Connect with us

Dina Bhavishya

ದಿನ ಭವಿಷ್ಯ: 17-11-2019

Published

on

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಭಾನುವಾರ, ಪುನರ್ವಸು ನಕ್ಷತ್ರ

ರಾಹುಕಾಲ: ಸಂಜೆ 4:29 ರಿಂದ 5:55
ಗುಳಿಕಕಾಲ: ಮಧ್ಯಾಹ್ನ 3:02 ರಿಂದ 4:29
ಯಮಗಂಡಕಾಲ: ಮಧ್ಯಾಹ್ನ 12:08 ರಿಂದ 1:35

ಮೇಷ: ಕ್ರಯ-ವಿಕ್ರಯಗಳಲ್ಲಿ ಅಲ್ಪ ಲಾಭ, ವಾಹನ ರಿಪೇರಿ, ಶತ್ರುಗಳ ಬಾಧೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸುಳ್ಳು ಹೇಳುವ ಸಾಧ್ಯತೆ, ಕೋರ್ಟ್ ಕೇಸ್‍ಗಳಲ್ಲಿ ವಿಘ್ನ.

ವೃಷಭ: ಗುರು ಹಿರಿಯರಲ್ಲಿ ಭಕ್ತಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಶತ್ರುಗಳ ನಾಶ, ಕುಟುಂಬದಲ್ಲಿ ಅಹಿತಕರ ವಾತಾವರಣ, ಬಂಧುಗಳಿಂದ ಸಹಾಯ, ಆಕಸ್ಮಿಕ ಖರ್ಚು, ಸ್ತ್ರೀಯರಿಗೆ ಅನುಕೂಲ,

ಮಿಥುನ: ದಾನ-ಧರ್ಮದಲ್ಲಿ ಆಸಕ್ತಿ, ಅನಿರೀಕ್ಷಿತ ದ್ರವ್ಯ ಲಾಭ, ಕೀರ್ತಿ ವೃದ್ಧಿ, ಆರೋಗ್ಯದಲ್ಲಿ ಚೇತರಿಕೆ, ಹೊಸ ವ್ಯವಹಾರದಲ್ಲಿ ಲಾಭ, ಯಾರನ್ನೂ ಹೆಚ್ಚು ನಂಬಬೇಡಿ, ಮಾನಸಿಕ ವ್ಯಥೆ.

ಕಟಕ: ಅಧಿಕವಾದ ಖರ್ಚು, ಪುಣ್ಯಕ್ಷೇತ್ರ ದರ್ಶನ, ಕಾರ್ಯ ಸಾಧನೆಗಾಗಿ ತಿರುಗಾಟ, ಸ್ಥಿರಾಸ್ತಿ ಮಾರಾಟ ಸಾಧ್ಯತೆ, ಮನಸ್ಸಿನಲ್ಲಿ ಗೊಂದಲ, ಅನ್ಯ ಜನರಲ್ಲಿ ವೈಮನಸ್ಸು, ವ್ಯಾಪಾರದಲ್ಲಿ ಲಾಭ.

ಸಿಂಹ: ಪ್ರಿಯ ಜನರ ಸಂದರ್ಶನ, ಸ್ತ್ರೀಯರಿಗೆ ಅನುಕೂಲ, ವ್ಯಾಪಾರ-ಉದ್ಯೋಗದಲ್ಲಿ ಲಾಭ, ಸ್ಥಿರಾಸ್ತಿ ಸಂಪಾದನೆ, ಮನಸ್ಸಿನಲ್ಲಿ ಭಯ, ಆರೋಗ್ಯದಲ್ಲಿ ಏರುಪೇರು, ಕಾರ್ಯದಲ್ಲಿ ವಿಳಂಬ.

