ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯಮಾಸ,
ಕೃಷ್ಣಪಕ್ಷ, ನವಮಿ ತಿಥಿ,
ಶನಿವಾರ, ಸ್ವಾತಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:42 ರಿಂದ 11:08
ಗುಳಿಕಕಾಲ: ಬೆಳಗ್ಗೆ 6:49 ರಿಂದ 8:16
ಯಮಗಂಡಕಾಲ: ಮಧ್ಯಾಹ್ನ 2:00 ರಿಂದ 3:26
Advertisement
ಮೇಷ: ಮನಸ್ಸಿನಲ್ಲಿ ಗಾಬರಿ ಆತಂಕ, ಸಂಗಾತಿಯಿಂದ ಸ್ಥಿರಾಸ್ತಿ ಪ್ರಾಪ್ತಿ, ವಾಹನ ಯೋಗ, ದೇಹದಲ್ಲಿ ನೋವು-ತುರಿಕೆ, ಆರೋಗ್ಯದಲ್ಲಿ ವ್ಯತ್ಯಾಸ.
Advertisement
ವೃಷಭ: ಸಾಲಗಾರರಿಂದ ಕಿರಿಕಿರಿ, ಶತ್ರುಗಳ ಮುಂದೆ ಅವಮಾನ, ಬಂಧುಗಳಿಂದ ಮಾನ ಅಪಮಾನ, ಪತ್ರ ವ್ಯವಹಾರಗಳಿಂದ ನಷ್ಟ-ಸಂಕಷ್ಟ, ಗರ್ಭ ದೋಷ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ.
Advertisement
ಮಿಥುನ: ಮಕ್ಕಳಿಂದ ಆರ್ಥಿಕ ನೆರವು, ಕುಟುಂಬದಲ್ಲಿ ನೆಮ್ಮದಿ, ಸ್ಥಿರಾಸ್ತಿ-ವಾಹನ ವ್ಯವಹಾರದಲ್ಲಿ ಮೋಸ, ಮನಸ್ಸಿನಲ್ಲಿ ಭೀತಿ,
ಮಾಟ-ಮಂತ್ರದ ಭಯ.
Advertisement
ಕಟಕ: ಬಂಧುಗಳಿಂದ ಸ್ಥಿರಾಸ್ತಿ ಮೋಸ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಸಾಲದ ಸುಳಿಗೆ ಸಿಲುಕುವಿರಿ, ನೆಮ್ಮದಿಗೆ ಭಂಗ, ಸಹೋದರಿಯಿಂದ ವಾಹನ ಲಾಭ.
ಸಿಂಹ: ಕಿರಿಯ ಸಹೋದರಿಯಿಂದ ಧನ ನಷ್ಟ, ಅನಗತ್ಯ ಮಾತುಗಳಿಂದ ವೈಮನಸ್ಸು, ಕುಟುಂಬದಲ್ಲಿ ಜಗಳ, ಉದ್ಯೋಗಕ್ಕಾಗಿ ತಿರುಗಾಟ, ಧಾರ್ಮಿಕ ಕಾರ್ಯದಲ್ಲಿ ಒಲವು, ಮೋಜು-ಮಸ್ತಿಗಾಗಿ ಖರ್ಚು.
ಕನ್ಯಾ: ಮಿತ್ರರಿಂದ ಸಹಕಾರ, ಆರ್ಥಿಕ ಸಮಸ್ಯೆ ಬಗೆಹರಿಯುವುದು, ದಾಂಪತ್ಯದಲ್ಲಿ ಸಂಶಯ, ಅಶಾಂತಿ ವಾತಾವರಣ, ಆಕಸ್ಮಿಕ ಅವಘಡಗಳಿಂದ ತೊಂದರೆ.
ತುಲಾ: ದುಶ್ಚಟಗಳಿಂದ ತೊಂದರೆಗೆ ಸಿಲುಕುವಿರಿ, ವಿಪರೀತ ನಷ್ಟ ಮಾಡಿಕೊಳ್ಳುವಿರಿ, ಮನಸ್ಸಿನಲ್ಲಿ ಆತಂಕ, ಯೋಚನೆಗಳಿಂದ ನಿದ್ರಾಭಂಗ, ಉದ್ಯೋಗ ಬದಲಾವಣೆಗೆ ಸದಾವಕಾಶ.
ವೃಶ್ಚಿಕ: ಕಾನೂನು ಬಾಹಿರ ಚಟುವಟಿಕೆಯಿಂದ ಲಾಭ ಗಳಿಸುವಿರಿ, ಪ್ರಯಾಣದಲ್ಲಿ ನಷ್ಟ, ತಂದೆಯಿಂದ ಅನಾನುಕೂಲ, ಮೋಜು-ಮಸ್ತಿಗಾಗಿ ಖರ್ಚು.
ಧನಸ್ಸು: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಹೋದ್ಯೋಗಿಗಳಿಂದ ತೊಂದರೆ, ಅತಿಯಾದ ಆಸೆಯಿಂದ ಕೇಡು, ಮಿತ್ರರು-ರಾಜಕೀಯ ಮುಖಂಡರಿಂದ ಮೋಸ, ಶೀತ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.
ಮಕರ: ಸ್ನೇಹಿತರಿಂದ ಉದ್ಯೋಗದ ಭರವಸೆ, ಪ್ರೇಮ ವಿಚಾರದಲ್ಲಿ ನೆಮ್ಮದಿ, ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು, ಅನಗತ್ಯ ಪ್ರಯಾಣ, ಅಧಿಕ ತಿರುಗಾಟ.
ಕುಂಭ: ಕೆಳ ದರ್ಜೆಯ ನೌಕರರ ತಪ್ಪಿಂದ ತೊಂದರೆ, ಉದ್ಯೋಗಕ್ಕೆ ಕಂಟಕವಾಗುವ ಸಾಧ್ಯತೆ, ಸ್ಥಿರಾಸ್ತಿ-ವಾಹನಕ್ಕಾಗಿ ಸಾಲ ಮಾಡುವಿರಿ, ಸಂಧಿವಾತ-ರಕ್ತದೋಷ ಸಮಸ್ಯೆ, ರೋಗ ಬಾಧೆ, ಆಯುಷ್ಯಕ್ಕೆ ಕಂಟಕವಾಗುವ ಸಾಧ್ಯತೆ.
ಮೀನ: ಮಕ್ಕಳ ವಿಚಾರವಾಗಿ ಕಲಹ, ದಾಂಪತ್ಯದಲ್ಲಿ ವೈಮನಸ್ಸು, ಆಕಸ್ಮಿಕವಾಗಿ ಗೌರವ, ಬಡ್ತಿ ಪ್ರಾಪ್ತಿ, ಸ್ನೇಹಿತರಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಮೋಸ.