ ವಿಳಂಬ, ಉದ್ಯೋಗ ಬದಲಾವಣೆಗೆ ಮನಸ್ಸು.
ಸಿಂಹ: ಮಿತ್ರರೊಂದಿಗೆ ಪ್ರಯಾಣ, ಅಧಿಕ ಖರ್ಚು, ದರ್ಪದ ಮಾತುಗಳನ್ನಾಡುವಿರಿ, ಮಧ್ಯಾಹ್ನ ನಂತರ ದಾಂಪತ್ಯದಲ್ಲಿ ವಿರಸ, ಆತ್ಮೀಯರಲ್ಲಿ ಮನಃಸ್ತಾಪ.
ಕನ್ಯಾ: ಸ್ವಯಂಕೃತ್ಯಗಳಿಂದ ನಷ್ಟ, ಆತುರ ನಿರ್ಧಾರದಿಂದ ತೊಂದರೆ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಆಕಸ್ಮಿಕ ದುರ್ಘಟನೆ, ಅನಿರೀಕ್ಷಿತ ಕಾರಣಗಳಿಂದ ಪ್ರಯಾಣ, ಉದ್ಯೋಗ ನಷ್ಟ ಸಾಧ್ಯತೆ.
ತುಲಾ: ಉದ್ಯೋಗದಲ್ಲಿ ಲಾಭ, ಕೆಲಸಗಳಲ್ಲಿ ಒತ್ತಡ, ಒತ್ತಡದ ಜೀವನ, ದಾಂಪತ್ಯದಲ್ಲಿ ವಿರಸ, ಆತ್ಮಗೌರವಕ್ಕೆ ಭಂಗ.
ವೃಶ್ಚಿಕ: ಉದ್ಯೋಗ ಪ್ರಾಪ್ತಿ, ಪಿತ್ತ ಬಾಧೆ, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ತಂದೆಯೊಂದಿಗೆ ಮನಃಸ್ತಾಪ, ಪ್ರಯಾಣದಲ್ಲಿ ಕಲಹ ಸಾಧ್ಯತೆ.
ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಗೆ ಉತ್ತಮ ಅವಕಾಶ, ದುಶ್ಚಟಗಳು ಅಧಿಕವಾಗುವುದು, ಗೌರವಕ್ಕೆ ಧಕ್ಕೆ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ.
ಮಕರ: ಪಿತ್ರಾರ್ಜಿತ ಆಸ್ತಿ ಗಲಾಟೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಸಾಲಗಾರರಿಂದ ಕಿರಿಕಿರಿ, ಕೆಲಸಗಾರರೊಂದಿಗೆ ಮನಃಸ್ತಾಪ, ವಾಹನ ಅಪಘಾತ ಸಾಧ್ಯತೆ.
ಕುಂಭ: ಉದ್ಯೋಗ ನಿಮಿತ್ತ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣ ರದ್ದು ಸಾಧ್ಯತೆ, ಕುಟುಂಬಸ್ಥರೊಂದಿಗೆ ಉತ್ತಮ ಬಾಂಧವ್ಯ, ಪ್ರೇಮ ವಿಚಾರದಲ್ಲಿ ಜಯ.
ಮೀನ: ಸ್ಥಿರಾಸ್ತಿ-ವಾಹನದ ಮೇಲೆ ಸಾಲ, ಶತ್ರುಗಳನ್ನು ಅಧಿಕ ಮಾಡಿಕೊಳ್ಳುವಿರಿ, ದಾಂಪತ್ಯದಲ್ಲಿ ವಿರಸ, ನೀವಾಡುವ ಮಾತಿನಲ್ಲಿ ಎಚ್ಚರ, ಅನಗತ್ಯ ಹೆಚ್ಚು ಖರ್ಚು ಮಾಡುವಿರಿ.