ಕನ್ಯಾ: ಮಾಡಿದ ಕೆಲಸ ಕಾರ್ಯಗಳಲ್ಲಿ ವಿಳಂಬ, ವೃಥಾ ಧನವ್ಯಯ, ಕೆಲಸ ಕಾರ್ಯಗಳಲ್ಲಿ ಅಪಜಯ, ದುಷ್ಟ ಜನರ ಸಹವಾಸದಿಂದ ತೊಂದರೆ, ಕೃಷಿಯಲ್ಲಿ ಸಾಧಾರಣ ಲಾಭ, ವಸ್ತ್ರಾಭರಣ ಖರೀದಿ ಯೋಗ.

ತುಲಾ: ಆದಾಯಕ್ಕಿಂತ ಖರ್ಚು ಹೆಚ್ಚು, ಕೆಟ್ಟ ಮಾತುಗಳನ್ನಾಡುವಿರಿ, ಇಲ್ಲ ಸಲ್ಲದ ಅಪವಾದ ನಿಂದನೆ, ಆತ್ಮೀಯರಿಂದ ವಿರೋಧ, ಆಕಸ್ಮಿಕ ಧನ ಲಾಭ, ವಾಹನ ಅಪಘಾತದಿಂದ ತೊಂದರೆ.

ವೃಶ್ಚಿಕ: ವಾಸ ಗೃಹದಲ್ಲಿ ತೊಂದರೆ, ದಾಂಪತ್ಯದಲ್ಲಿ ಅನ್ಯೋನ್ಯತೆ, ಉತ್ತಮ ಬುದ್ಧಿಶಕ್ತಿ, ವಿವಾಹ ಯೋಗ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೇಹದಲ್ಲಿ ಆಲಸ್ಯ, ಮಾನಸಿಕ ನೆಮ್ಮದಿಗೆ ಧಕ್ಕೆ.

ಧನಸ್ಸು: ವಿಪರೀತ ವ್ಯಸನ, ದೂರ ಪ್ರಯಾಣ, ನಾನಾ ರೀತಿಯ ಚಿಂತೆ, ಸುಖ ಭೋಜನ, ಕೈ ಹಾಕಿದ ಕೆಲಸದಲ್ಲಿ ಪ್ರಗತಿ, ಚಿನ್ನಾಭರಣ ಖರೀದಿ ಯೋಗ, ಸೈಟ್-ವಾಹನ ಖರೀದಿಗೆ ಸಹಕಾರ.

ಮಕರ: ವ್ಯಾಪಾರ-ಉದ್ಯೋಗದಲ್ಲಿ ಲಾಭ, ಹಣಕಾಸು ಅನುಕೂಲ, ಇಷ್ಟಾರ್ಥ ಸಿದ್ಧಿ, ಋಣ ಬಾಧೆ, ದುಷ್ಟ ಜನರಿಂದ ತೊಂದರೆ, ಬಂಧುಗಳಲ್ಲಿ ಮನಃಸ್ತಾಪ, ಯತ್ನ ಕಾರ್ಯದಲ್ಲಿ ವಿಘ್ನ.

ಕುಂಭ: ಗೃಹ-ಸ್ಥಾನ ಬದಲಾವಣೆ, ಅಕಾಲ ಭೋಜನ, ಕುಟುಂಬದಲ್ಲಿ ಕಲಹ, ಅತಿಯಾದ ನಿದ್ರೆ, ವ್ಯಾಸಂಗಕ್ಕೆ ತೊಂದರೆ, ಮಾನಸಿಕ ಅಶಾಂತಿ, ಸ್ಥಿರಾಸ್ತಿ ವಿಚಾರವಾಗಿ ಸಮಸ್ಯೆ.

ಮೀನ: ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಏರುಪೇರು, ಪರಸ್ತ್ರೀಯಿಂದ ಧನ ಲಾಭ,ನಾನಾ ರೀತಿಯಲ್ಲಿ ಧನಾಗಮನ, ವಾರಾಂತ್ಯದಲ್ಲಿ ಆರೋಗ್ಯದಲ್ಲಿ ಚೇತರಿಕೆ.

Click to comment

Leave a Reply

Your email address will not be published. Required fields are marked *